ಉದಯವಾಹಿನಿ, ಬಾಲಿವುಡ್ ನಟಿ ದೀಪಿಕಾ ಪಡುಕೋಣೆ ಅವರನ್ನ ಸಂದೀಪ್ ರೆಡ್ಡಿ ವಂಗಾ ತಮ್ಮ ʻಸ್ಪಿರಿಟ್ʼ ಸಿನಿಮಾದಿಂದ ಕೈಬಿಟ್ಟಿದ್ದರು. ಇದೀಗ ಮತ್ತೊಂದು ಟಾಲಿವುಡ್ ಸಿನಿಮಾದಿಂದ ದೀಪಿಕಾ ಅವರನ್ನ ಹೊರಹಾಕಲಾಗಿದೆ. ಹೌದು, ʻಕಲ್ಕಿʼ ಸೀಕ್ವೆಲ್‌ (Kalki 2898 AD Sequel) ಸಿನಿಮಾ ತಂಡದಿಂದ ದೀಪಿಕಾ ಪಡುಕೋಣೆ ಅವರನ್ನ ಹೊರಗಿಡಲಾಗಿದೆಯಂತೆ. ಪ್ರಭಾಸ್ ನಟನೆಯ ಕಲ್ಕಿ 2898AD ಸಿನಿಮಾದ ಪಾರ್ಟ್-1 ನಲ್ಲಿ ನಟಿ ದೀಪಿಕಾ ಪಡುಕೋಣೆ ಮುಖ್ಯವಾದ ಪಾತ್ರ ನಿಭಾಯಿಸಿದ್ದರು. ಇದೀಗ ಈ ಸಿನಿಮಾದ ಸಿಕ್ವೇಲ್ ಬರುತ್ತಿದ್ದು, ಪ್ರಮುಖ ಪಾತ್ರದಲ್ಲಿ ನಟಿಸಬೇಕಾಗಿತ್ತು.
ಆ ಪಾತ್ರಕ್ಕಾಗಿ ನಟಿ ದೀಪಿಕಾ ಪಡುಕೋಣೆ ಮೊದಲ ಪಾರ್ಟ್ ಗಿಂತ 2ನೇ ಪಾರ್ಟ್‌ಗೆ ದುಪ್ಪಟ್ಟು ಸಂಭಾವನೆ ಡಿಮ್ಯಾಂಡ್ ಮಾಡಿದ್ದಾರಂತೆ. ನಟಿ ದೀಪಿಕಾ ಪಡುಕೋಣೆ ದುಪ್ಪಟ್ಟು ಸಂಭಾವನೆ ಜೊತೆಗೆ ಸಿನಿಮಾ ತೆರೆಕಂಡ ಬಳಿಕ ಬಂದ ಲಾಭದಲ್ಲಿ ಶೇರ್ ಕೇಳಿದ್ದಾರಂತೆ. ಅಲ್ಲದೇ ದಿನಕ್ಕೆ 5 ಗಂಟೆಗಳ ಕಾಲ ಮಾತ್ರ ಶೂಟಿಂಗ್‌ನಲ್ಲಿ ಭಾಗಿಯಾಗಲು ಕೇಳಿಕೊಂಡಿದ್ದಾರೆ. ಅನ್ನೋ ಕಾರಣದಿಂದಾಗಿ ದೀಪಿಕಾ ಅವರನ್ನ ಚಿತ್ರತಂಡ ಕಲ್ಕಿ 2898AD ಚಿತ್ರದಿಂದ ಹೊರಗಿಟ್ಟಿದೆಯಂತೆ.
ಈ ಬಗ್ಗೆ ನಿರ್ದೇಶಕ ನಾಗ್ ಅಶ್ವಿನ್ ತಮ್ಮ ಎಕ್ಸ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಈ ಮೊದಲು ʻಸ್ಪಿರಿಟ್ʼ ಸಿನಿಮಾದ ನಿರ್ದೇಶಕ ಸಂದೀಪ್ ರೆಡ್ಡಿ ವಂಗಾ ಕೂಡಾ ಇಂತಹದ್ದೇ ಕೆಲ ಕಾರಣ ನೀಡಿ ದೀಪಿಕಾ ಅವರನ್ನ ಸ್ಪಿರಿಟ್ ಚಿತ್ರದಿಂದ ಕೈಬಿಡುವ ಬಗ್ಗೆ ಸ್ಪಷ್ಟಪಡಿಸಿದ್ದರು. ಬಾಲಿವುಡ್ ಬ್ಯೂಟಿ ದೀಪಿಕಾ ಪಡುಕೋಣೆ ಟಾಲಿವುಡ್ ನಲ್ಲಿ ಡಿಮ್ಯಾಂಡ್ ಕ್ರಿಯೇಟ್ ಮಾಡಿಕೊಳ್ಳಲು ಮುಂದಾಗಿದ್ದಾರೆ. ಹೀಗಾಗಿ ಇದ್ದ ಅವಕಾಶಗಳು ತಮ್ಮ ಕೈಬಿಟ್ಟುಹೋಗುತ್ತಿವೆ. ಸಾಲು ಸಾಲು ಟಾಲಿವುಡ್ ಸಿನಿಮಾಗಳಿಂದ ದೀಪಿಕಾ ಪಡುಕೋಣೆ ಅವರನ್ನ ಹೊರಗಿಡಲಾಗ್ತಿದೆ.

Leave a Reply

Your email address will not be published. Required fields are marked *

error: Content is protected !!