ಉದಯವಾಹಿನಿ, ಲಂಡನ್: ತನ್ನ ಲೈಂಗಿಕ ಗೀಳನ್ನು ಪೂರೈಸಲು ಸರ್ಜನ್ (Surgeon) ಆಗಿರುವ ವೈದ್ಯನೊಬ್ಬ ಉದ್ದೇಶಪೂರ್ವಕವಾಗಿ ತನ್ನ ಕಾಲುಗಳನ್ನು ಕತ್ತರಿಸಿಕೊಂಡು, ನಂತರ ವಿಮಾ (Insurance) ಕಂಪನಿಗಳಿಂದ ಸುಮಾರು £500,000 (ಸುಮಾರು ರೂ. 5 ಕೋಟಿ) ಹಣವನ್ನು ಪಡೆದುಕೊಂಡಿರುವ ಘಟನೆ ಯುಕೆನಲ್ಲಿ ನಡೆದಿದೆ. ಅಶ್ಲೀಲ ಚಿತ್ರಗಳು ಮತ್ತು ವಂಚನೆ ಮಾಡಿದ್ದನ್ನು ತಪ್ಪೊಪ್ಪಿಕೊಂಡ ನಂತರ ಅವನಿಗೆ ಜೈಲು ಶಿಕ್ಷೆ ವಿಧಿಸಲಾಯಿತು.
ವರದಿಯ ಪ್ರಕಾರ, ಸರ್ಜನ್ ನೀಲ್ ಹಾಪರ್ ಎಂಬಾತ 2013 ರಿಂದ ರಾಯಲ್ ಕಾರ್ನ್‌ವಾಲ್ ಆಸ್ಪತ್ರೆಗಳ NHS ಟ್ರಸ್ಟ್‌ನಲ್ಲಿ ಕೆಲಸ ನಿರ್ವಾಹಿಸಿದ್ದಾರೆ. ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಅವನನ್ನು ವೈದ್ಯಕೀಯ ನೋಂದಣಿಯಿಂದ ಅಮಾನತುಗೊಳಿಸಲಾಯಿತು. ಹಾಪರ್ ವಿರುದ್ಧ ಎರಡು ವಂಚನೆ ಆರೋಪಗಳನ್ನು ದಾಖಲಿಸಲಾಯಿತು. ಅವಿವಾ ಮತ್ತು ಓಲ್ಡ್ ಮ್ಯೂಚುಯಲ್ ಹೆಲ್ತ್ ಎಂಬ ವಿಮಾ ಕಂಪನಿಗಳಿಗೆ ಸುಳ್ಳು ಹಕ್ಕುಗಳನ್ನು ಸಲ್ಲಿಸಿದರು. ಸೆಪ್ಸಿಸ್ ಕಾರಣದಿಂದಾಗಿ ತಮ್ಮ ಕಾಲುಗಳನ್ನು ಕತ್ತರಿಸಲಾಗಿದೆ ಎಂದು ಹೇಳಿದ್ದಾರೆ. ಆದರೆ, ಏಪ್ರಿಲ್ 2019 ರಲ್ಲಿ, ಹಾಪರ್ ಡ್ರೈ ಐಸ್ ಬಳಸಿ ತನ್ನ ಕಾಲುಗಳನ್ನು ಹೆಪ್ಪುಗಟ್ಟಿಸಿದ್ದರು.
ವಿಮಾ ಹಕ್ಕುಗಳ ಪರಿಣಾಮವಾಗಿ £466,653.81 (ಸುಮಾರು ರೂ. 4.85 ಕೋಟಿ) ಪಾವತಿಗಳು ಬಂದವು.
ಈ ಹಣವನ್ನು ಅವರು ಕ್ಯಾಂಪರ್‌ವ್ಯಾನ್, ಹಾಟ್ ಟಬ್, ಮರದ ಬರ್ನರ್ ಮತ್ತು ಕಟ್ಟಡ ನಿರ್ಮಾಣ ಕಾರ್ಯಗಳಿಗೆ ಖರ್ಚು ಮಾಡಿದರು. ಲೈಂಗಿಕ ಆಸಕ್ತಿಯ ಗೀಳು ತನ್ನ ಕಾಲನ್ನು ಕತ್ತರಿಸುವಂತೆ ಮಾಡಿದೆ. ಹಾಪರ್ ತೀವ್ರ ಅಶ್ಲೀಲ ಚಿತ್ರಗಳನ್ನು ಹೊಂದಿದ್ದಕ್ಕಾಗಿ ಮೂರು ಆರೋಪಗಳನ್ನು ಒಪ್ಪಿಕೊಂಡಿದ್ದಾನೆ. ಈ ಚಿತ್ರಗಳು ಯೂನಚ್‌ಮೇಕರ್ ಎಂಬ ವೆಬ್‌ಸೈಟ್‌ಗೆ ಸಂಬಂಧಿಸಿವೆ. ಅಲ್ಲಿ ಪುರುಷರು ಸ್ವಇಚ್ಛೆಯಿಂದ ತಮ್ಮ ಜನನಾಂಗಗಳನ್ನು ತೆಗೆದುಹಾಕುತ್ತಿದ್ದರು. ಈ ವೆಬ್‌ಸೈಟ್ ನಡೆಸುತ್ತಿದ್ದ ಮಾರಿಯಸ್ ಗುಸ್ತಾವ್ಸನ್ ಎಂಬಾತ, 2024 ರಲ್ಲಿ ಓಲ್ಡ್ ಬೈಲಿಯಲ್ಲಿ ತೀವ್ರವಾದ ದೇಹ ಮಾರ್ಪಾಡು ಮಾಡಿದ್ದಕ್ಕಾಗಿ ಕನಿಷ್ಠ 22 ವರ್ಷಗಳ ಜೈಲು ಶಿಕ್ಷೆಯೊಂದಿಗೆ ಜೀವಾವಧಿ ಶಿಕ್ಷೆಗೆ ಗುರಿಯಾದರು. ಹಾಪರ್, ವೆಬ್‌ಸೈಟ್‌ನಿಂದ £10 (ಸುಮಾರು ರೂ. 1,100) ಮತ್ತು £35 (ರೂ. 4,100) ಗೆ ಮೂರು ವಿಡಿಯೊಗಳನ್ನು ಖರೀದಿಸಿದರು. ವರದಿಯ ಪ್ರಕಾರ, ಗುಸ್ಟಾವ್ಸನ್‌ನೊಂದಿಗೆ ತಮ್ಮ ಕಾಲು ಕತ್ತರಿಸುವಿಕೆಯ ಬಗ್ಗೆ ಚರ್ಚಿಸುವ ಸುಮಾರು 1,500 ಸಂದೇಶಗಳನ್ನು ವಿನಿಮಯ ಮಾಡಿಕೊಂಡಿದ್ದಾಗಿ ತಿಳಿದುಬಂದಿದೆ.
