ಉದಯವಾಹಿನಿ, ಚಿಕ್ಕಮಗಳೂರು: ಟ್ರಕ್ಕಿಂಗ್ ಹೋಗಿದ್ದ ಪ್ರವಾಸಿಗನೋರ್ವ ಹೃದಯಘಾತದಿಂದ ಸಾವನ್ನಪ್ಪಿರುವ ದಾರುಣ ಘಟನೆ ನಡೆದಿದೆ. ರಕ್ಷಿತ್ (27) ಹೃದಯಘಾತದಿಂದ ಮೃತಪಟ್ಟ ಯುವಕನಾಗಿದ್ದಾನೆ. ಮೈಸೂರು ಮೂಲದ ಏಳು ಯುವಕರ ತಂಡ ಟ್ರಕ್ಕಿಂಗ್ ತೆರಳಿದ್ದರು. ಕುದುರೆಮುಖದಿಂದ-ನೇತ್ರಾವತಿ ಪೀಕ್ ಸ್ಪಾಟ್ ಗೆ ತೆರಳುತ್ತಿದ್ದರು. ಪೀಕ್ ಗೆ ಹೋಗುವ ಮಾರ್ಗದಲ್ಲಿ ರಕ್ಷಿತ್ ಮೃತಪಟ್ಟಿದ್ದಾನೆ. ಪೀಕ್ ನಿಂದ ಮೃತದೇಹವನ್ನ ಕಳಸಕ್ಕೆ ತಂದ ಕಳಸ ಪೊಲೀಸರು ತಂದಿದ್ದಾರೆ. ಬೆಳ್ತಂಗಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.
