ಉದಯವಾಹಿನಿ, ನವದೆಹಲಿ: ಭಾರತೀಯ ಸಿನಿಮಾ ರಂಗದಲ್ಲಿ 80-90ರ ದಶಕದ ಬಾಲಿವುಡ್‌ನ ಜನಪ್ರಿಯ ನಟಿ ಯಾಗಿ ಗುರುತಿಸಿಕೊಂಡ ಕುನಿಕಾ ಸದಾನಂದ್ ಅವರು ಆ ಕಾಲದಲ್ಲೇ ಬಹಳ ಖ್ಯಾತಿ ಪಡೆದಿದ್ದರು. ಜವಾನಿ ಫಿರ್ ನಹಿ ಅನಿ, ಭೌರಿ, ಮೇರಿ ಬೀಬಿ ಕಾ ಜವಾಬ್ ನಹಿ ಸೇರಿ ದಂತೆ ಅನೇಕ ಸಿನಿಮಾದಿಂದ ಪ್ರಸಿದ್ಧ ಪಡೆದ ನಟಿಯಾಗಿದ್ದಾರೆ. ಬಳಿಕ ಗಾಯನ ಹಾಗೂ ಟೆಲಿ ವಿಷನ್ ರಿಯಾಲಿಟಿ ಶೋ ಮೂಲಕ ಇವರು ಮನೆಮಾತಾಗಿದ್ದರು. ಸದ್ಯ ಅವರು ಬಾಲಿವುಡ್ ಜನ ಪ್ರಿಯ ರಿಯಾಲಿಟಿ ಶೋ ಎಂದು ಖ್ಯಾತಿ ಪಡೆದಿರುವ ಬಿಗ್ ಬಾಸ್ ಕಾರ್ಯಕ್ರಮಕ್ಕೆ ಸ್ಪರ್ಧಿಯಾಗಿ ಎಂಟ್ರಿ ಕೊಟ್ಟಿದ್ದಾರೆ.
ನಟ ಸಲ್ಮಾನ್ ಖಾನ್ ಸಾರಥ್ಯದಲ್ಲಿ ʻಬಿಗ್ ಬಾಸ್ ಸೀಸನ್ 19ʼ ಈಗಾಗಲೇ ಆರಂಭವಾಗಿ ಪ್ರೇಕ್ಷಕರ ಗಮನ ಸೆಳೆಯುತ್ತಿದೆ. ಇದೇ ರಿಯಾಲಿಟಿ ಶೋ ನ ಕಂಟೆಸ್ಟೆಂಟ್ ಆದ ನಟಿ ಕುನಿಕಾ ಸದಾನಂದ್ ಅವರು ಸ್ಪರ್ಧಿಯಾಗಿ ತಮ್ಮ ವೈಯಕ್ತಿಕ ವಿಚಾರದಿಂದ ಭಾರೀ ಸದ್ದು ಮಾಡುತ್ತಿದ್ದಾರೆ. ಈ ವಾರದ ವೀಕೆಂಡ್ ಶೋನಲ್ಲಿ ನಟಿ ಕುನಿಕಾ ಅವರ ಪುತ್ರ ಅಯಾನ್ ಲಾಲ್ ಅವರು ತಮ್ಮ ತಾಯಿಯ ಬಗ್ಗೆ ಭಾವನಾತ್ಮಕವಾಗಿ ಮಾತ ನಾಡಿದ್ದಾರೆ. ಇದನ್ನು ಕೇಳಿ ನಟ ಸಲ್ಮಾನ್ ಖಾನ್ ಕೂಡ ಕಣ್ಣೀರು ಹಾಕಿದ್ದು ಇಡೀ ಬಿಗ್ ಬಾಸ್ ಶೋ ಭಾವನಾತ್ಮಕ ಕ್ಷಣ ಸೆರೆಹಿಡಿದಂತಿತ್ತು.
