ಉದಯವಾಹಿನಿ, ಬೆಳಗಾವಿ: ಬರೋಬ್ಬರಿ 38 ಗಂಟೆಗಳ ಕಾಲ ಗಣೇಶ ವಿಸರ್ಜನೆ ನಡೆಯವ ಮೂಲಕ ಬೆಳಗಾವಿ ಹೊಸ ದಾಖಲೆ ಬರೆದಿದೆ. ಮಹಾರಾಷ್ಟ್ರದ ಮುಂಬೈ ಮಹಾನಗರಕ್ಕೂ ಮೀರಿ ಬೆಳಗಾವಿಯಲ್ಲಿ ಈ ಬಾರಿ ಗಣೇಶ ವಿಸರ್ಜನ ಮಹೋತ್ಸವ ಜರುಗಿದ್ದು ಹೊಸ ಇತಿಹಾಸ ಸೃಷ್ಟಿಯಾಗಿದೆ.
ಸಾರ್ವಕಾಲಿಕ ದಾಖಲೆಗೆ ಮಹಾನಗರ ಪಾಲಿಕೆಯ ಸದಸ್ಯರು ಹಾಗೂ ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಸೆ.6 ರ ಸಂಜೆ 4 ಗಂಟೆಗೆ ಶುರುವಾಗಿದ್ದ ಗಣೇಶ ಮರೆವಣಿಗೆಯು ಆರು ಗಂಟೆಯವರೆಗೂ ಶಾಂತಿಯುತವಾಗಿ ನಡೆಯಿತು.
ಗಣೇಶ ಮೆರವಣಿಗೆ ಶಾಂತ ರೀತಿಯಲ್ಲಿ ನಡೆಸಿಕೊಟ್ಟ ಮಹಾನಗರ ಪಾಲಿಕೆ ಸದಸ್ಯರು ಹಾಗೂ ಪೊಲೀಸರಿಗೆ ಜನ ಮೆಚ್ಚುಗೆ ವ್ಯಕ್ತಪಡಿಸಿದರು. ಬೆಳಗಾವಿಯ ಕಪಿಲೇಶ್ವರ ಹೊಂಡದಲ್ಲಿ ವಿಸರ್ಜನೆಯಾಗಿರುವ ಗಣೇಶ ಮೂರ್ತಿಗಳ ವಿಲೇವಾರಿ ಕಾರ್ಯವೂ ಸಹ ಪ್ರಾರಂಭವಾಗಲಿದೆ.

Leave a Reply

Your email address will not be published. Required fields are marked *

error: Content is protected !!