ಉದಯವಾಹಿನಿ, ಬೆಂಗಳೂರು: ಬುರುಡೆ ಗ್ಯಾಂಗ್‌ನ ಮುಖವಾಡ ಮತ್ತೊಮ್ಮೆ ಬಯಲಾಗಿದೆ. ಸುಪ್ರೀಂಕೋರ್ಟ್‌ನಲ್ಲಿ ಛೀಮಾರಿ ಹಾಕಿಸಿಕೊಂಡಿದ್ದ ವಿಚಾರವನ್ನು ಮುಚ್ಚಿಟ್ಟು ಸರ್ಕಾರವನ್ನೇ ಯಾಮಾರಿಸಿದ್ದ ಬುರುಡೆ ಗ್ಯಾಂಗ್ ಹಾಗೂ ಸುಪ್ರೀಂಕೋರ್ಟ್‌ ವಕೀಲ ಧನಂಜಯ್ ಇಡೀ ಸಮಾಜದ ಮುಂದೆ ಕ್ಷಮೆ ಕೇಳಬೇಕು ಎಂದು ಚಿಂತಕ ಚಕ್ರವರ್ತಿ ಸೂಲಿಬೆಲೆ ಆಗ್ರಹಿಸಿದ್ದಾರೆ. ಈ ವಿಚಾರವಾಗಿ `ಮಾತನಾಡಿದ ಅವರು, ಮೇ ತಿಂಗಳಲ್ಲಿ ಸುಪ್ರೀಂಕೋರ್ಟ್‌ನಲ್ಲಿ ಬುರುಡೆ ಗ್ಯಾಂಗ್ ಸಾರ್ವಜನಿಕ ಹಿತಾಸಕ್ತಿಯ ಅರ್ಜಿ ಹಾಕಿತ್ತು. ಅದನ್ನು ಕೋರ್ಟ್ ವಜಾಗೊಳಿಸಿತ್ತು. ಅಷ್ಟು ಮಾತ್ರವಲ್ಲದೇ, ಇದು ವೈಯಕ್ತಿಕ ಹಿತಾಸಕ್ತಿಯ ಅರ್ಜಿ ಎಂದು ಛೀಮಾರಿ ಹಾಕಿತ್ತು. ಈ ವಿಚಾರವನ್ನು ಮುಚ್ಚಿಟ್ಟು ಬುರುಡೆ ಗ್ಯಾಂಗ್ ಸರ್ಕಾರವನ್ನೇ ಯಾಮಾರಿಸಿದೆ ಎಂದು ಕಿಡಿಕಾರಿದ್ದಾರೆ.
ಈ ಬುರುಡೆ ಗ್ಯಾಂಗ್ ಮೊದಲ ದಿನದಿಂದಲೇ ಸತ್ಯವನ್ನು ಮುಚ್ಚಿಕೊಂಡು ಸುಳ್ಳಿನ ಸರಮಾಲೆಯನ್ನೇ ಕಟ್ಟಿಕೊಂಡು ಬಂದಿದೆ. ಮಾಧ್ಯಮಗಳೆಲ್ಲವು ಈ ವಿಚಾರವನ್ನು ಪ್ರಸಾರ ಮಾಡದೇ ಇರುತ್ತಿದ್ದರೆ, ಬುರುಡೆ ಗ್ಯಾಂಗ್‌ನ ನಿಜಬಣ್ಣ ಬಯಲಾಗುತ್ತಿರಲಿಲ್ಲ. ಸುಪ್ರೀಂ ಕೋರ್ಟ್‌ಯೇ ಬುರುಡೆ ಗ್ಯಾಂಗ್ ಅನ್ನು ಪೈಸಾ ಇಂಟರೆಸ್ಟ್ ಲಿಟಿಗೇಷನ್ ಎಂದು ಛೀಮಾರಿ ಹಾಕಿದ್ರೂ, ಇವರು ಸುಳ್ಳು ಹೇಳಿಕೊಂಡು ಇಲ್ಲಿವರೆಗೆ ಬಂದಿದ್ದಾರೆ ಎಂದು ಗುಡುಗಿದ್ದಾರೆ.
ಧರ್ಮಸ್ಥಳ ವಿಚಾರದಲ್ಲಿ ಈ ಗ್ಯಾಂಗ್ ಷಡ್ಯಂತ್ರ ರೂಪಿಸಿತ್ತು. ಇದರಲ್ಲಿ ಕರ್ನಾಟಕ ಸರ್ಕಾರವೇ ಭಾಗಿಯಾಗಿದೆ ಎಂಬ ಅನುಮಾನ ಮೂಡುತ್ತಿದೆ. ಸುಪ್ರೀಂಗೆ ಪಿಐಎಲ್ ಹೋಗಿದೆ. ಅದು ಕರ್ನಾಟಕಕ್ಕೆ ಸಂಬಂಧಪಟ್ಟಿದ್ದು ಗಮನಿಸಬೇಕು ಅಂತ ಗೊತ್ತಿಲ್ಲ ಅಂದ್ರೆ ಇದು ಬೇಜಾವಾಬ್ದಾರಿ ಸರ್ಕಾರವಾಗಿದೆ. ಏನಾದ್ರೂ ನಡೆಯಲಿ, ನನ್ನ ಪಾಡಿಗೆ ನಾನು ಉಂಡ್ಕೊಂಡು, ತಿಂದ್ಕೊಂಡು ಹಾಯಾಗಿ ಇರುವಂತದ್ದ ಎಂದು ವಾಗ್ದಾಳಿ ನಡೆಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!