ಉದಯವಾಹಿನಿ, ನವದೆಹಲಿ: ಭಾರತೀಯ ಎಂಜಿನಿಯರ್ ಜೋಡಿಯೊಂದು ವಿಚಿತ್ರ ಸಂಶೋಧನೆಗಾಗಿ ಇರುವ ವಿಜ್ಞಾನದ ನೊಬೆಲ್ ಪ್ರಶಸ್ತಿಯನ್ನು ಗೆದ್ದುಕೊಂಡಿದೆ. ವಾಸನೆ ಬೀರುವ ಶೂಗಳಿಗೆ ಪರಿಹಾರದ ದಾರಿ ತೋರಿದ ಶಿವ ನಾಡರ್ ವಿಶ್ವವಿದ್ಯಾಲಯದ ಸಹಾಯಕ ಪ್ರಾಧ್ಯಾಪಕ ವಿಕಾಶ್ ಕುಮಾರ್ ಮತ್ತು ಅವರ ವಿದ್ಯಾರ್ಥಿ ಸಂಶೋಧಕ ಸಾರ್ಥಕ್ ಮಿತ್ತಲ್ 2025ರ ವಿಲಕ್ಷಣ ವಿಜ್ಞಾನದ ನೊಬೆಲ್ ಪ್ರಶಸ್ತಿಗೆ ಪಾತ್ರರಾಗಿದ್ದಾರೆ. ಇವರು ಶೂಗಳ ವಾಸನೆ ಹೋಗಲಾಡಿಸಲು ಯುವಿ ದೀಪಗಳನ್ನು ಅಳವಡಿಸಿರುವ ಶೂ ರಾಕ್‌ಗಳನ್ನು ಸಂಶೋಧಿಸಿದ್ದು, ಇದು ಜಾಗತಿಕ ಮನ್ನಣೆ ಪಡೆದಿದೆ.ಶೂಗಳ ದುರ್ವಾಸನೆಯ ವಿರುದ್ಧ ಹೋರಾಡಲು ಯುವಿ ದೀಪಗಳನ್ನು ಅಳವಡಿಸಲಾದ ಶೂ ರಾಕ್‌ಗಳನ್ನು ಮಾಡಿರುವ ವಿಕಾಶ್ ಕುಮಾರ್ ಮತ್ತು ಸಾರ್ಥಕ್ ಮಿತ್ತಲ್ ಅವರ ಈ ಸಾಧನೆ ಹಾಸ್ಟೆಲ್‌ಗಳ ಸಾಮಾನ್ಯ ಸಮಸ್ಯೆಯನ್ನು ಪರಿಹರಿಸಿದೆ. ಜಗತ್ತಿನ ಗಮನ ಸೆಳೆದ ಈ ಶೂ ರಾಕ್ ನೇರಳಾತೀತ ಬೆಳಕಿನೊಂದಿಗೆ ಶೂಗಳ ವಾಸನೆಯನ್ನು ಹೋಗಲಾಡಿಸುತ್ತದೆ.
ವಿಚಿತ್ರ ನೊಬೆಲ್ ಪ್ರಶಸ್ತಿಯು ವಿಚಿತ್ರ ಸಂಶೋಧನೆಗಾಗಿ ನೀಡಲಾಗುವ ಗೌರವವಾಗಿದೆ. ಈ ವರ್ಷದ ವಿಜೇತರಲ್ಲಿ ಪಿಜ್ಜಾ ಪ್ರೀತಿಯ ಹಲ್ಲಿಗಳು, ಜೀಬ್ರಾ ಪಟ್ಟೆ ಹಸುಗಳು ಮತ್ತು ಯುವಿ ಶೂ ರಾಕ್‌ಗಳು ಸೇರಿವೆ.ಶಿವ ನಾಡರ್ ವಿಶ್ವವಿದ್ಯಾಲಯದ ಸಹಾಯಕ ಪ್ರಾಧ್ಯಾಪಕ ವಿಕಾಶ್ ಕುಮಾರ್ ಮತ್ತು ಪ್ರಸ್ತುತ ನ್ಯೂಜೆನ್ ಸಾಫ್ಟ್‌ವೇರ್‌ನಲ್ಲಿ ಕೆಲಸ ಮಾಡುತ್ತಿರುವ ಅವರ ವಿದ್ಯಾರ್ಥಿ ಸಂಶೋಧಕ ಸಾರ್ಥಕ್ ಮಿತ್ತಲ್ ವಾಸನೆ ಬೀರುವ ಶೂಗಳಿಗೆ ಕಾರಣವಾಗುವ ಬ್ಯಾಕ್ಟೀರಿಯಾವನ್ನು ನಿಯಂತ್ರಗೊಳಿಸುವ ಯುವಿ ದೀಪಗಳನ್ನು ಅಳವಡಿಸಲಾದ ರಾಕ್‌ಗಳನ್ನು ತಯಾರಿಸಿದ್ದಾರೆ. 2022ರಲ್ಲಿ ಪ್ರಕಟವಾದ ಇವರ ಸಂಶೋಧನ ವರದಿಗೆ ಇದೀಗ ಇಗ್ ನೊಬೆಲ್ ಪ್ರಶಸ್ತಿ ಸಿಕ್ಕಿದೆ.

Leave a Reply

Your email address will not be published. Required fields are marked *

error: Content is protected !!