ಉದಯವಾಹಿನಿ, ಶಿವಮೊಗ್ಗ: ನಗರದ ಮಹಿಳೆಯೊಬ್ಬರು 30 ಲಕ್ಷ ರೂ. ಬಹುಮಾನದ ಆಸೆಗೆ 3,71,400 ರೂ. ಕಳೆದುಕೊಂಡಿದ್ದಾರೆ. ಟ್ಯಾಂಕ್ ಮೊಹಲ್ಲಾದ ನಿವಾಸಿಯಾದ ಮಹಿಳೆಗೆ ಅಪರಿಚಿತ ವ್ಯಕ್ತಿಯೊಬ್ಬ ವಾಟ್ಸಾಪ್ ಡಿಪಿಗೆ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದ ಲೋಗೋ ಹಾಕಿಕೊಂಡು, ಈ ವಂಚನೆ ಮಾಡಿದ್ದಾನೆ.
ಅಪರಿಚಿತ ವ್ಯಕ್ತಿ, ವಾಟ್ಸ್ಯಾಪ್‌ನಲ್ಲಿ ತಾನು ಬ್ಯಾಂಕ್ ಮ್ಯಾನೇಜರ್ ಎಂದು ಪರಿಚಯಿಸಿಕೊಂಡಿದ್ದಾನೆ. ಬಳಿಕ ಸಂದೇಶ ಕಳುಹಿಸಿ, ನೀವು 30 ಲಕ್ಷ ರೂ. ಬಹುಮಾನ ಗೆದ್ದಿದ್ದೀರಿ ಎಂದು ನಂಬಿಸಿದ್ದಾನೆ. ಈ ಸಂದೇಶದಿಂದ ಸಂತೋಷಗೊಂಡ ಮಹಿಳೆ ಆತನ ಮಾತನ್ನು ನಂಬಿದ್ದಾರೆ. ನಂತರ, “ನಿಮ್ಮ ಖಾತೆಗೆ ಬಹುಮಾನದ ಹಣವನ್ನು (Money) ವರ್ಗಾಯಿಸಲು ಖಾತೆ ಸಂಖ್ಯೆಯನ್ನು ನೀಡಿ” ಎಂದು ವಂಚಕ ಹೇಳಿ ಮಹಿಳೆಯಿಂದ ಬ್ಯಾಂಕ್ ಖಾತೆಯ ಸಂಖ್ಯೆಯನ್ನು ಪಡೆದಿದ್ದಾನೆ.

Leave a Reply

Your email address will not be published. Required fields are marked *

error: Content is protected !!