ಉದಯವಾಹಿನಿ, ಲಾಹೋರ್(ಪಾಕಿಸ್ತಾನ): ವ್ಯಕ್ತಿಯೊಬ್ಬ ತನ್ನ ಪತ್ನಿ ಮತ್ತು ಐದು ಮಂದಿ ಮಕ್ಕಳನ್ನು ನಿರ್ದಯವಾಗಿ ಕೊಂದು ಹಾಕಿದ ಘಟನೆ ಪಾಕಿಸ್ತಾನದ ಪಂಜಾಬ್ ಪ್ರಾಂತ್ಯದಲ್ಲಿ ಇಂದು (ಸೋಮವಾರ) ಬೆಳಕಿಗೆ ಬಂದಿದೆ. ಇದೊಂದು ಮರ್ಯಾದಾ ಹತ್ಯೆ ಪ್ರಕರಣ ಎಂದು ಅಲ್ಲಿನ ಪೊಲೀಸರು ತಿಳಿಸಿದ್ದಾರೆ. ಲಾಹೋರ್‌ನಿಂದ ಅಂದಾಜು 200 ಕಿಲೋ ಮೀಟರ್ ದೂರದಲ್ಲಿರುವ ಸರ್ಗೋಧಾ ಜಿಲ್ಲೆಯ ಹಳ್ಳಿಯಲ್ಲಿ ಘಟನೆ ನಡೆದಿದೆ.

ತನ್ನ ಪತ್ನಿಗೆ ಹತ್ತಿರದ ಹಳ್ಳಿಯ ವ್ಯಕ್ತಿಯೊಂದಿಗೆ ಸಂಬಂಧವಿದೆ ಎಂದು ಶಂಕೆ ವ್ಯಕ್ತಪಡಿಸಿ ಮುಹಮ್ಮದ್ ಯಾಸೀನ್ ಎಂಬಾತ ಈ ಕೃತ್ಯ ಎಸಗಿದ್ದಾನೆ. 45 ವರ್ಷದ ಪತ್ನಿ, 15 ವರ್ಷದ ಮಗಳು ಮತ್ತು ಒಂದು ವರ್ಷದಿಂದ 12 ವರ್ಷ ವಯಸ್ಸಿನ ನಾಲ್ವರು ಗಂಡು ಮಕ್ಕಳು ಹತ್ಯೆಗೀಡಾಗಿದ್ದಾರೆ. ಯಾಸೀನ್‌ನನ್ನು ಬಂಧಿಸಲಾಗಿದ್ದು, ಹೇಳಿಕೆ ದಾಖಲಿಸಲಾಗಿದೆ ಎಂದು ಅಲ್ಲಿನ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.”ನನ್ನ ಹೆಂಡತಿಗೆ ಅನೈತಿಕ ಸಂಬಂಧವಿದೆ. ಆಕೆ ತನ್ನ ಪ್ರಿಯಕರನೊಂದಿಗೆ ಓಡಿಹೋಗಲು ಯೋಜಿಸುತ್ತಿದ್ದಳು. ಇದನ್ನು ತಿಳಿದ ನಂತರ ನಾನು ಅವಳನ್ನು ಮತ್ತು ಎಲ್ಲಾ ಮಕ್ಕಳನ್ನು ಕೊಲ್ಲುವ ನಿರ್ಧಾರ ಮಾಡಿದೆ. ಆ ಮಕ್ಕಳಲ್ಲಿ ಕೆಲವರು ನನ್ನವರು ಅಲ್ಲದಿರಬಹುದು” ಎಂದು ಆತ ನೀಡಿದ್ದಾನೆ ಎಂದು ಪೊಲೀಸರು ಹೇಳಿದ್ದಾರೆ.ಮಧ್ಯರಾತ್ರಿ ಹೆಂಡತಿ ಮತ್ತು ಮಕ್ಕಳು ಸುಖ ನಿದ್ರೆಯಲ್ಲಿದ್ದಾಗ ಕೊಡಲಿಯಿಂದ ಹಲ್ಲೆ ಮಾಡಿ ಕೊಂದಿರುವುದಾಗಿಯೂ ಯಾಸೀನ್ ತಿಳಿಸಿದ್ದಾನೆ.
“ಅವರನ್ನು ಕೊಂದ ಬಳಿಕ ನಾನೂ ಕೂಡ ಆತ್ಮಹತ್ಯೆ ಮಾಡಿಕೊಳ್ಳಲು ಪ್ರಯತ್ನಿಸಿ ಗಾಯಗೊಂಡೆ” ಎಂದು ಹೇಳಿದ್ದಾನೆ.

Leave a Reply

Your email address will not be published. Required fields are marked *

error: Content is protected !!