ಉದಯವಾಹಿನಿ, ಮೈಸೂರು: ನಗರದಲ್ಲಿಂದು ಮಹಿಷ ದಸರಾ ಆಚರಣೆ ನಡೆಯಲಿದೆ. ಈ ಹಿನ್ನೆಲೆಯಲ್ಲಿ ಚಾಮುಂಡಿ ಬೆಟ್ಟದಲ್ಲಿ ನಿಷೇಧಾಜ್ಞೆ ಜಾರಿ ಮಾಡಲಾಗಿದೆ. ಚಾಮುಂಡಿ ಬೆಟ್ಟದಲ್ಲಿನ ಮಹಿಷಾಸುರ ಪ್ರತಿಮೆ ಸುತ್ತ 200 ಮೀಟರ್ ವ್ಯಾಪ್ತಿಯಲ್ಲಿ ನಿಷೇಧಾಜ್ಞೆ ಮಾಡಿ ಪೊಲೀಸ್ ಆಯುಕ್ತರು ಆದೇಶಿಸಿದ್ದಾರೆ. ತಡರಾತ್ರಿ 12 ಗಂಟೆಯಿಂದಲೇ ಸೆ.25ರ ಬೆಳಗ್ಗೆ 6 ಗಂಟೆಯವರೆಗೂ ನಿಷೇಧಾಜ್ಞೆ ಜಾರಿ ಮಾಡಲಾಗಿದೆ. ಯಾವುದೇ ಸಭೆ, ಸಮಾರಂಭ, ಮೆರವಣಿಗೆ ನಡೆಸುವಂತಿಲ್ಲ ಎಂದು ಆದೇಶಿಸಲಾಗಿದೆ.
ವಿಶ್ವವಿಖ್ಯಾತ ನಾಡಹಬ್ಬ ಮೈಸೂರು ದಸರಾದಲ್ಲಿ ಹತ್ತು ಹಲವು ಆಕರ್ಷಣೆಗಳು ಜನರನ್ನ ಕೈಬೀಸಿ ಕರೆಯುತ್ತಿವೆ.

ವಿಂಟೇಜ್ ಕಾರುಗಳ ಪ್ರದರ್ಶನ ಕೂಡ ಒಂದು. ನಾವು ನೀವು ನೋಡಿರದ ಎಷ್ಟೋ ಅದ್ಬುತ ವಿಂಟೇಜ್ ಕಾರುಗಳ ಒಂದೇ ಜಾಗದಲ್ಲಿ ಕಾಣುಸಿಗುತ್ತೀರೋದು ವಿಶೇಷ. ಮತ್ತೊಂದೆಡೆ ಯುವ ದಸರಾಕ್ಕೂ ಚಾಲನೆ ಸಿಕ್ಕಿದ್ದು ಅರ್ಜುನ್ ಜನ್ಯ ಮ್ಯೂಸಿಕ್ ಕಲರವ ಮೋಡಿ ಮಾಡಿತ್ತು. ಇಂದು ಮಹಿಷ ದಸರಾ ಹಿನ್ನೆಲೆ. ಚಾಮುಂಡಿ ಬೆಟ್ಟದಲ್ಲಿ ನಿಷೇಧಾಜ್ಞೆ ಜಾರಿ ಮಾಡಲಾಗಿದೆ. ವಿಶ್ವವಿಖ್ಯಾತ ನಾಡಹಬ್ಬ ಮೈಸೂರು ದಸರಾದ ಸಂಭ್ರಮ ಹಿಮ್ಮಡಿಯಾಗಿದೆ. ನಿತ್ಯ ಹತ್ತು ಹಲವು ವಿಶೇಷ ಕಾರ್ಯಕ್ರಮಗಳು ದಸರಾ ರಂಗನ್ನ ಹೆಚ್ಚಿಸುತ್ತಿವೆ. ಈ ಪೈಕಿ ವಿಂಟೇಜ್ ಕಾರುಗಳು ಪ್ರದರ್ಶನವು ಒಂದು. ಪ್ರತಿವರ್ಷದಂತೆ ಈ ವರ್ಷವು ವಿಂಟೇಜ್ ಕಾರುಗಳು ದಸರಾ ರಂಗನ್ನ ಹೆಚ್ಚಿಸಿದ್ದು, ಜನರನ್ನ ಆಕರ್ಷಿಸುತ್ತಿದೆ.

Leave a Reply

Your email address will not be published. Required fields are marked *

error: Content is protected !!