ಉದಯವಾಹಿನಿ, ಬೆಂಗಳೂರು: ರಾಕಿಂಗ್ ಸ್ಟಾರ್ ಯಶ್ ಅವರು ಕನ್ನಡ ಸಿನಿಮಾ ಇಂಡಸ್ಟ್ರಿಯಲ್ಲಿ ಸಾಲು ಸಾಲು ಹಿಟ್ ಸಿನಿಮಾ ನೀಡಿ ಅಪಾರ ಅಭಿಮಾನಿಗಳ ಮನ ಗೆದ್ದಿದ್ದಾರೆ. ಕೆಜಿಎಫ್ ಸಿನಿಮಾದ ಬಳಿಕ ಪ್ಯಾನ್ ಇಂಡಿಯಾ ಮಟ್ಟದಲ್ಲಿ ನಟ ರಾಕಿಂಗ್ ಸ್ಟಾರ್ ಯಶ್ ಅವರು ಗುರುತಿಸಿಕೊಂಡಿದ್ದಾರೆ. ಅವರ ಪತ್ನಿ ರಾಧಿಕಾ ಪಂಡಿತ್ ಕೂಡ ಕನ್ನಡದ ಸಿನಿಮಾ ಇಂಡಸ್ಟ್ರಿಯಲ್ಲಿ ಟಾಪ್ ಹೀರೋಯಿನ್ ಆಗಿದ್ದವರು. ಅಷ್ಟು ಮಾತ್ರವಲ್ಲದೆ ಅವರ ತಾಯಿ ಪುಷ್ಪಾ ಅವರು ಕೂಡ ಇತ್ತೀಚೆಗಷ್ಟೇ ಸಿನಿಮಾ ಒಂದಕ್ಕೆ ನಿರ್ಮಾಪಕಿಯಾಗಿ ಸಿನಿಮಾ ಇಂಡಸ್ಟ್ರಿಯಲ್ಲಿ ತೊಡಗಿಕೊಂಡಿದ್ದಾರೆ. ಪುಷ್ಪಾ ಅರುಣ್ ಕುಮಾರ್ ನಿರ್ಮಾಣದಲ್ಲಿ ಮೂಡಿಬಂದ ಕೊತ್ತಲವಾಡಿ (Kothalavadi Movie) ಸಿನಿಮಾ ಸಾಧಾರಣ ಯಶಸ್ಸು ಕಂಡಿದ್ದರು ಕೂಡ ಇದೇ ಸಿನಿಮಾದಿಂದ ಯಶ್ ತಾಯಿ ಪುಷ್ಪಾ ಅವರು ಈ ಹಿಂದಿ ನಿಂದಲೂ ಸಾಕಷ್ಟು ವಿವಾಧಗಳಿಗೆ ಗುರಿಯಾಗಿದ್ದಾರೆ. ಸಹ ಕಲಾವಿದರಿಗೆ ನೀಡಬೇಕಿದ್ದ ಹಣವನ್ನು ಸೆಟಲ್ ಮಾಡಿಲ್ಲ ಎಂಬ ಕಾರಣಕ್ಕೆ ನಿರ್ಮಾಪಕಿ ಪುಷ್ಪಾ ವಿರುದ್ಧ ಸಹ ನಟಿಯು ಅಸಮಧಾನ ಹೊರಹಾಕಿದ್ದು ಈ ವಿಚಾರ ದೊಡ್ಡ ಮಟ್ಟಿಗೆ ಸುದ್ದಿಯಾಗಿತ್ತು. ಇದೀಗ ಸಹ ಕಲಾವಿದೆ ಹಣ ಕೇಳುತ್ತಾರೆ ಎಂಬ ಕಾರಣಕ್ಕೆ ಸಿನಿಮಾ ತಂಡದವರು ಆಕೆಯ ನಂಬರ್ ಅನ್ನೇ ಬ್ಲಾಕ್ ಮಾಡಿದ್ದಾರೆ ಎಂದು ಹೇಳಲಾಗುತ್ತಿದೆ.ಕೊತ್ತಲವಾಡಿ ಚಿತ್ರದಲ್ಲಿ ಅಭಿನಯಿಸಿದ್ದ ಯುವ ನಟಿ ಸ್ವರ್ಣ ಅವರು ಚಿತ್ರ ತಂಡದ ವಿರುದ್ಧ ಕಿಡಿಕಾರಿದ್ದಾರೆ. ಈ ಸಿನಿಮಾದ ನಿರ್ದೇಶಕ ಶ್ರೀರಾಜ್ ಅವರ ವಿರುದ್ಧ ಸಹ ಕಲಾವಿದೆ ಸ್ವರ್ಣ ಅವರು ನಂಬಿಕೆ ದ್ರೋಹದ ಆರೋಪ ಮಾಡಿದ್ದಾರೆ. ಸಿನಿಮಾ ದಲ್ಲಿ ನಟಿಸಿದರೂ ಹಣ ನೀಡಿಲ್ಲ ಎಂಬ ಬಗ್ಗೆ ವಿಡಿಯೋಗಳನ್ನು ಹಂಚಿಕೊಂಡು ಕಣ್ಣೀರಿಟ್ಟು ಆಕ್ರೋಶ ಹೊರಹಾಕಿದ್ದರು. ಇದೀಗ ಮತ್ತೆ ತನ್ನ ಮೊಬೈಲ್ ಸಂಖ್ಯೆ ಬ್ಲಾಕ್ ಮಾಡಿದ್ದ ಬಗ್ಗೆ ಖಾಸಗಿ ಸುದ್ದಿವಾಹಿನಿಗೆ ನೀಡಿದ್ದ ಸಂದ ರ್ಶನದಲ್ಲಿ ಅವರು ತಿಳಿಸಿದ್ದಾರೆ.
