ಉದಯವಾಹಿನಿ, ಪ್ರಜ್ವಲ್ ದೇವರಾಜ್ ನಟನೆಯ ವಿಭಿನ್ನ ಕಥಾಹಂದರವಿರುವ ಸಿನಿಮಾ `ಕರಾವಳಿ’ ಈ ಚಿತ್ರದ ವಿಶೇಷ ದೃಶ್ಯದ ಶೂಟಿಂಗ್ ಅನ್ನು ಬೆಂಗಳೂರಿನ ಹೊರವಲಯದಲ್ಲಿ ಸೆಟ್ ಹಾಕಿ ಚಿತ್ರೀಕರಣ ಮಾಡಲಾಗಿದೆ. ಈ ವೇಳೆ ನಾಯಕ ಪ್ರಜ್ವಲ್ ದೇವರಾಜ್, ನಾಯಕಿ ಸಂಪದಾ, ನಟ ಮಿತ್ರ, ಶ್ರೀಧರ್, ನಿರ್ದೇಶಕ ರವಿ ಗಾಣಿಗ ಸೇರಿ ಇಡೀ ಚಿತ್ರತಂಡ ಹಾಜರಿತ್ತು. ಕರಾವಳಿ ಸಿನಿಮಾದ ವಿಶೇಷ ದೃಶ್ಯದ ಶೂಟಿಂಗ್ ವೇಳೆ ʻ ನಟ ಪ್ರಜ್ವಲ್ ದೇವರಾಜ್ ಸಾಕಷ್ಟು ವಿಚಾರಗಳನ್ನ ಹಂಚಿಕೊಂಡಿದ್ದಾರೆ.
ʻಕರಾವಳಿʼ ಸಿನಿಮಾದ ಶೂಟಿಂಗ್ ಅನ್ನು ಕರಾವಳಿ ಭಾಗದಲ್ಲೇ 99 ಭಾಗದ ಚಿತ್ರೀಕರಣ ಮಾಡಲಾಗಿದೆ. ಇದೊಂದು ಸೀನ್ ಮಾತ್ರ ಬೆಂಗಳೂರಿನಲ್ಲಿ (Bengaluru) ಮಾಡ್ತಿದ್ದೀವಿ. ಕರಾವಳಿ ಸಿನಿಮಾ ನನ್ನ ಕರಿಯರ್‌ನಲ್ಲೇ ಫಿಸಿಕಲಿ ಮೆಂಟಲಿ ಸ್ಟ್ರೇನಿಂಗ್ ಕ್ಯಾರೆಕ್ಟರ್. ಸಿನಿಮಾ ಶೂಟಿಂಗ್ ವೇಳೆ ಸಾಕಷ್ಟು ಇಂಜುರಿ.. ಬ್ರೇಕ್ಸ್.. ಕಟ್ಸ್ ಆಯ್ತು ಸರಿ ಮಾಡ್ಕೊಂಡು ಚಿತ್ರೀಕರಣ ಮಾಡಿದ್ದೇವೆ. ತುಂಬಾ ಇಷ್ಟಪಟ್ಟು ಕಷ್ಟಪಟ್ಟು ಮಾಡಿದ ಸಿನಿಮಾ ಕರಾವಳಿಯಾಗಿದೆ. ಅಮ್ಮ ನನ್ನ ಯಾವುದೇ ಶೂಟಿಂಗ್ ಇದ್ದಾಗಲೂ ಸೆಟ್‌ಗೆ ಬರುತ್ತಿದ್ದರು. ಆದರೆ ಈಗ ಅಮ್ಮನಿಗೆ ಹುಷಾರಿಲ್ಲ ಹಾಗಾಗಿ ಅಮ್ಮನಿಗಾಗಿ ಕೆಲ ದೃಶ್ಯಗಳನ್ನ ತಗೊಂಡು ಹೋಗಿ ತೋರಿಸಿದೆ. ಈ ಸಿನಿಮಾದ ಕೆಲವು ದೃಶ್ಯ ನೋಡಿ ಶಾಕ್ ಆದ್ರು. ಅಮ್ಮ ಪ್ರಸಂಶೆ ಕೊಟ್ಟಿದ್ದಾರೆ. ಅಷ್ಟೇ ಸಾಕು ಎನ್ನಿಸಿತು ಎಂದಿದ್ದಾರೆ ನಟ ಪ್ರಜ್ವಲ್ ದೇವರಾಜ್.
