ಉದಯವಾಹಿನಿ,ಟಿಪ್ಸ್:  ಹಲವು ಪೋಷಕಾಂಶಗಳಂತೆ, ಪೊಟ್ಯಾಸಿಯಮ್ ನಮ್ಮ ದೇಹಕ್ಕೆ ತುಂಬಾನೆ ಮುಖ್ಯವಾದ ಆಹಾರವಾಗಿದೆ. ರಕ್ತದೊತ್ತಡವನ್ನು ನಿಯಂತ್ರಿಸಲು ಮತ್ತು ಮೂತ್ರಪಿಂಡಗಳನ್ನು ಆರೋಗ್ಯಕರವಾಗಿಡಲು, ಆಹಾರದಲ್ಲಿ ಪೊಟ್ಯಾಸಿಯಮ್ ಭರಿತ ಆಹಾರಗಳನ್ನು ಸೇವಿಸೋದು ತುಂಬಾನೆ ಇಂಪಾರ್ಟಂಟ್. ಪೊಟ್ಯಾಸಿಯಮ್ ಯಾವ ಆಹಾರಗಳಲ್ಲಿ ಹೆಚ್ಚಾಗಿ ಕಂಡು ಬರುತ್ತೆ ಎಂದು ತಿಳಿಯಲು ನೀವು ಬಯಸಿದ್ರೆ, ಈ ಕೆಳಗಿನ ಮಾಹಿತಿಯನ್ನು ತಿಳಿಯಿರಿ. ಇವು ನಿಮಗೆ ಉತ್ತಮ ಆರೋಗ್ಯ ಕಾಪಾಡಲು ಸಹಾಯ ಮಾಡುತ್ತೆ. ದೇಹವನ್ನು ಆರೋಗ್ಯಕರವಾಗಿಡಲು ಜೀವಸತ್ವಗಳ ಜೊತೆಗೆ ಮಿನರಲ್ಸ್ ಸಹ ಅಗತ್ಯವಾಗಿವೆ. ಪೊಟ್ಯಾಸಿಯಮ್ ಒಂದು ಅತ್ಯಗತ್ಯ ಮಿನರಲ್ ಆಗಿದೆ.
ಪೊಟ್ಯಾಸಿಯಮ್ ರಕ್ತದೊತ್ತಡವನ್ನು ಸಾಮಾನ್ಯವಾಗಿರಿಸಲು ಸಹಾಯ ಮಾಡುತ್ತದೆ ಮತ್ತು ಜೀವಕೋಶಗಳಿಗೆ ಪೋಷಕಾಂಶಗಳನ್ನು ತಲುಪಿಸಲು ಸಹಾಯ ಮಾಡುತ್ತೆ. ಪೊಟ್ಯಾಸಿಯಮ್ ಸ್ನಾಯುಗಳು ಮತ್ತು ನರಗಳು ಚೆನ್ನಾಗಿ ಕೆಲಸ ಮಾಡಲು ಸಹಾಯ ಮಾಡುತ್ತದೆ. ದೇಹವನ್ನು ಆರೋಗ್ಯಕರವಾಗಿಡಲು, ಪ್ರತಿದಿನ 4,700 ಮಿಗ್ರಾಂ ಪೊಟ್ಯಾಸಿಯಮ್ ಅಗತ್ಯವಿದೆ. ಪೊಟ್ಯಾಸಿಯಮ್ ಸಮೃದ್ಧವಾಗಿರುವ ಕೆಲವು ವಸ್ತುಗಳನ್ನು ಆಹಾರದಲ್ಲಿ ಸೇರಿಸುವ ಮೂಲಕ ನೀವು ಅದರ ಕೊರತೆಯನ್ನು ನೀಗಿಸಬಹುದು. ಇವು ಪೊಟ್ಯಾಸಿಯಮ್ ಸಮೃದ್ಧವಾಗಿರುವ ಆಹಾರಗಳಾಗಿವೆ.

