ಉದಯವಾಹಿನಿ, ಕ್ಯಾಲಿಫೋರ್ನಿಯಾ : ಅಮೆರಿಕದ ಕ್ಯಾಲಿಫೋರ್ನಿಯಾದಲ್ಲಿರುವ ಆಭರಣದ ಅಂಗಡಿಗೆ 25 ಮಂದಿ ಕಳ್ಳರು ಶಸ್ತ್ರಾಸ್ತ್ರಗಳ ಸಮೇತ ನುಗ್ಗಿರುವ ವಿಡಿಯೋ ಎಲ್ಲೆಡೆ ವೈರಲ್ ಆಗಿದೆ. ಅಂಗಡಿಯಲ್ಲಿ ಸುಮಾರು 9 ಕೋಟಿ ರೂ. ಮೌಲ್ಯದ ಚಿನ್ನಾಭರಣವನ್ನು ಲೂಟಿ ಮಾಡಿದ್ದಾರೆ. ಇಲ್ಲಿಯವರೆಗೆ 7 ಶಂಕಿತರನ್ನು ಬಂಧಿಸಲಾಗಿದೆ. ಕೆಲವು ಆಭರಣಗಳನ್ನು ವಶಪಡಿಸಿಕೊಳ್ಳಲಾಗಿದೆ. ಮುಸುಕುಧಾರಿಗಳ ಬಳಿ ಬಂದೂಕು ಕೂಡಾ ಇತ್ತು. ಎರಡು ವರ್ಷಗಳಲ್ಲಿ ಹೆಲ್ಲರ್ ಜ್ಯುವೆಲ್ಲರ್ಸ್ ಅನ್ನು ಗುರಿಯಾಗಿಸಿಕೊಂಡು ಭಾರಿ ದರೋಡೆ ನಡೆಸುತ್ತಿರುವುದು ಇದು ಎರಡನೇ ಬಾರಿಯಾಗಿದೆ. 2023 ರಲ್ಲಿ ಸೇಂಟ್ ಪ್ಯಾಟ್ರಿಕ್ ದಿನದಂದು ಏಳು ಮುಸುಕುಧಾರಿಗಳ ಗುಂಪು ಇದೇ ರೀತಿ ಅಂಗಡಿಗೆ ನುಗ್ಗಿ ಕೋಟಿಗಟ್ಟಲೆ ಬೆಲೆ ಬಾಳುವ ಆಭರಣಗಳನ್ನು ದೋಚಿದ್ದರು.

Leave a Reply

Your email address will not be published. Required fields are marked *

error: Content is protected !!