ಉದಯವಾಹಿನಿ,ಬೆಂಗಳೂರು: ಮುಖ್ಯಮಂತ್ರಿ ಸಿದ್ಧರಾಮಯ್ಯ ನೇತೃತ್ವದಲ್ಲಿ ನಡೆದಂತ ರಾಜ್ಯ ಸಚಿವ ಸಂಪುಟ ಸಭೆಯಲ್ಲಿ ಅನ್ನಭಾಗ್ಯ ಯೋಜನೆಯಡಿ 5 ಕೆಜಿ ಅಕ್ಕಿ ಬದಲಾಗಿ ಬಿಪಿಎಲ್ ಕಾರ್ಡ್ ದಾರರ ಪ್ರತಿ ಕುಟುಂಬಕ್ಕೆ ಹಣ ನೀಡಲು ನಿರ್ಧಾರ ಕೈಗೊಳ್ಳಲಾಗಿದೆ. ಇದರಲ್ಲೇ ಅನೇಕ ಮಹತ್ವದ ಯೋಜನೆಗಳಿಗೆ ನಿರ್ಧಾರ ಕೈಗೊಳ್ಳಲಾಗಿದೆ. ರಾಜ್ಯ ಸಚಿವ ಸಂಪುಟ ಸಭೆ ಮುಕ್ತಾಯದ ಬಳಿಕ ಇಂದು, ಕಾನೂನು ಸಚಿವ ಹೆಚ್.ಕೆ.ಪಾಟೀಲ್ ಸುದ್ದಿಗೋಷ್ಠಿ ನಡೆಸಿ ಮಾಹಿತಿ ನೀಡಿದರು. 15 ವಿಷಯಗಳ ಬಗ್ಗೆ ಚರ್ಚಿಸಿದ್ದೇವೆ. ಪ್ರಮುಖ ನಿರ್ಣಯಗಳನ್ನ ಕೈಗೊಂಡಿದ್ದೇವೆ ಎಂದರು. ಮುನಿಯಪ್ಪ ತಕ್ಷಣ ದೆಹಲಿಗೆ ಹೋಗಬೇಕು. ಅವರ ಇಲಾಖೆಗೆ ಸೇರಿದ ವಿಷಯ ಪ್ರಸ್ತಾಪಿಸ್ತಾರೆ. ಅಕ್ಕಿದೊರೆಯುವುದು ಕಠಿಣವಾಗಿದೆ.
ಅಕ್ಕಿಗಾಗಿ ಕೆಲವರ ಜೊತೆ ಮಾತುಕತೆ ನಡೆಸಿದ್ದಾರೆ. ಅದರ ಬಗ್ಗೆ ಮುನಿಯಪ್ಪ ಹೇಳ್ತಾರೆ. ೫ ಕೆಜಿ ಅಕ್ಕಿ ಕೊಡ್ತೇವೆ, ಉಳಿದ ೫ ಕೆಜಿ ಅಕ್ಕಿ ಹಣ ನೀಡ್ತೇವೆ ಎಂದರು. ಜನರಿಗೆ ನಾವು ಭರವಸೆ ಕೊಟ್ಟಿದ್ದೇವೆ. ಕೊಟ್ಟ ಭರವಸೆಯಂತೆ ನಡೆದುಕೊಳ್ತೇವೆ. ಐದು ಕೆಜಿ ಅಕ್ಕಿಬದಲು ಈಗ ಹಣ ಹಾಕ್ತೇವೆ. ಹಣದಲ್ಲಿ ಏನು ಬೇಕಾದ್ರೂ ಖರಿದಿಸಿಕೊಳ್ಳಬಹುದು. ಪ್ರತಿಪಕ್ಷದವರು ಟೀಕೆ ಮಾಡಬೇಕೆಂದು ಮಾಡ್ತಾರೆ. ಅಕ್ಕಿಯನ್ನ ಪಡೆಯೋಕೆ ಪ್ರಯತ್ನ ನಡೆದಿದ, ಟೆಂಡರ್ ಮೂಲಕ ಅಕ್ಕಿ ಖರೀದಿ ಪ್ರಯತ್ನ ನಡೆದಿದೆ. ಅಕ್ಕಿ ಸಿಗುತ್ತಲೇ ನಾವು ವಿತರಣೆ ಮಾಡ್ತೇವೆ ಎಂದು ಹೇಳಿದ್ದಾರೆ.