ಪೊಟ್ಯಾಸಿಯಮ್ ಹೊಂದಿದ ಕೆಲವು ಆಹಾರದ ಕುರಿತು ಮಾಹಿತಿ ಈ ಕೆಳಗಿನಂತೆ ಇದೆ:-

1- ಬಾಳೆಹಣ್ಣು – ಬಾಳೆಹಣ್ಣಿನಲ್ಲಿ ಸಾಕಷ್ಟು ಪೊಟ್ಯಾಸಿಯಮ್ ಇದೆ. ನೀವು ಪ್ರತಿದಿನ ಕನಿಷ್ಠ 1-2 ಬಾಳೆಹಣ್ಣುಗಳನ್ನು ತಿನ್ನಬೇಕು. ಇದು ರಕ್ತದೊತ್ತಡವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ.
2- ಆಲೂಗಡ್ಡೆ- ಆಲೂಗಡ್ಡೆಯನ್ನು ಹೆಚ್ಚಿನ ಮನೆಗಳಲ್ಲಿ ಬಳಸಲಾಗುತ್ತದೆ. ಒಂದು ದೊಡ್ಡ ಆಲೂಗಡ್ಡೆಯಲ್ಲಿ ಸುಮಾರು 515 ಮಿಗ್ರಾಂ ಪೊಟ್ಯಾಸಿಯಮ್ ಕಂಡುಬರುತ್ತದೆ. ಆಲೂಗಡ್ಡೆಯು ಪೊಟ್ಯಾಸಿಯಮ್ ನ ಅತ್ಯುತ್ತಮ ಮೂಲವಾಗಿದೆ.
3- ದಾಳಿಂಬೆ – ದಾಳಿಂಬೆ ತಿನ್ನುವ ಮೂಲಕವೂ ಪೊಟ್ಯಾಸಿಯಮ್ ಕೊರತೆಯನ್ನು ನೀಗಿಸಬಹುದು. ದಾಳಿಂಬೆಯಲ್ಲಿ ಸಾಕಷ್ಟು ಪ್ರೋಟೀನ್ ಮತ್ತು ಕಬ್ಬಿಣಾಂಶವಿದೆ. ಇದರಲ್ಲಿ ನಾರಿನಂಶವು ಸಮೃದ್ಧವಾಗಿದೆ, ಇದು ಹೊಟ್ಟೆಯನ್ನು ದೀರ್ಘಕಾಲದವರೆಗೆ ತುಂಬಿರುವಂತೆ ಮಾಡುತ್ತೆ.
4- ಸಿಹಿ ಗೆಣಸು- ಸಿಹಿ ಗೆಣಸು ಪೊಟ್ಯಾಸಿಯಮ್ ನ ಉತ್ತಮ ಮೂಲವಾಗಿದೆ. ಸಿಹಿ ಗೆಣಸಿನಲ್ಲಿ ಕೊಬ್ಬು ತುಂಬಾ ಕಡಿಮೆ ಮತ್ತು ಹೆಚ್ಚಿನ ಪ್ರೋಟೀನ್ ಇದೆ. ಇದು ಫೈಬರ್ ಮತ್ತು ವಿಟಮಿನ್ ಎ ಯ ಉತ್ತಮ ಮೂಲವಾಗಿದೆ.
5- ಪಾಲಕ್ ಸೊಪ್ಪು – ಪೊಟ್ಯಾಸಿಯಮ್ ಪಾಲಕ್ ಸೊಪ್ಪಿನಲ್ಲಿ ಹೆಚ್ಚಾಗಿ ಕಂಡುಬರುತ್ತದೆ. ಪಾಲಕ್ ಸೊಪ್ಪನ್ನು ಆಹಾರದಲ್ಲಿ ಸೇರಿಸೋದ್ರಿಂದ ಕಬ್ಬಿಣದ ಕೊರತೆಯನ್ನು ಪೂರೈಸಲು ಸಹಾಯ ಮಾಡುತ್ತದೆ.

Leave a Reply

Your email address will not be published. Required fields are marked *

error: Content is protected !!