ಲಖನೌ: ಯುವತಿಯೊಬ್ಬಳು ಪೊಲೀಸ್ ಠಾಣೆಯಿಂದ ಹೊರಗೆ ಬರುತ್ತಿರುವ ಇನ್ಸ್ಟಾಗ್ರಾಂ ರೀಲ್ ಅನ್ನು ರೆಕಾರ್ಡ್ ಮಾಡಿದ್ದು, ಸಾಮಾಜಿಕ ಮಾಧ್ಯಮದಲ್ಲಿ (social media) ಹಂಚಿಕೊಂಡಿದ್ದಾಳೆ. ಉತ್ತರ ಪ್ರದೇಶದ (Uttar Pradesh) ಬಾರಾಬಂಕಿಯ ಪೊಲೀಸ್ ಠಾಣೆಯಲ್ಲಿ ಘಟನೆ ನಡೆದಿದೆ. ಈ ವಿಡಿಯೊ ಭಾರಿ ವೈರಲ್ (Viral Video) ಆದ ಬೆನ್ನಲ್ಲೇ, ಪೊಲೀಸರು ಅದನ್ನು ಡಿಲೀಟ್ ಮಾಡುವಂತೆ ಕೇಳಿಕೊಂಡಿದ್ದಾರೆ. ಲಕ್ಷಾಂತರ ವೀಕ್ಷಣೆಗಳನ್ನು ಗಳಿಸಿರುವ ಆ ವಿಡಿಯೊವನ್ನು ಡಿಲೀಟ್ ಮಾಡುವುದಕ್ಕಿಂತ ಸಾಯುವುದೇ ಮೇಲು ಎಂದು ಆಕೆ ಹೇಳಿದ್ದಾಳೆ.

ಇನ್ಸ್ಟಾಗ್ರಾಂನಲ್ಲಿ zoyakhan.9513 ಎಂದು ಕರೆಯಲ್ಪಡುವ ರುಹಿ ಎಂಬಾಕೆ ಪೊಲೀಸ್ ಠಾಣೆಯಿಂದ ಹೊರಬರುತ್ತಿರುವ ರೀಲ್ಸ್ ಮಾಡಿದಾಕೆ. ಭೋಜ್‌ಪುರಿ ಹಾಡನ್ನು ಹೊಂದಿರುವ ಈ ವಿಡಿಯೊವನ್ನು ಪೋಸ್ಟ್ ಮಾಡಿದ್ದಾಳೆ. ಈ ರೀಲ್ ಇನ್ಸ್ಟಾಗ್ರಾಮ್‍ನಲ್ಲಿ ಒಂದು ಮಿಲಿಯನ್‌ಗಿಂತಲೂ ಹೆಚ್ಚು ವೀಕ್ಷಣೆಗಳನ್ನು ತಲುಪಿದ ನಂತರ, ಅದು ಪೊಲೀಸರ ಗಮನವನ್ನೂ ಸೆಳೆಯಿತು.

Leave a Reply

Your email address will not be published. Required fields are marked *

error: Content is protected !!