ಉದಯವಾಹಿನಿ, ಈ ಬಾರಿಯೂ ಕೂಡ ಓಣಂ ಹಬ್ಬವನ್ನು ತಾರೆಯರು ಸಾಂಪ್ರದಾಯಿಕ ಸೀರೆ ಹಾಗೂ ಉಡುಗೆ ಧರಿಸಿ ಸಡಗರ ಸಂಭ್ರಮದಿಂದ ಆಚರಿಸಿದ್ದಾರೆ. ನಟಿಯರಾದ ಶರಣ್ಯ ಶೆಟ್ಟಿ, ಸಾಕ್ಷಿ ಅಗರ್ವಾಲ್, ಶೋಭಿತಾ, ಸುಹಾಸಿನಿ, ಅನ್ಯಾ ಶೆಟ್ಟಿ, ಸಾನಿಯಾ ಅಯ್ಯಪ್ಪನ್, ಮಂಜು ವಾರಿಯರ್, ಪ್ರಿಯಾ ವಾರಿಯರ್, ಶಮ್ನಾ ಕಾಸೀಮ್ ಸೇರಿದಂತೆ ದಕ್ಷಿಣ ಭಾರತದ ನಟಿಮಣಿಯರು ಕೇರಳದ ಟ್ರೆಡಿಷನಲ್ ಔಟ್‌ಫಿಟ್ ಹಾಗೂ ಸೀರೆಯಲ್ಲಿ ಓಣಂ ಹಬ್ಬವನ್ನು ಸೆಲೆಬ್ರೆಟ್ ಮಾಡಿದ್ದಾರೆ.

ತಾರೆಯರ ಸಂಭ್ರಮ: ಅದರಲ್ಲೂ ಕೆಲವು ತಾರೆಯರು ಕೇರಳದ ಟ್ರೆಡಿಷನಲ್ ಸೀರೆಗಳಲ್ಲಿಒಂದು ಮುಂಡುಂ ನೆರಿಯುಟ್ಟುಮ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ಇದು ಟು ಪೀಸ್ ಸಾರಿ. ‘ಮುಂಡುʼ ಅನ್ನು ಸೊಂಟಕ್ಕೆ ಸುತ್ತಿಕೊಂಡರೆ ಅದರ ಮೇಲೆ ಹಾಫ್ ಸಾರಿ ತರಹ ಹಾಕುವುದೇ ನೆರಿಯುಟ್ಟುಮ್. ಹಬ್ಬ ಹರಿದಿನಗಳ ಸಂದರ್ಭದಲ್ಲಿಗೋಲ್ಡನ್ ಇಲ್ಲವೇ ಇನ್ನಿತರ ಡಿಸೈನ್ ಬಾರ್ಡರ್‌ಗಳುಳ್ಳ ಮುಂಡುಂ ನೆರಿಯುಟ್ಟುಮ್ ಉಡುತ್ತಾರೆ. ಈ ಟು ಪೀಸ್ ಸೀರೆಯಲ್ಲಿ ನಾನಾ ಸೆಲೆಬ್ರಿಟಿಗಳು ಕಾಣಿಸಿಕೊಂಡಿದ್ದಾರೆ.

ನಟಿಯರ ಕಸವು ಸೀರೆ: ಶ್ವೇತ ವರ್ಣದ ಹಾಗೂ ಐವರಿ ಶೇಡ್‌ನ ಗೋಲ್ಡನ್ ಬಾರ್ಡರ್‌ನ ಕಸವು ಸೀರೆಯಲ್ಲಿ ಸ್ಯಾಂಡಲ್‌ವುಡ್‌ ನಟಿ ಶರಣ್ಯ ಶೆಟ್ಟಿ, ಸಾಕ್ಷಿ ಸೇರಿದಂತೆ ಹಲವರು ಸಂಭ್ರಮಿಸಿದ್ದಾರೆ. ನಟರ ವಿಷಯಕ್ಕೆ ಬಂದಲ್ಲಿ, ದಕ್ಷಿಣ ಭಾರತದ ಹಿರಿಯ ನಟ ಮೋಹನ್‌ಲಾಲ್ ಸೇರಿದಂತೆ ನಾನಾ ಮಲಯಾಳಂ ಸಿನಿಮಾ ನಟರು ಕೂಡ ಎಥ್ನಿಕ್ ಉಡುಗೆ ಧರಿಸಿ ಸಂಭ್ರಮಿಸಿದ್ದಾರೆ. ಫೋಟೋಗಳನ್ನು ಸೋಷಿಯಲ್ ಮೀಡಿಯಾದಲ್ಲಿ ಅಪ್ಲೋಡ್ ಮಾಡಿ ಅಭಿಮಾನಿಗಳಿಗೆ ಹಾರೈಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!