ಉದಯವಾಹಿನಿ, ಥೈಲ್ಯಾಂಡ್: ಲೈಂಗಿಕ ಆಟಿಕೆ ಬಳಸುವುದು, ಇ- ಸಿಗರೇಟ್ ಸೇದುವುದು, ಒಳ ಉಡುಪುಗಳಲ್ಲಿ ಪ್ರದರ್ಶನ ನೀಡುವ ಹಳೆಯ ವಿಡಿಯೊಗಳು ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆದ ಬಳಿಕ ಥಾಯ್ ಸ್ಪರ್ಧೆಯ ವಿಜೇತೆಯೊಬ್ಬರು ಪ್ರಶಸ್ತಿ ಕಳೆದುಕೊಂಡಿದ್ದಾರೆ. ಮಿಸ್ ಗ್ರ್ಯಾಂಡ್ ಪ್ರಾಚುವಾಪ್ ಖಿರಿ ಖಾನ್ 2026ರ ಕಿರೀಟವನ್ನು ಪಡೆದ ಸುಫನ್ನೀ ನೊಯಿನೊಂಥೋಂಗ್ ಅವರು ತಮ್ಮ ಗೆಲುವಿನ ಒಂದು ದಿನದ ಅನಂತರ ಪ್ರಶಸ್ತಿಯನ್ನು ಕಳೆದುಕೊಂಡರು.
ಸುಫನ್ನೀ ನೊಯಿನೊಂಥೋಂಗ್ ಅವರು ಲೈಂಗಿಕ ಆಟಿಕೆ ಬಳಸುವುದು, ಇ-ಸಿಗರೇಟ್ ಸೇದುವುದು ಮತ್ತು ಒಳ ಉಡುಪುಗಳಲ್ಲಿ ಪ್ರದರ್ಶನ ನೀಡುವುದನ್ನು ತೋರಿಸುವ ಅನೇಕ ಹಳೆಯ ವಿಡಿಯೊಗಳು ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿತ್ತು. ಇದಾದ ಬಳಿಕ ಆಯೋಜಕರು ಅವರಿಂದ ಪ್ರಶಸ್ತಿ ಹಿಂಪಡೆಯುವ ನಿರ್ಧಾರ ಪ್ರಕಟಿಸಿದರು. ಆದರೆ ಇದು ಈಗ ಚರ್ಚೆಗೆ ಗ್ರಾಸವಾಗಿದೆ. ವೇದಿಕೆಯ ಹೊರಗೆ ಅವರ ವೈಯಕ್ತಿಕ ಆಯ್ಕೆಗಳು ವೃತ್ತಿಜೀವನದ ಮೇಲೆ ಪರಿಣಾಮ ಬೀರಬೇಕೇ ಎಂದು ಅನೇಕರು ಪ್ರಶ್ನಿಸಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿರುವ ಸ್ಪರ್ಧೆಯ ಸಮಿತಿಯು, 2026ರ ಮಿಸ್ ಗ್ರ್ಯಾಂಡ್ ಪ್ರಾಚುವಾಪ್ ಖಿರಿ ಖಾನ್ ಸ್ಪರ್ಧಿಗಳು ಎತ್ತಿಹಿಡಿಯಬೇಕಾದ ಮನೋಭಾವ ಮತ್ತು ತತ್ವಗಳಿಗೆ ಹೊಂದಿಕೆಯಾಗದ ಕೆಲವು ಚಟುವಟಿಕೆಗಳಲ್ಲಿ ಸುಫನ್ನೀ ನೊಯಿನೊಂಥೋಂಗ್ ತೊಡಗಿಸಿಕೊಂಡಿರುವುದು ಕಂಡುಬಂದಿದೆ. ಆದ್ದರಿಂದ ಅವರಿಂದ ಪ್ರಶಸ್ತಿಯನ್ನು ಹಿಂಪಡೆಯಲಾಗಿದೆ ಎಂದು ಹೇಳಿದೆ.
