ಉದಯವಾಹಿನಿ, ಸೀತಾಪುರ್: ಉತ್ತರ ಪ್ರದೇಶದ ಸೀತಾಪುರ್‌ನ ಮುಖ್ಯಶಿಕ್ಷಕರೊಬ್ಬರು ಶಿಕ್ಷಣಾಧಿಕಾರಿಗೆ ಕಚೇರಿಯಲ್ಲೇ ಬೆಲ್ಟ್‌ನಿಂದ ಹಲ್ಲೆ ಮಾಡಿದ್ದಾರೆ. ಶಾಲಾ ಮುಖ್ಯಶಿಕ್ಷಕ ಬಿರ್ಜೇಂದ್ರ ಕುಮಾರ್ ವರ್ಮಾ, ಅಧಿಕಾರಿ ಅಖಿಲೇಶ್ ಪ್ರತಾಪ್ ಸಿಂಗ್ ಅವರ ಮೇಲೆ ಬೆಲ್ಟ್‌ನಿಂದ ದಾಳಿ ಮಾಡಿದ್ದಾರೆ. ಈ ಘಟನೆ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಘಟನೆಯಲ್ಲಿ ಮಹಮೂದಾಬಾದ್‌ನ ನದ್ವಾ ಪ್ರಾಥಮಿಕ ಶಾಲೆಯ ಮುಖ್ಯಶಿಕ್ಷಕ ವರ್ಮಾ, ತಮ್ಮ ವಿರುದ್ಧದ ದೂರಿನ ಬಗ್ಗೆ ಚರ್ಚಿಸಲು ಶಿಕ್ಷಣಾಧಿಕಾರಿಗೆ ಕಚೇರಿಗೆ ಬಂದಿದ್ದರು. ಚರ್ಚೆಯ ವೇಳೆ ಕೋಪಗೊಂಡ ವರ್ಮಾ, ಫೈಲ್‌ನ್ನು ಟೇಬಲ್‌ಗೆ ಎಸೆದು, ಬೆಲ್ಟ್‌ನಿಂದ ನಾಲ್ಕು ಬಾರಿ ಹೊಡೆದರು. ಸಿಬ್ಬಂದಿ ತಡೆಯಲು ಯತ್ನಿಸಿದರೂ ದಾಳಿ ನಡೆಸಿ ಅಧಿಕಾರಿಯ ಮೊಬೈಲ್ ಕಿತ್ತುಕೊಂಡು ಒಡೆದರು.
ಮುಖ್ಯಶಿಕ್ಷಕ ವರ್ಮಾ ಶಾಲೆಯ ಸಹಾಯಕ ಶಿಕ್ಷಕಿಗೆ ನಿರ್ಲಕ್ಷ್ಯ ತೋರಿದ್ದಾರೆಂದು ಆರೋಪದಿಂದ ನೋಟಿಸ್ ಜಾರಿ ಮಾಡಿದ್ದರು. ಈ ನೋಟಿಸ್ ರಾಜಕೀಯ ಗುಂಪುಗಳಲ್ಲಿ ಹಂಚಿಕೆಯಾದ ಕಾರಣ ಶಿಕ್ಷಕಿ ದೂರು ನೀಡಿದ್ದರು. ಈ ಬಗ್ಗೆ ವಿವರಣೆ ನೀಡಲು ಶಿಕ್ಷಣಾಧಿಕಾರಿಗೆ ಕಚೇರಿಗೆ ಮುಖ್ಯಶಿಕ್ಷಕ ಆಗಮಿಸಿದ್ದರು. ಈ ವೇಳೆ ಮುಂದೆ ಇಂತಹ ಕೃತ್ಯ ಎಸಗದಂತೆ ಎಚ್ಚರಿಕೆ ನೀಡಿದ್ದು ಮುಖ್ಯಶಿಕ್ಷಕನ ಕೋಪಕ್ಕೆ ಕಾರಣವಾಗಿದೆ ಎಂದು ವರದಿ ತಿಳಿಸಿದೆ.
