ಉದಯವಾಹಿನಿ, ನವದೆಹಲಿ: ರೇಸ್ 2, ಮರ್ಡರ್ 2, ಹೌಸ್ ಫುಲ್ 2 ಸೇರಿದಂತೆ ಅನೇಕ ಹಿಟ್ ಸಿನಿಮಾದಲ್ಲಿ ಅಭಿನಯಿಸಿದ್ದ ನಟಿ ಜಾಕ್ವೆಲಿನ್ ಫರ್ನಾಂಡಿಸ್ ಅವರು ಸದಾ ಒಂದಲ್ಲ ಒಂದು ವಿಚಾರದಿಂದ ಸುದ್ದಿಯಲ್ಲಿರುತ್ತಾರೆ. ರಿಯಾಲಿಟಿ ಶೋ, ಆಲ್ಬಂ ಸಾಂಗ್ ಮೂಲಕವು ಪ್ರಖ್ಯಾತಿ ಪಡೆದಿದ್ದ ನಟಿ ಜಾಕ್ವೆಲಿನ್ ಅವರು ಭಾರತೀಯ ಸಿನಿಮಾ ಇಂಡಸ್ಟ್ರಿಯಲ್ಲಿ ಅನೇಕ ಸ್ಟಾರ್ ನಟರ ಜೊತೆಗೆ ಅಭಿನಯಿಸಿ ಸೈ ಎನಿಸಿಕೊಂಡಿದ್ದಾರೆ. 2006ರಲ್ಲಿ ಮಿಸ್ ಯುನಿವರ್ಸ್ ಶ್ರೀಲಂಕಾ ಪಟ್ಟವನ್ನು ಮುಡಿಗೇರಿಸಿಕೊಂಡ ನಟಿ ಜಾಕ್ವೆಲಿನ್ ಅವರು ಆಗಾಗ ಫ್ಯಾಷನ್ ಇವೆಂಟ್ , ಇತರ ಕಾರ್ಯಕ್ರಮದಲ್ಲಿ ಕೂಡ ಕಾಣಿಸಿಕೊಳ್ಳುತ್ತಾರೆ. ಈ ಬಾರಿ ಅವರು ದೆಹಲಿಯಲ್ಲಿ ನಡೆದ ಫ್ಯಾಷನ್ ಶೋ ಕೇಸ್ ಕಾರ್ಯಕ್ರಮ ಒಂದರಲ್ಲಿ ಭಾಗಿಯಾಗಿದ್ದು ಅವರ ಹೊಳೆಯುವ ಗೌನ್ ನಲ್ಲಿ ಪ್ರಿನ್ಸೆಸ್ ಲುಕ್ ನಿಂದಾಗಿ ಎಲ್ಲರ ಗಮನ ಸೆಳೆದಿದ್ದಾರೆ. ಹಳೆ ಕಾಲದ ಉಡುಗೆಯಿಂದ ಪ್ರೇರೆಪಿತವಾಗಿ ಈ ಡ್ರೆಸ್ ಅನ್ನು ರೆಡಿ ಮಾಡಲಾಗಿದ್ದು ವಿಭಿನ್ನವಾದ ವಿನ್ಯಾಸದಿಂದಾಗಿ ಈ ಡ್ರೆಸ್ ಬಹಳ ಹೈಲೈಟ್ ಆಗಿದೆ. ಈ ಮೂಲಕ ನಟಿ ಜಾಕ್ವೆಲಿನ್ ಅವರು ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಕೆಲವು ಫೋಟೊ ಗಳು ಸೋಶಿಯಲ್ ಮಿಡಿಯಾದಲ್ಲಿ ವೈರಲ್ ಆಗಿದೆ.

ದೆಹಲಿಯಲ್ಲಿ ಇತ್ತೀಚೆಗೆ ನಡೆದ ಫ್ಯಾಷನ್ ಮೀಟ್‌ಗಳ ತಂತ್ರಜ್ಞಾನ ಪ್ರದರ್ಶನದಲ್ಲಿ ಶೋಸ್ಟಾಪರ್ ಆಗಿ ನಟಿ ಜಾಕ್ವೆಲಿನ್ ಫರ್ನಾಂಡಿಸ್ ಅವರು ಕಾಣಿಸಿಕೊಂಡಿದ್ದಾರೆ. ನಟಿ ಜಾಕ್ವೆಲಿನ್ ಫೆರ್ನಾಂಡಿಸ್ ಅವರು ಕ್ರಿಸ್ಟಲ್ ಕಲರ್ ಗೌನ್ ಧರಿಸಿದ್ದು ಕ್ವೀನ್ ನಂತೆ ಕಂಗೊಳಿಸಿದ್ದಾರೆ. ರೋಹಿತ್ ಗಾಂಧಿ ಮತ್ತು ರಾಹುಲ್ ಖನ್ನಾ ಅವರು ಈ ಗೌನ್ ಅನ್ನು ವಿನ್ಯಾಸಗೊಳಿಸಿದ್ದು ಅವರ ಮೋಹಕ ನೋಟ ಹಾಗೂ ಮೈಮಾಟಕ್ಕೆ ಒಳ್ಳೆ ಕಾಂಬಿನೇಶನ್ ನೀಡಿದಂತಿದೆ ಎನ್ನಬಹುದು.

ದೆಹಲಿಯ ಹಯಾಟ್‌ನಲ್ಲಿ ನಡೆದ ಮೊಟೊರೊಲಾ ಮತ್ತು ಫ್ಲಿಪ್‌ಕಾರ್ಟ್‌ನ ದಿ ಬ್ರಿಲಿಯಂಟ್ ಕಲೆಕ್ಷನ್‌ನ ವಿಶೇಷ ಬಿಡುಗಡೆ ಸಮಾರಂಭದಲ್ಲಿ ನಟಿ ಜಾಕ್ವೆಲಿನ್ ಫರ್ನಾಂಡಿಸ್ ಅವರು ಭಾಗಿಯಾಗಿದ್ದರು. ಇದೇ ಕಾರ್ಯಕ್ರಮಕ್ಕೆ ರೋಹಿತ್ ಗಾಂಧಿ ಹಾಗೂ ರಾಹುಲ್ ಖನ್ನಾ ಅವರು ವಿನ್ಯಾಸ ಮಾಡಿದ್ದ ಮಿನುಗುವ ಕಸ್ಟಮ್ ಗೌನ್ ಅನ್ನು ಧರಿಸಿ ಗ್ಲಾಮರಸ್ ಆಗಿ ಕಂಡಿದ್ದಾರೆ. ಇವರ ಗೌನ್ ನಲ್ಲಿ ಕ್ರಿಸ್ಟಲ್ ಪೀಸ್ ಗಳಿದ್ದು ಅದು ಬೆಳಕಿಗೆ ಮಿನುಗುತ್ತಾ ಸುಂದರವಾಗಿ ಕಾಣುತ್ತಿತ್ತು. ಈ ಗೌನಿನ ಟೆಕ್ ಶ್ಚರ್‌ಗಳು ಹಳೆಯ-ಹಾಲಿವುಡ್ ಸಿನಿಮಾದಿಂದ ಪ್ರೇರಿತವಾಗಿ ಮಾಡಿದಂತ್ತಿತ್ತು.

Leave a Reply

Your email address will not be published. Required fields are marked *

error: Content is protected !!