ಉದಯವಾಹಿನಿ, ಲಾವೋಸ್‌: ಸಣ್ಣ ದೇಶಗಳಿಗೆ ಭೇಟಿ ನೀಡಿದಾಗ ವಿದೇಶಿ ಪ್ರವಾಸಿಗರು ಅಲ್ಲಿನ ಜನರ ಗಮನವನ್ನು ಸೆಳೆಯುತ್ತಾರೆ. ಆದರೆ, ಇತ್ತೀಚೆಗೆ ಲಾವೋಸ್‌ನಲ್ಲಿ (Laos) ನಡೆದ ಘಟನೆಯು ವಿಭಿನ್ನ ಮುಖವನ್ನು ತೋರಿಸಿದೆ. ವಿದೇಇ ಮಹಿಳೆಯೊಬ್ಬಳನ್ನು ನೋಡಿ ಸ್ಥಳೀಯ ಮಕ್ಕಳು (kids) ಆಕೆಯನ್ನು ನೋಡಿ ಹೆದರಿದ್ದಲ್ಲದೆ, ಜೋರಾಗಿ ಅತ್ತಿದ್ದಾರೆ. ಹಾಗೆಯೇ ಭೀತಿಗೊಂಡ ಅವರು ಆಕೆಯಿಂದ ದೂರ ಓಡಿದ್ದಾರೆ. ಮಕ್ಕಳ ಪ್ರತಿಕ್ರಿಯೆಯಿಂದ ಮಹಿಳೆ ಆರಂಭದಲ್ಲಿ ಗೊಂದಲಕ್ಕೊಳಗಾಗಿದ್ದಳು. ಆದರೆ ಅವಳ ಬಿಳಿ ಚರ್ಮದ ಕಾರಣದಿಂದಾಗಿ ಮಕ್ಕಳು ಅವಳ ಬಳಿಗೆ ಬರಲು ಹೆದರಿದ್ದಾರೆ ಎಂದು ಅವಳು ಶೀಘ್ರದಲ್ಲೇ ಅರ್ಥಮಾಡಿಕೊಂಡಿದ್ದಾಳೆ. ಇದರ ವಿಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ (Viral Video) ಆಗಿದೆ.

ವಿಡಿಯೊದಲ್ಲಿ, ಮಹಿಳೆಯು ಲಾವೋಸ್‌ನಲ್ಲಿರುವ ಶಾಲೆಗೆ ಭೇಟಿ ನೀಡಿದ್ದು, ಆ ಹಳ್ಳಿಗೆ ಭೇಟಿ ನೀಡುವ ಪ್ರವಾಸಿಗರು ಬಹಳ ಕಡಿಮೆ ಎಂದು ಸಾಮಾಜಿಕ ಮಾಧ್ಯಮ ಬಳಕೆದಾರರಿಗೆ ತಿಳಿಸಿದಳು. ಮಕ್ಕಳು ತನ್ನನ್ನು ನೋಡಿ ಭಯಭೀತರಾಗಿರುವುದನ್ನು ಗಮನಿಸಿದ ಅವಳು, ವಿದೇಶಿಯರು, ವಿಶೇಷವಾಗಿ ಬಿಳಿಯರು ಹೇಗೆ ವರ್ತಿಸುತ್ತಾರೆ ಎಂಬುದನ್ನು ಅವರು ಈಗಾಗಲೇ ತಿಳಿದಿರಬಹುದು ಎಂದು ಹೇಳಿದಳು. ಈ ವಿಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದ್ದಂತೆ ಅನೇಕ ಜನರು ಈ ಘಟನೆಯ ಬಗ್ಗೆ ತಮಾಷೆ ಮಾಡಿದರು. ಕೆಲವು ಸಂಸ್ಕೃತಿಗಳಲ್ಲಿ, ಬಿಳಿ ಬಣ್ಣ ಇರುವ ಜನರು ಕೆಲವೊಮ್ಮೆ ದೆವ್ವ ಅಥವಾ ದುಷ್ಟಶಕ್ತಿಗಳಾಗಿರುತ್ತಾರೆ ಎಂಬ ನಂಬಿಕೆಯಿದೆ. ಹೀಗಾಗಿ ಮಕ್ಕಳು ಭಯಭೀತರಾಗಿರಬಹುದೆಂದು ಒಬ್ಬ ವ್ಯಕ್ತಿ ಹೇಳಿದ್ದಾರೆ.

Leave a Reply

Your email address will not be published. Required fields are marked *

error: Content is protected !!