ಉದಯವಾಹಿನಿ, ನವದೆಹಲಿ: ಖಜುರಾಹೊದಲ್ಲಿ ವಿಷ್ಣುವಿನ ವಿಗ್ರಹಕ್ಕೆ ಸಂಬಂಧಿಸಿದಂತೆ ತಾನು ವ್ಯಕ್ತಪಡಿಸಿದ ಅಭಿಪ್ರಾಯಕ್ಕೆ ಟೀಕೆ ವ್ಯಕ್ತವಾಗುತ್ತಿದ್ದಂತೆ ಸುಪ್ರೀಂ ಕೋರ್ಟ್ ಮುಖ್ಯ ನ್ಯಾ. ಗವಾಯಿ ಅವರು ನಾನು ಎಲ್ಲಾ ಧರ್ಮಗಳನ್ನು ಗೌರವಿಸುತ್ತೇನೆ ಎಂದು ಹೇಳಿದ್ದಾರೆ.ಅರ್ಜಿ ವಿಚಾರಣೆಯ ಸಂದರ್ಭದಲ್ಲಿ ನಾನು ಮಾಡಿದ ಕಾಮೆಂಟ್‌ಗಳನ್ನು ಸಾಮಾಜಿಕ ಮಾಧ್ಯಮದಲ್ಲಿ ಒಂದು ನಿರ್ದಿಷ್ಟ ರೀತಿಯಲ್ಲಿ ಚಿತ್ರಿಸಲಾಗಿದೆ ಎಂದು ಯಾರೋ ನನಗೆ ಹೇಳಿದರು. ಆದರೆ ನಾನು ಎಲ್ಲಾ ಧರ್ಮಗಳನ್ನು ಗೌರವಿಸುತ್ತೇನೆ ಎಂದು ಹೇಳುವ ಮೂಲಕ ತಮ್ಮ ಅಭಿಪ್ರಾಯಕ್ಕೆ ಸ್ಪಷ್ಟನೆ ನೀಡಿದರು.
ಪೀಠದ ಮುಂದೆ ಹಾಜರಾದ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ, ಕಳೆದ 10 ವರ್ಷಗಳಿಂದ ಸಿಜೆಐ ಗವಾಯಿ ಅವರನ್ನು ತಿಳಿದಿದ್ದೇನೆ ಮತ್ತು ಮುಖ್ಯ ನ್ಯಾಯಮೂರ್ತಿ ಎಲ್ಲಾ ಧಾರ್ಮಿಕ ಸ್ಥಳಗಳಿಗೆ ಭೇಟಿ ನೀಡಿದ್ದಾರೆ ಎಂದು ತಿಳಿಸಿದರು.ಇದನ್ನು ಗಂಭೀರ ಕಳವಳದ ವಿಷಯ ಎಂದು ಕರೆದ ಎಸ್‌ಜಿ ಮೆಹ್ತಾ, ಪ್ರತಿಯೊಂದು ಕ್ರಿಯೆಗೂ ಸಮಾನ ಪ್ರತಿಕ್ರಿಯೆ ಇರುತ್ತದೆ ಎಂಬ ನ್ಯೂಟನ್‌ನ ಚಲನೆಯ ನಿಯಮಗಳನ್ನು ನಾವು ಓದ್ದಿದ್ದೇವೆ. ಆದರೆ ಈಗ ಪ್ರತಿಯೊಂದು ಕ್ರಿಯೆಗೂ ಸಾಮಾಜಿಕ ಮಾಧ್ಯಮಗಳಲ್ಲಿ ಅಸಮಾನ ಪ್ರತಿಕ್ರಿಯೆ ಇರುತ್ತದೆ ಎಂದು ಹೇಳಿದರು.
ಅದೇ ಪೀಠದ ಮುಂದೆ ಹಾಜರಿದ್ದ ಹಿರಿಯ ವಕೀಲ ಕಪಿಲ್ ಸಿಬಲ್, ನಾವು ಪ್ರತಿದಿನ ಈ ಸಾಮಾಜಿಕ ಮಾಧ್ಯಮಗಳಿಂದ ರೋಸಿ ಹೋಗಿದ್ದೇವೆ. ಈ ಹುಚ್ಚು ಕುದುರೆಯನ್ನು ಪಳಗಿಸಲು ಯಾವುದೇ ಮಾರ್ಗವಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು. ಎಲ್ಲಾ ಧರ್ಮಗಳನ್ನು ಗೌರವಿಸುತ್ತೇನೆ ಎಂದು ಸ್ಪಷ್ಟಪಡಿಸಿದ ನಂತರ ಸಿಜೆಐ ನೇಪಾಳದಲ್ಲಿ ನಡೆದ ಇತ್ತೀಚಿನ ಪ್ರತಿಭಟನೆಯನ್ನು ಉಲ್ಲೇಖಿಸಿ “ನೇಪಾಳದಲ್ಲೂ ಅದು ಹಾಗೆಯೇ ಆಯಿತು” ಎಂದು ಹೇಳಿದರು.
