ಉದಯವಾಹಿನಿ, ಇಂಗ್ಲೆಂಡ್: ಶಸ್ತ್ರಚಿಕಿತ್ಸೆ ನಡೆಸುವ ಮಧ್ಯದಲ್ಲೇ ರೋಗಿಯನ್ನು ಬಿಟ್ಟು ನರ್ಸ್ ಜೊತೆ ಪಾಕಿಸ್ತಾನಿ ಮೂಲದ ವೈದ್ಯರೊಬ್ಬರು ಲೈಂಗಿಕ ಕ್ರಿಯೆ ನಡೆಸಿದ್ದಾರೆ ಇಂಗ್ಲೆಂಡ್‍ನ ಗ್ರೇಟರ್ ಮ್ಯಾಂಚೆಸ್ಟರ್‌ನ ಆಷ್ಟನ್-ಅಂಡರ್-ಲೈನ್‌ನಲ್ಲಿರುವ ಟೇಮ್‌ಸೈಡ್ ಆಸ್ಪತ್ರೆಯಲ್ಲಿ ಈ ಘಟನೆ ನಡೆದಿದೆ. ವೈದ್ಯನಿಗೆ ಈಗಾಗಲೇ ಮದುವೆಯಾಗಿದ್ದು, ನರ್ಸ್ ಜೊತೆ ಈ ರೀತಿ ವರ್ತಿಸಿದ್ದಾನೆ. ಸದ್ಯ, ಈ ಸುದ್ದಿ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ.
ಶಸ್ತ್ರಚಿಕಿತ್ಸೆಯ ಮಧ್ಯದಲ್ಲಿ ರೋಗಿಯನ್ನು ಬಿಟ್ಟು ಹೋಗಿದ್ದಲ್ಲದೆ, ಶಸ್ತ್ರಚಿಕಿತ್ಸಾ ಕೊಠಡಿಯಲ್ಲಿ ನರ್ಸ್ ಜೊತೆ ರೆಡ್ ಹ್ಯಾಂಡ್ ಆಗಿ ಡಾಕ್ಟರ್ ಸಿಕ್ಕಿಬಿದ್ದಿದ್ದಾನೆ. ರೋಗಿಯ ಮೇಲ್ವಿಚಾರಣೆಗೆ ಮತ್ತೊಬ್ಬ ನರ್ಸ್ ಅನ್ನು ಬಿಟ್ಟು, ಇವರಿಬ್ಬರು ಸರಸ ಸಲ್ಲಾಪದಲ್ಲಿ ತೊಡಗಿದ್ದರು. ಒಟ್ಟು ಎಂಟು ನಿಮಿಷಗಳ ಕಾಲ ರೋಗಿಯನ್ನು ಗಮನಿಸದೆ ಬಿಟ್ಟ ಇಬ್ಬರೂ ಅನೈತಿಕ ಚಟುವಟಿಕೆಯಲ್ಲಿ ತೊಡಗಿದ್ದಾರೆ. ಪಾಕಿಸ್ತಾನಿ ಮೂಲದ 44 ವರ್ಷದ ವೈದ್ಯ ಡಾ. ಸುಶೀಲ್ ಅಂಜುಮ್ ಎಂದು ಗುರುತಿಸಲಾಗಿದ್ದು, ಯುಕೆಯಲ್ಲಿ ವೈದ್ಯರಾಗಿ ಸೇವೆ ಸಲ್ಲಿಸುತ್ತಿದ್ದ. ಶಸ್ತ್ರಚಿಕಿತ್ಸೆ ಸಮಯದಲ್ಲಿ ರೋಗಿಯನ್ನು ಗಮನಿಸದೆ ದಾದಿ ಜೊತೆ ಸರಸ ಸಲ್ಲಾಪದಲ್ಲಿ ತೊಡಗಿದ್ದಕ್ಕೆ ಇದೀಗ ಈ ವೈದ್ಯನಿಗೆ ಆಸ್ಪತ್ರೆ ಗೇಟ್‍ಪಾಸ್ ನೀಡಿದೆ. ಹೀಗಾಗಿ ಸದ್ಯ ವೈದ್ಯ ಅಂಜುಮ್ ಪಾಕಿಸ್ತಾನಕ್ಕೆ ವಾಪಸ್ಸಾಗಿದ್ದಾನೆ.
