ಉದಯವಾಹಿನಿ, ಫ್ಲೋರಿಡಾ: ಚೀಲವೊಂದರಲ್ಲಿ ಮಾನವ ತಲೆಬುರುಡೆ, ಮೂಳೆಗಳು ಪತ್ತೆಯಾಗಿರುವ ಘಟನೆ ಫ್ಲೋರಿಡಾದ ಟ್ಯಾಂಪಾ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ನಡೆದಿದೆ. ಸಿಲ್ವರ್ ಶೀಟ್ ನಲ್ಲಿ ಸುತ್ತಿ ಇಡಲಾಗಿದ್ದು ಮಾನವನ ಮೂಳೆ ಮತ್ತು ತಲೆಬುರುಡೆಯನ್ನು ಧಾರ್ಮಿಕ ಬಳಕೆಗೆ ಉದ್ದೇಶಿಸಲಾಗಿತ್ತು ಎಂದು ಅದನ್ನು ಹೊತ್ತೊಯ್ಯುತ್ತಿದ್ದ ಪ್ರಯಾಣಿಕ ಹೇಳಿದ್ದಾನೆ. ವಿಮಾನ ನಿಲ್ದಾಣದಲ್ಲಿ ನಿತ್ಯದ ತಪಾಸಣೆ ವೇಳೆ ವ್ಯಕ್ತಿಯೊಬ್ಬ ಮಾನವನ ಮೂಳೆಗಳು, ತಲೆಬುರುಡೆಯೊಂದಿಗೆ ಸಿಕ್ಕಿಬಿದ್ದಿದ್ದಾನೆ. ಆತನನ್ನು ವಶಕ್ಕೆ ಪಡೆದಿರುವ ಅಧಿಕಾರಿಗಳು ಹೆಚ್ಚಿನ ವಿಚಾರಣೆ ನಡೆಸುತ್ತಿದ್ದಾರೆ.ಟ್ಯಾಂಪಾ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದೊಳಗೆ ಸಿಲ್ವರ್ ಶೀಟ್ ನಲ್ಲಿ ತಲೆಬುರುಡೆ ಮತ್ತು ಇತರ ಮಾನವ ಅವಶೇಷಗಳನ್ನು ಕೊಂಡೊಯ್ಯುತ್ತಿದ್ದ ವ್ಯಕ್ತಿ ಆರಂಭದಲ್ಲಿ ಇದರಲ್ಲಿರುವುದು ಹತ್ತು ಸಿಗಾರ್ ಎಂದು ಹೇಳಿದ್ದ. ಆದರೆ ಯುಎಸ್ ಕಸ್ಟಮ್ಸ್ ಮತ್ತು ಗಡಿ ರಕ್ಷಣಾ ಏಜೆಂಟ್‌ಗಳು ಇದರ ಪರಿಶೀಲನೆ ನಡೆಸಿದಾಗ ಪ್ರಕರಣ ಬೆಳಕಿಗೆ ಬಂದಿದೆ.
ಇದನ್ನು ಧಾರ್ಮಿಕ ಕಾರ್ಯಕ್ಕಾಗಿ ಕೊಂಡೊಯ್ಯುತ್ತಿರುವುದಾಗಿ ಆತ ಹೇಳಿದ್ದಾನೆ.

Leave a Reply

Your email address will not be published. Required fields are marked *

error: Content is protected !!