ಉದಯವಾಹಿನಿ, ಐವಿಎಫ್ ಮೂಲಕ 40ನೇ ವಯಸ್ಸಿನಲ್ಲಿ ಗರ್ಭಿಣಿಯಾಗಿ ಅವಳಿ ಮಕ್ಕಳಿಗೆ ಜನ್ಮ ನೀಡುವ ಖುಷಿಯಲ್ಲಿದ್ದ ನಟಿ ಭಾವನಾ ರಾಮಣ್ಣಗೆ ಆಘಾತವೂ ಆಗಿದೆ. ಹೆಣ್ಣು ಮಗುವಿಗೆ ಜನ್ಮ ನೀಡಿ ನಟಿ ಆರೋಗ್ಯವಾಗಿದ್ದರೆ, ಮತ್ತೊಂದು ಮಗು ಹುಟ್ಟಿದಾಗಲೇ ತೀರಿಕೊಂಡಿದೆ. ನಟಿ ಭಾವನ ರಾಮಣ್ಣಗೆ ಎರಡು ವಾರಗಳ ಹಿಂದೆ ಹೆರಿಗೆಯಾಗಿದ್ದು, ಹೆಣ್ಣು ಮಗುವಿಗೆ ತಾಯಿಯದ ನಟಿ ಭಾವನಾ ಅವರು ಸದ್ಯ ಆರೋಗ್ಯವಾಗಿದ್ದಾರೆ. ಆದ್ರೆ ಒಂದು ಮಗು ನಿಧನವಾಗಿದೆ. ಐವಿಎಫ್ (IVF) ಮೂಲಕ ತಾಯಿ ಆದ ನಟಿ ಭಾವನ ಅವರು ಇತ್ತೀಚೆಗೆ ಸೀಮಂತ ಮಾಡಿಸಿಕೊಂಡಿದ್ದರು. ವೈದ್ಯರ ಸೂಚನೆಯಂತೆ ಹೆರಿಗೆ ಮಾಡಲಾಗಿದ್ದು, ಒಂದು ಮಗುವಿನಲ್ಲಿ 7 ತಿಂಗಳ ನಂತರ ಸಮಸ್ಯೆ ಕಾಣಿಸಿಕೊಂಡ ಕಾರಣ 8 ತಿಂಗಳಿಗೆ ಹೆರಿಗೆ ಮಾಡಿಸಲಾಗಿದೆ. ಸದ್ಯ ಒಂದು ಮಗು, ತಾಯಿ ಇಬ್ಬರು ಕ್ಷೇಮವಾಗಿದ್ದು, ಮತ್ತೊಂದು ಮಗು ಹುಟ್ಟಿದಾಗಲೇ ತೀರಿಕೊಂಡಿದೆ.
40ನೇ ವಯಸ್ಸಿನಲ್ಲಿ ಗರ್ಭಿಣಿಯಾಗಿದ್ದ ನಟಿ: ನಟಿ ಭಾವನಾ ರಾಮಣ್ಣ, ತಮ್ಮ ಬಾಲ್ಯದಿಂದಲೂ ಮಕ್ಕಳ ಜೊತೆಗಿರುವುದನ್ನು ಇಷ್ಟಪಡುತ್ತಿದ್ದರು. ಆದರೆ, ತಮ್ಮ 20ನೇ ವಯಸ್ಸಿನಲ್ಲಿ ತಾಯಿಯಾಗುವ ಯೋಚನೆ ಗಂಭೀರವಾಗಿ ತಟ್ಟಿರಲಿಲ್ಲ. 30ನೇ ವಯಸ್ಸಿನಲ್ಲಿ ಪ್ರೀತಿಯ ಆಕಾಂಕ್ಷೆಯಿದ್ದರೂ, ತಾಯಿಯಾಗುವ ಬಗ್ಗೆ ಯೋಚನೆ ಮಾಡಿರಲಿಲ್ಲ. “ನಾನು ಯಾವಾಗಲೂ ಮಕ್ಕಳ ಸುತ್ತಲಿರುವ ವಾತಾವರಣದಲ್ಲಿ ಬೆಳೆದೆ. ನನ್ನ ತಂದೆ-ತಾಯಿ, ಮೂವರು ಸಹೋದರ-ಸಹೋದರಿಯರು, ಸಂಬಂಧಿಕರು ಮತ್ತು ಸ್ನೇಹಿತರ ಜೊತೆ ತುಂಬಿದ ಮನೆಯಲ್ಲಿ ಬೆಳೆದೆ. ಆದರೆ 40 ತಲುಪಿದಾಗ ತಾಯಿಯಾಗಬೇಕೆಂಬ ಕರೆಯನ್ನು ತಡೆಯಲಾಗಲಿಲ್ಲ” ಎಂದು ಹೇಳಿಕೊಂಡಿದ್ದರು.
