ಉದಯವಾಹಿನಿ, ನವದೆಹಲಿ: ಭಾರತದಲ್ಲಿ ಅತೀ ಹೆಚ್ಚಿನ ಸಾವು ಕ್ಯಾನ್ಸರ್ ನಿಂದ ಉಂಟಾಗುತ್ತಿದೆ ಎಂದು ಅಧ್ಯಯನವೊಂದು ಹೇಳಿದೆ. ಗ್ಲೋಬಲ್ ಬರ್ಡನ್ ಆಫ್ ಡಿಸೀಸ್ ನ ಇತ್ತೀಚಿನ ಅಧ್ಯಯನದ ಪ್ರಕಾರ ದೇಶದಲ್ಲಿ ಐದು ಪ್ರಮುಖ ಮಾರಕ ಕ್ಯಾನ್ಸರ್‌ಗಳಿದ್ದು, ಇದರಲ್ಲಿ ಸ್ತನ ಶ್ವಾಸನಾಳ(Lung cancer), ಶ್ವಾಸಕೋಶ, ಅನ್ನನಾಳ, ಹೊಟ್ಟೆ, ತುಟಿ ಮತ್ತು ಬಾಯಿಯ ಕ್ಯಾನ್ಸರ್‌ಗಳು ಸೇರಿವೆ.ಅತೀ ಹೆಚ್ಚಿ ನ ಸಾವು ಸ್ತನ ಮತ್ತು ಶ್ವಾಸಕೋಶದ ಕ್ಯಾನ್ಸರ್‌ನಿಂದ ಉಂಟಾಗುತ್ತಿದೆ ಎಂದು ಅಧ್ಯಯನ ತಿಳಿಸಿದೆ.
ಭಾರತದಲ್ಲಿ ಹೆಚ್ಚಿನ ಸಾವು ಕ್ಯಾನ್ಸರ್‌ನಿಂದ ಬರುತ್ತಿದ್ದು, ಇದರಲ್ಲಿ ಸ್ತನ ಕ್ಯಾನ್ಸರ್ ಪ್ರಮುಖ ಕಾರಣ ಎನಿಸಿಕೊಂಡಿದೆ. ಬಳಿಕ ಶ್ವಾಸಕೋಶ ಮತ್ತು ಅನ್ನನಾಳದ ಕ್ಯಾನ್ಸರ್ ಸ್ಥಾನ ಪಡೆದಿದೆ. ಈ ಕುರಿತು ʼದಿ ಲ್ಯಾನ್ಸೆಟ್‌ʼನಲ್ಲಿ ಅಧ್ಯಯನವೊಂದು ಪ್ರಕಟವಾಗಿದ್ದು, ಹೃದಯ ರಕ್ತನಾಳದ ಕಾಯಿಲೆಗಳ ಅನಂತರ ಕ್ಯಾನ್ಸರ್ ಮನುಷ್ಯನ ಸಾವಿಗೆ ವಿಶ್ವದ ಎರಡನೇ ಪ್ರಮುಖ ಕಾರಣ. ಇದು ಮುಂಬರುವ ದಶಕಗಳಲ್ಲಿ ಮತ್ತಷ್ಟು ಹೆಚ್ಚಳವಾಗುವ ನಿರೀಕ್ಷೆ ಇದೆ.

ಜಿಬಿಡಿ 2023 ವಿಶ್ಲೇಷಣೆಯ ಪ್ರಕಾರ 2023ರಲ್ಲಿ ವಿಶ್ವಾದ್ಯಂತ 18.5 ಮಿಲಿಯನ್ ಹೊಸ ಕ್ಯಾನ್ಸರ್ ಪ್ರಕರಣಗಳು ಮತ್ತು 10.4 ಮಿಲಿಯನ್ ಸಾವುಗಳು ಸಂಭವಿಸಿವೆ. ಇವುಗಳಲ್ಲಿ ಸುಮಾರು ಮೂರನೇ ಎರಡರಷ್ಟು ಸಾವುಗಳು ಕಡಿಮೆ ಮತ್ತು ಮಧ್ಯಮ ಆದಾಯದ ದೇಶಗಳಲ್ಲಿ ಉಂಟಾಗುತ್ತಿದೆ. ತಂಬಾಕು ಬಳಕೆ, ಆಹಾರ ಪದ್ಧತಿ, ಸೋಂಕುಗಳು ಮತ್ತು ಮಾಲಿನ್ಯದಂತಹ ಅಪಾಯಕಾರಿ ಅಂಶಗಳು ಕ್ಯಾನ್ಸರ್ ಸಾವುಗಳಿಗೆ ಶೇ. 40ರಷ್ಟು ಕಾರಣವಾಗಿವೆ. ವಿಶ್ವದಾದ್ಯಂತ 2050ರ ವೇಳೆಗೆ ಕ್ಯಾನ್ಸರ್ ಪ್ರಕರಣಗಳು 30.5 ಮಿಲಿಯನ್ ಮತ್ತು ಇದರಿಂದ ಉಂಟಾಗುವ ಸಾವಿನ ಪ್ರಮಾಣ 18.6 ಮಿಲಿಯನ್‌ಗೆ ಏರುವ ಸಾಧ್ಯತೆ ಇದೆ ಎನ್ನುತ್ತದೆ ಅಂಕಿ ಅಂಶ. ಹೆಚ್ಚಿನ ಆದಾಯದ ದೇಶಗಳಿಗೆ ಹೋಲಿಸಿದರೆ ಕಡಿಮೆ ಮತ್ತು ಮಧ್ಯಮ ಆದಾಯದ ದೇಶಗಳಲ್ಲಿ ಇದು ಹೆಚ್ಚಾಗುವ ಸಾಧ್ಯತೆ ಇದೆ ಎನ್ನುತ್ತಾರೆ ತಜ್ಞರು.

Leave a Reply

Your email address will not be published. Required fields are marked *

error: Content is protected !!