ಉದಯವಾಹಿನಿ, ಬೆಂಗಳೂರು: ಜನ ಸಾಮಾನ್ಯನಿಗೆ ನಾಳೆಯಿಂದ ಡಬ್ಬಲ್ ಸಂಭ್ರಮ. ದಸರಾ (Dasara) ಜೊತೆ ಅಗತ್ಯ ವಸ್ತುಗಳ ಬೆಲೆ ಇಳಿಕೆಯಾಗಲಿದೆ.
ಶಾಂಪೂ, ಪೇಸ್ಟ್ ನಿಂದ ಎಲೆಕ್ಟ್ರಾನಿಕ್ಸ್, ಆಟೋ ಮೊಬೈಲ್‌ವರೆಗೂ ಜಿಎಸ್‌ಟಿ ಸ್ಲ್ಯಾಬ್ (GST Slab) ಪರಿಷ್ಕರಣೆಯಾಗಿದೆ. ಪರಿಣಾಮ ಕೆಲ ವಸ್ತುಗಳ ಮೇಲಿದ್ದ ತೆರಿಗೆ 12%ನಿಂದ 5% ಹೋದರೆ ಕೆಲ ದುಬಾರಿ ವಸ್ತುಗಳ ಬೆಲೆ 28% ನಿಂದ 18% ಇಳಿಕೆಯಾಗಿದೆ.
ಬೆಂಗಳೂರು: ಜನ ಸಾಮಾನ್ಯನಿಗೆ ನಾಳೆಯಿಂದ ಡಬ್ಬಲ್ ಸಂಭ್ರಮ. ದಸರಾ (Dasara) ಜೊತೆ ಅಗತ್ಯ ವಸ್ತುಗಳ ಬೆಲೆ ಇಳಿಕೆಯಾಗಲಿದೆ.
ಶಾಂಪೂ, ಪೇಸ್ಟ್ ನಿಂದ ಎಲೆಕ್ಟ್ರಾನಿಕ್ಸ್, ಆಟೋ ಮೊಬೈಲ್‌ವರೆಗೂ ಜಿಎಸ್‌ಟಿ ಸ್ಲ್ಯಾಬ್ (GST Slab) ಪರಿಷ್ಕರಣೆಯಾಗಿದೆ. ಪರಿಣಾಮ ಕೆಲ ವಸ್ತುಗಳ ಮೇಲಿದ್ದ ತೆರಿಗೆ 12%ನಿಂದ 5% ಹೋದರೆ ಕೆಲ ದುಬಾರಿ ವಸ್ತುಗಳ ಬೆಲೆ 28% ನಿಂದ 18% ಇಳಿಕೆಯಾಗಿದೆ.
ಸೆಪ್ಟೆಂಬರ್ ಮೊದಲ ವಾರದಲ್ಲಿ ದೆಹಲಿಯಲ್ಲಿ ನಡೆದ ಜಿಎಸ್‌ಟಿ ಕೌನ್ಸಿಲ್ ಸಭೆಯಲ್ಲಿ ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರಗಳು ತೆರಿಗೆ ಪರಿಷ್ಕರಣೆ ಮಾಡುವ ಮಹತ್ವದ ನಿರ್ಧಾರ ಕೈಗೊಂಡಿದ್ದವು. 2017ರಲ್ಲಿ ಜಾರಿಯಾದ ಜಿಎಸ್‌ಟಿಯಲ್ಲಿ 0, 5%, 12%, 18%, 28% ಅಡಿಯಲ್ಲಿ ವಸ್ತುಗಳ ಮೇಲೆ ತೆರಿಗೆ ಹಾಕಲಾಗುತ್ತಿತ್ತು. ಆದರೆ ಈಗ 12% ಮತ್ತು 28% ಸ್ಲ್ಯಾಬ್ ಅನ್ನು ತೆಗೆಯಲಾಗಿದ್ದು ಈ ಪಟ್ಟಿಯಲ್ಲಿದ್ದ ಬಹುತೇಕ ವಸ್ತುಗಳನ್ನು 5% ಮತ್ತು 18% ಶಿಫ್ಟ್ ಮಾಡಲಾಗಿದೆ. ಇದರ ಜೊತೆ ಐಷಾರಾಮಿ ವಸ್ತುಗಳು (ತಂಬಾಕು, ಐಷಾರಾಮಿ ಕಾರುಗಳು ಇತ್ಯಾದಿ) ಮೇಲೆ 40% ತೆರಿಗೆ ಹಾಕಲಾಗುತ್ತದೆ.
ತೆರಿಗೆ ಪರಿಷ್ಕರಣೆಯಾದ ದರಗಳು ಸೆ.22 ರಿಂದ ಜಾರಿಗೆ ಬರಬೇಕು ಎಂಬ ನಿರ್ಧಾರವನ್ನು ಜಿಎಸ್‌ಟಿ ಕೌನ್ಸಿಲ್ ತೆಗೆದುಕೊಂಡ ಹಿನ್ನೆಲೆಯಲ್ಲಿ ಸೋಮವಾರದಿಂದ ದೇಶಾದ್ಯಂತ 99% ರಷ್ಟು ವಸ್ತುಗಳ ಬೆಲೆ ಇಳಿಕೆಯಾಗಲಿದೆ.