ಉದಯವಾಹಿನಿ, ಹಲವು ವರ್ಷಗಳಿಂದ ನಾವು ಬಳಲುತ್ತಿದ್ದೇವೆ, ಆದ್ರೂ ಮೌನವಾಗಿ ಕುಳಿತಿದ್ದೇವೆ. ಸಮಾಜದ ಜಡತ್ವ ನಮ್ಮನ್ನ ಹತ್ತಿಕ್ಕಿದೆ. ಆದರೀಗ ಕೋಪದ ಜ್ವಾಲೆ ಸ್ಫೋಟಗೊಂಡಿದೆ, ದಂಗೆ ಏಳಬೇಕಾದ ಸಮಯ ಬಂದಿದೆʼ ನೇಪಾಳದ ಮಾಜಿ ಪ್ರಧಾನಿ, ಪ್ರಸಿದ್ಧ ಬರಹಗಾರ ಬಿ.ಪಿ ಕೊಯಿರಾಲ ಅವರ ಪುಸ್ತಕದ ಸಾಲುಗಳಿವು. ಪ್ರಸ್ತುತ ಈಗಿನ ನೇಪಾಳದ ಸ್ಥಿತಿ ನೋಡಿದ್ರೆ ದಶಕಗಳ ಹಿಂದೆಯೇ ಈ ದಂಗೆಯನ್ನ ಊಹಿಸಿದ್ದರು ಅನ್ನೋದು ಗೊತ್ತಾಗುತ್ತೆ. ಆದ್ರೆ ಇದಕ್ಕೂ ಮುನ್ನ ಭಾರತದ ಸುತ್ತ ಏನಾಗ್ತಿದೆ ಅನ್ನೋದನ್ನ ನಾವಿಂದು ತಿಳುದುಕೊಳ್ಳಬೇಕಾಗಿದೆ.
ಕಳೆದ 4 ವರ್ಷಗಳಿಂದ ದಕ್ಷಿಣ ಏಷ್ಯಾದ ರಾಜಕೀಯ, ಆರ್ಥಿಕ ಪರಿಸ್ಥಿತಿಗಳಲ್ಲಿ ಸಾಕಷ್ಟು ಬದಲಾವಣೆಗಳಾಗಿವೆ. ನಿರ್ದಿಷ್ಟವಾಗಿ ಭಾರತದ ನೆರೆಹೊರೆ ರಾಷ್ಟ್ರಗಳಲ್ಲಿ ಅಧಿಕಾರದ ರಾಜಕೀಯ ಕ್ರಾಂತಿಗಳು, ಸಾಮೂಹಿಕ ಪ್ರತಿಭಟನೆಗಳಿಂದ ಪ್ರಕ್ಷುಬ್ಧತೆ ಸೃಷ್ಟಿಯಾಗಿದೆ. ಇದರಿಂದ ಆಡಳಿತ ಬದಲಾವಣೆಗೆ ಸಾಕ್ಷಿಯಾಗಿವೆ. ಅಫ್ಘಾನಿಸ್ತಾನ, ಶ್ರೀಲಂಕಾ ಪಾಕಿಸ್ತಾನ ಬಾಂಗ್ಲಾದೇಶದಲ್ಲಿ ಬಿಕ್ಕಟ್ಟು ಎದುರಾಗಿತ್ತು. ಈಗ ನೆರೆಯ ನೇಪಾಳ ಆರ್ಥಿಕ ಬಿಕ್ಕಟ್ಟು ಎದುರಾಗಿದೆ. ಇದೇ ಕಾರಣಕ್ಕೆ ದಶಕಗಳಿಂದ ಜನರನ್ನ ಕಾಡುತ್ತಿದ್ದ ಜ್ವಾಲೆ ಹೋರಾಟ ದಂಗೆ ರೂಪದಲ್ಲಿ ಸ್ಫೋಟಗೊಂಡಿದೆ. ಸದ್ಯ 5 ದಿನಗಳ ಹಿಂದೆ ದೇಶವ್ಯಾಪಿ ಭುಗಿಲೆದ್ದಿದ್ದ ದಂಗೆ‌ ಸೇನೆ ನಿಯಂತ್ರಣಕ್ಕೆ ತೆಗೆದುಕೊಂಡ ಬಳಿಕ ಶಾಂತವಾಗಿದೆ.
ಒಂದೆಡೆ ಭಾರತ ಸೂಪರ್ ಪವರ್ ಆಗುತ್ತಿದ್ದರೆ, ಇತ್ತ ನೆರೆಹೊರೆಯ ರಾಷ್ಟ್ರಗಳ ಪರಿಸ್ಥಿತಿ ಢೋಲಾಯಮಾನವಾಗುತ್ತಿದೆ. ಅಷ್ಟಕ್ಕೂ ಭಾರತದ ಸುತ್ತ ಏನಾಗ್ತಿದೆ? ನೆರೆಹೊರೆ ದೇಶಗಳಲ್ಲಿ ಏನೇನಾಯಿತು? ಇದಕ್ಕೆಲ್ಲ ಕಾರಣವೇನು? ಎಂಬುದನ್ನು ತಿಳಿಯುವ ಕುತೂಹಲ ನಿಮಗಿದ್ದರೆ ಮುಂದೆ ಓದಿ… ಮೊದಲಿಗೆ ನೇಪಾಳದ ದಂಗೆಗೆ ಮೂಲ ಕಾರಣ ಏನೆಂಬುದನ್ನು ಹಂತಹಂತವಾಗಿ ನೋಡೋಣ..

Leave a Reply

Your email address will not be published. Required fields are marked *

error: Content is protected !!