ಉದಯವಾಹಿನಿ, ಇಸ್ಲಮಾಬಾದ್‌: ಪಾಕಿಸ್ತಾನದ ಖೈಬರ್ ಪಖ್ತುಂಖ್ವಾದ ತಿರಾಹ್ ಕಣಿವೆಯ ಸೋಮವಾರ ಮುಂಜಾನೆ ಪಾಕಿಸ್ತಾನ ವಾಯುಪಡೆ ನಡೆಸಿದ ವೈಮಾನಿಕ ದಾಳಿಯಲ್ಲಿ ಮಹಿಳೆಯರು ಮತ್ತು ಮಕ್ಕಳು ಸೇರಿ ಕನಿಷ್ಠ 30 ನಾಗರಿಕರು ಮೃತಪಟ್ಟಿದ್ದಾರೆ. ತೆಹ್ರೀಕ್-ಇ-ತಾಲಿಬಾನ್ ಪಾಕಿಸ್ತಾನ (TTP) ಉಗ್ರರನ್ನು ಗುರಿಯಾಗಿಸಿರುವುದಾಗಿ ಹೇಳಲಾಗಿದೆ. ಆದರೆ, ಸ್ಥಳೀಯರು ಮತ್ತು ಪ್ರತ್ಯಕ್ಷದರ್ಶಿಗಳು ಈ ದಾಳಿಯನ್ನು “ನಾಗರಿಕರ ಹತ್ಯಾಕಾಂಡ” ಎಂದು ಕರೆದಿದ್ದಾರೆ.
ಗುಪ್ತಚರ ಮೂಲಗಳ ಪ್ರಕಾರ, ಮುಂಜಾನೆ 2 ಗಂಟೆ ಸುಮಾರಿಗೆ JF-17 ಥಂಡರ್ ಯುದ್ಧ ವಿಮಾನಗಳು ಎಂಟು ಬಾಂಬ್‌ಗಳನ್ನು ಎಸೆದಿದ್ದು. ಈ ದಾಳಿಯಿಂದ ನಾಗರಿಕ ವಸತಿ ಪ್ರದೇಶಗಳು ಧ್ವಂಸಗೊಂಡವು. ಮನೆಗಳು ಕುಸಿದು, ಹಲವು ಜನರು ಅವಶೇಷಗಳಡಿ ಸಿಕ್ಕಿಹಾಕಿಕೊಂಡಿದ್ದಾರೆ. “ಬೆಳಗಿನ ಜಾವದ ವೇಳೆಗೆ ಗ್ರಾಮವೆಲ್ಲ ಶವಗಳಿಂದ ತುಂಬಿತ್ತು, ಜಾನುವಾರುಗಳು ನಾಶವಾದವು” ಎಂದು ಸ್ಥಳೀಯರು ವಿವರಿಸಿದ್ದಾರೆ.
ಗುಪ್ತಚರ ವಿಶ್ಲೇಷಕರು, “LS-6 ಬಾಂಬ್‌ಗಳ ಬಳಕೆಯು ಉದ್ದೇಶಿತ ದಾಳಿಯನ್ನು ಸೂಚಿಸುತ್ತದೆ, ಇದು ಆಕಸ್ಮಿಕ ಹಾನಿಯಲ್ಲ” ಎಂದಿದ್ದಾರೆ. ಈ ಕೃತ್ಯವು ಅಂತಾರಾಷ್ಟ್ರೀಯ ಮಾನವೀಯ ಕಾನೂನಿನ ಉಲ್ಲಂಘನೆಯಾಗಿದೆ ಎಂದು ಆರೋಪಿಸಲಾಗಿದೆ. “ಇಸ್ಲಾಮಾಬಾದ್ ಆಂತರಿಕ ದಮನಕ್ಕೆ ಉಗ್ರ ನಿಗ್ರಹದ ಹೆಸರಿನಲ್ಲಿ ಕಾರ್ಯಾಚರಣೆಯನ್ನು ದುರುಪಯೋಗ ಮಾಡುತ್ತಿದೆ” ಎಂದು ಮೂಲಗಳು ತಿಳಿಸಿವೆ. ಈ ದಾಳಿಯು ಪಶ್ತೂನ್ ಜನರ ವಿರುದ್ಧದ ವ್ಯವಸ್ಥಿತ ಕಾರ್ಯಾಚರಣೆಯ ಭಾಗವಾಗಿರಬಹುದು ಎಂದು ಶಂಕಿಸಲಾಗಿದೆ.

Leave a Reply

Your email address will not be published. Required fields are marked *

error: Content is protected !!