ಬಿಗ್ ಬಾಸ್ ಸೀಸನ್ 19 ರ ವೀಕೆಂಡ್ ಕಾ ವಾರ್ ಕಾರ್ಯಕ್ರಮದಲ್ಲಿ ಈ ಭಾರೀ ಕೂಡ ನಟ ಸಲ್ಮಾನ್ ಖಾನ್ ಅವರು ಸ್ಪರ್ಧಿಗಳ ಜೊತೆಗೆ ಮಾತುಕತೆ ನಡೆಸಿದ್ದಾರೆ.ಈ ವೇಳೆ ನಟ ಸಲ್ಮಾನ್ ಖಾನ್ ಅವರು ಈ ವಾರದಲ್ಲಿ ನಡೆದ ಅನೇಕ ವಿಚಾರದ ಬಗ್ಗೆ ಪ್ರಶ್ನಿಸಿದ್ದಾರೆ. ಬಳಿಕ ಸ್ಪರ್ಧಿ ಕುನಿಕಾ ಸದಾನಂದ್ ಅವರನ್ನು ಕೂಡ ಪ್ರಶ್ನೆ ಮಾಡಿದ್ದು ಈ ವೇಳೆ ತನ್ನ ಮಗ ಅಯಾನ್ ಲಾಲ್ ಜೊತೆ ಮಾತನಾಡಲು ಅವಕಾಶ ನೀಡಿದ್ದಾರೆ. ತನ್ನ ತಾಯಿಯ ಜೀವನದ ಹೋರಾಟದ ಬಗ್ಗೆ ನಟ ಅಯಾನ್ ಕೂಡ ಮನಬಿಚ್ಚಿ ಮಾತನಾಡಿದ್ದು ಇದನ್ನು ಕೇಳಿ ಸ್ವತಃ ಸಲ್ಮಾನ್ ಖಾನ್ ಅವರೆ ದುಃಖಿತರಾಗಿದ್ದಾರೆ
ಅಯಾನ್ ತನ್ನ ತಾಯಿಯ ಬಗ್ಗೆ ಹೃದಯಸ್ಪರ್ಶಿ ಮಾತುಗಳನ್ನಾಡಿ, ಬಿಗ್ ಬಾಸ್ ಗೆ ಸ್ಪರ್ಧಿ ಯಾದ ಕುರಿತು ನಮಗೆಲ್ಲ ಬಹಳ ಹೆಮ್ಮೆ ಇದೆ. ಇಡೀ ಹಿಂದೂಸ್ಥಾನವೇ ಈಗ ನಿನ್ನನ್ನು ನೋಡುತ್ತಿದೆ ಅಮ್ಮ…. ನನ್ನ ಮೊಮ್ಮಕ್ಕಳು, ನಾನು, ನಿನ್ನ ಹಿರಿಯ ಮಗ, ಪ್ರತಿಯೊಬ್ಬರೂ ನಿನ್ನನ್ನು ಕಂಡು ಬಹಳ ಹೆಮ್ಮೆ ಪಡುತ್ತಿದ್ದೇವೆ. ನೀನು ವಕೀಲೆಯಾಗಿ ಸಹಾಯ ಮಾಡಿದ ಎಲ್ಲ ಸಮಾಜ ಈಗ ನಿನ್ನನ್ನು ನೆನೆಯುತ್ತಿದೆ. ನಾನು ಇಂದು ಏನೇ ಆಗಿದ್ದರೂ, ಅದು ನಿನ್ನಿಂದಲೇ.. ನಿನ್ನನ್ನು ತಾಯಿಯಾಗಿ ಪಡೆದ ಜಗತ್ತಿನ ಅತ್ಯಂತ ಅದೃಷ್ಟಶಾಲಿ ವ್ಯಕ್ತಿ ನಾನು, ನೀನು ಯಾವುದೇ ವಿಚಾರಕ್ಕೂ ಕುಗ್ಗಬೇಡ… ಜಗತ್ತಿನ ಬಲಶಾಲಿಯಾಗಿ ವ್ಯಕ್ತಿ ನೀನು…ನಿನಗೆ ಇಡೀ ಸಮಾಜದ ಬೆಂಬಲವಿದೆ ಎಂದು ಅವರು ಹೇಳಿದ್ದಾರೆ.
