ಉದಯವಾಹಿನಿ, ವಾಷಿಂಗ್ಟನ್: ಅಮೆರಿಕದ ಸಾಮಾಜಿಕ ಮಾಧ್ಯಮ ಪ್ರಭಾವಿ ಸ್ಟೆಫನಿ ಮ್ಯಾಟೊ ಕೆಲವು ಅಸಾಂಪ್ರದಾಯಿಕ ಮತ್ತು ವಿವಾದಾತ್ಮಕ ಉತ್ಪನ್ನಗಳನ್ನು ಆನ್‌ಲೈನ್‌ನಲ್ಲಿ ಮಾರಾಟ ಮಾಡುವುದಕ್ಕೆ ಹೆಸರುವಾಸಿ. ಹೂಸು ಜಾರು ಬೆವರು (Sweat) ಇತ್ಯಾದಿ ವಿಚಿತ್ರಗಳನ್ನು ಮಾರಿದ ಬಳಿಕ ಇದೀಗ ಮತ್ತೊಂದು ವಿಚಿತ್ರ ಉದ್ಯಮದೊಂದಿಗೆ ಸುದ್ದಿಯಲ್ಲಿದ್ದಾಳೆ. ಈ ಬಾರಿ, ಹಲ್ಲು ಇಲ್ಲದ ಪುರುಷರಿಗೆ ಆಹಾರವನ್ನು ಅಗಿದು ಕಳುಹಿಸುವ ಮೂಲಕ ಸ್ಟೆಫನಿ ವಾರಕ್ಕೆ $ 50,000 (ಸುಮಾರು 44 ಲಕ್ಷ ರೂ.) ಗಳಿಸುತ್ತಿದ್ದಾಳೆ. ಹೌದು, ಇದು ಅಸಹ್ಯ ಎಂದೆನಿಸಿದರೂ ಸತ್ಯ. ತಾನು ಈ ರೀತಿ ಉತ್ಪನ್ನ ಮಾರಾಟ ಮಾಡುತ್ತಿರುವುದಾಗಿ ಇನ್‌ಸ್ಟಾಗ್ರಾಮ್‌ನಲ್ಲಿ ವಿಡಿಯೊ ಮೂಲಕ ತಿಳಿಸಿದ್ದಾಳೆ. ಈ ಉದ್ಯಮವನ್ನು ನಡೆಸುತ್ತಿರುವ ಬಗ್ಗೆ ಸ್ಟೆಫನಿ ಹಂಚಿಕೊಂಡಿದ್ದಾಳೆ.
ಈ ವಿಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ. ಹಲ್ಲುರಹಿತ ಪುರುಷರಿಗೆ ಆಹಾರವನ್ನು ಪ್ಯಾಕ್ ಮಾಡಿ ಆನ್‌ಲೈನ್‌ನಲ್ಲಿ ಮಾರಾಟ ಮಾಡುತ್ತಿರುವುದಾಗಿ ತಿಳಿಸಿದ್ದಾಳೆ. ಈ ಅಭ್ಯಾಸವನ್ನು ಮಾಮಾ ಬರ್ಡಿಂಗ್ ಎಂದು ಕರೆಯಲಾಗುತ್ತದೆ. ಆಹಾರವನ್ನು ಸ್ವತಃ ಜಗಿಯುವ ಆಕೆ ನಂತರ ಅದನ್ನು ಪ್ಯಾಕ್ ಮಾಡುತ್ತಾಳೆ. ಅಗಿಯಲು ಸಾಧ್ಯವಾಗದ ಜನರಿಗೆ ಇದನ್ನು ಕಳುಹಿಸಲಾಗುತ್ತದೆ ಎಂದು ಸ್ಟೆಫನಿ ಹೇಳಿದ್ದಾಳೆ. ಗ್ರಾಹಕರು ತಮ್ಮ ನೆಚ್ಚಿನ ತಿಂಡಿಗೆ ಆರ್ಡರ್ ಮಾಡಿದ್ದನ್ನು ಆಕೆ ಹಂಚಿಕೊಂಡಿದ್ದಾಳೆ. ಕಳೆದ ಎರಡು ವರ್ಷಗಳಿಂದ ಕೆಲವರು ಗ್ವಾಕಮೋಲ್ ಅನ್ನು ಮಾತ್ರ ತಿನ್ನಲು ಸಾಧ್ಯವಾಗುತ್ತಿದೆ. ಆದ್ದರಿಂದ ಈಗ ಅವರ ಜೀವನದಲ್ಲಿ ಬದಲಾವಣೆ ತರಲು ನನಗೆ ಅವಕಾಶ ಸಿಕ್ಕಿದ್ದಕ್ಕೆ ನಾನು ನಿಜವಾಗಿಯೂ ಕೃತಜ್ಞಳಾಗಿದ್ದೇನೆ ಎಂದು ಆಕೆ ಚಿಪ್ಸ್ ಮತ್ತು ಗ್ವಾಕಮೋಲ್ ತಯಾರಿಸುತ್ತಾ ಹೇಳಿದಳು.
