ಉದಯವಾಹಿನಿ, ಗೋಲ್ಡನ್ ಕ್ವೀನ್ ಅಮೂಲ್ಯ ಸಿನಿ ರಂಗಕ್ಕೆ ಮತ್ತೆ ಕಂಬ್ಯಾಕ್ ಆಗಿದ್ದಾರೆ. ಹುಟ್ಟುಹಬ್ಬದ ದಿನದಂದೇ ಅಮೂಲ್ಯ ಸಿಹಿಸುದ್ದಿ ಕೊಟ್ಟಿದ್ದಾರೆ. ಮಂಜು ಸ್ವರಾಜ್ ನಿರ್ದೇಶನದ ‘ಪೀಕಬೂ’ ಸಿನಿಮಾದ ಮೂಲಕ ಮತ್ತೆ ಸ್ಯಾಂಡಲ್ವುಡ್ ಅಂಗಳಕ್ಕೆ ಎಂಟ್ರಿ ನೀಡಿದ್ದಾರೆ.
ಬರೋಬ್ಬರಿ 8 ವರ್ಷಗಳ ಬಳಿಕ ಕಂಬ್ಯಾಕ್.. ಮದುವೆ, ಮಕ್ಕಳ ನಂತರ ನಟಿ ಅಮೂಲ್ಯ ನಟನೆಗೆ ವಾಪಸ್ ಆಗಿದ್ದಾರೆ. ಹುಟ್ಟುಹಬ್ಬದ ದಿನವೇ ಸಿನಿಮಾ ನಟನೆ ಬಗ್ಗೆ ಗುಡ್ನ್ಯೂಸ್ ಕೊಟ್ಟಿರುವ ನಟಿ, ಮಂಜು ಸ್ವರಾಜ್ ನಿರ್ದೇಶನದ ‘ಪೀಕಬೂ’ ಸಿನಿಮಾದಲ್ಲಿ ನಟಿಸಲಿದ್ದಾರೆ. ಈ ಹಿಂದೆ ಮಂಜು ನಿರ್ದೇಶನದ ‘ಶ್ರಾವಣಿ ಸುಬ್ರಹ್ಮಣ್ಯ’ ಸಿನಿಮಾದಲ್ಲಿ ನಟಿ ಅಮೂಲ್ಯ ನಾಯಕಿಯಾಗಿ ಕಾಣಿಸಿಕೊಂಡಿದ್ದರು.
ಅಂದ್ಹಾಗೆ ನಿನ್ನೆಯ ದಿನ ಅಮೂಲ್ಯ ಅವರ ಹುಟ್ಟುಹಬ್ಬ ಆಗಿತ್ತು. ಈ ಹಿನ್ನೆಲೆಯಲ್ಲಿ ಚಿತ್ರತಂಡ ಬರ್ತ್ಡೇ ಉಡುಗೊರೆಯಾಗಿ ಅಮೂಲ್ಯ ಪಾತ್ರದ ಟೀಸರ್ ಬಿಡುಗಡೆ ಮಾಡಿದೆ. ಚಾರ್ಲಿ ಚಾಪ್ಲಿನ್ ಸ್ಟೈಲ್ನಲ್ಲಿ ಸ್ಟೆಪ್ ಹಾಕುತ್ತ ಎಂಟ್ರಿ ನೀಡಿರುವ, ಲೆಟ್ಸ್ ಸ್ಟಾರ್ಟ್ದ ಮ್ಯೂಜಿಕ್ ಎನ್ನುತ್ತ ಸ್ಟೆಪ್ಸ್ ಹಾಕಿದ್ದಾರೆ. ಒಂದು ನಿಮಿಷವಿರುವ ವಿಡಿಯೋದಲ್ಲಿ ಅಮೂಲ್ಯ ಕಾಮಿಡಿಯೊಂದಿಗೆ ಕ್ಯೂಟ್ ಆಗಿ ಕಾಣಿಸಿಕೊಂಡಿದ್ದಾರೆ.
