ಉದಯವಾಹಿನಿ, ಫಿಲಿಪೈನ್ಸ್: ಬೆಳಗ್ಗೆದ್ದು ಹೊರಗೆ ಬಂದಾಗ ಮಾನವ ಗಾತ್ರದ ಬಾವಲಿ ನೋಡಿದ್ರೆ ಹೇಗಾಗಬಹುದು? ಬಹುತೇಕರು ಕಿರುಚಬಹುದು ಅಥವಾ ಎದ್ನೋ ಬಿದ್ನೋ ಅಂತಾ ಗಾಬರಿಯಾಗಿ ಓಡಿಹೋಗಬಹುದು. ಆದರೆ, ಫಿಲಿಪೈನ್ಸ್‌ನ ವ್ಯಕ್ತಿಯೊಬ್ಬ ಮಾತ್ರ ವಿಭಿನ್ನವಾಗಿ ಪ್ರತಿಕ್ರಿಯಿಸಿದನು. ಆ ಸ್ಥಳದಿಂದ ಪಲಾಯನ ಮಾಡುವ ಬದಲು, ಅವನು ಆ ಅಸಾಮಾನ್ಯ ದೃಶ್ಯವನ್ನು ಸೆರೆಹಿಡಿದು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದು, ಈ ಸುದ್ದಿ ಭಾರಿ ವೈರಲ್ ಆಗಿದೆ. ಇದನ್ನು ನೋಡಿದ ಬಳಕೆದಾರರಲ್ಲಿ ಕೆಲವರು ಅಚ್ಚರಿಗೊಂಡರೆ, ಇನ್ನೂ ಕೆಲವರು ಭಯಭೀತರಾದರು.
ಅಂದಹಾಗೆ, ವೈರಲ್ ಆಗಿರುವ ಈ ಚಿತ್ರವು ಇತ್ತೀಚಿನದಲ್ಲ. 2018 ರಲ್ಲಿ ಮೊದಲು ಕಾಣಿಸಿಕೊಂಡ ಈ ಫೋಟೋ ಇದೀಗ ಮತ್ತೆ ಸದ್ದು ಮಾಡುತ್ತಿದೆ. ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡ ವೈರಲ್ ಫೋಟೋದಲ್ಲಿ ಮನೆಯ ಹೊರಗಿನ ತಂತಿಯಿಂದ ತಲೆಕೆಳಗಾಗಿ ನೇತಾಡುತ್ತಿರುವ ಬೃಹತ್ ಬಾವಲಿಯನ್ನು ತೋರಿಸಲಾಗಿದೆ. ಅದರ ರೆಕ್ಕೆಗಳು ಒಳಗೆ ಸಿಕ್ಕಿಕೊಂಡಿವೆ. ಆದರೆ, ಇನ್ನೂ ಅದರ ಅಗಾಧವಾದ ಚೌಕಟ್ಟನ್ನು ತೋರಿಸುತ್ತಿದೆ.

ಮೊದಲ ಬಾರಿಗೆ ಕಣ್ಣಾಡಿಸಿದಾಗ ಇದು ಬಹುತೇಕ ಅವಾಸ್ತವಿಕವೆಂದು ತೋರುತ್ತದೆ. ಆದರೆ, ಇದು ನಿಜ. ಈ ಮಾನವ ಗಾತ್ರದ ಬಾವಲಿ ಪ್ರಪಂಚದಾದ್ಯಂತದ ಜನರ ಗಮನವನ್ನು ತ್ವರಿತವಾಗಿ ಸೆಳೆಯಿತು. ಅನೇಕ ಸಾಮಾಜಿಕ ಮಾಧ್ಯಮ ಬಳಕೆದಾರರು ಈ ಫೋಟೋ ನೋಡಿ ಆಘಾತಕ್ಕೊಳಗಾದರು. ಇತರರು ಅಂತಹ ಬಾವಲಿಗಳು ಅಸ್ತಿತ್ವದಲ್ಲಿವೆ ಎಂದು ತಿಳಿದು ಆಕರ್ಷಿತರಾದರು.

Leave a Reply

Your email address will not be published. Required fields are marked *

error: Content is protected !!