ಉದಯವಾಹಿನಿ, ನವದೆಹಲಿ: ಭಾರತ- ಪಾಕಿಸ್ತಾನ ಯುದ್ದ ನಿಲ್ಲಿಸಿದ್ದೇ ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಎನ್ನುವ ಪಾಕಿಸ್ತಾನ ಪ್ರಧಾನಿ ಶಹಬಾದ್ ಷರೀಪ್ ಅವರ ಹೇಳಿಕೆಯನ್ನು ಭಾರತ ತಳ್ಳಿಹಾಕಿದ್ದು ಯಾವುದೇ ನಾಟಕದಿಂದ ಸತ್ಯ ಮರೆಮಾಡಲು ಸಾಧ್ಯವಿಲ್ಲ. ಪಾಕಿಸ್ತಾನ ಪ್ರಧಾನಿ ಹೇಳಿಕೆ ಅಸಂಬದ್ಧತೆಯಿಂದ ಕೂಡಿದೆ ಎಂದು ತಿರುಗೇಟು ನೀಡಿದೆ.ಆಪರೇಷನ್ ಸಿಂಧೂರ ಕಾರ್ಯಾಚರಣೆ ಸಂದರ್ಭದಲ್ಲಿ ಕದನ ವಿರಾಮಕ್ಕೆ ಪಾಕಿಸ್ತಾನ ಸೇನಾ ಪಡೆ ಭಾರತಕ್ಕೆ ಮನವಿ ಸಲ್ಲಿಸಿತು. ಈ ಯುದ್ಧದಲ್ಲಿ ಭಾರತ ಮತ್ತು ಪಾಕಿಸ್ತಾನ ನಡುವೆ ಯಾವುದೇ ೩ನೇ ವ್ಯಕ್ತಿ ಪ್ರವೇಶವಾಗಿಲ್ಲ ಎಂದು ಭಾರತ ಮತ್ತೊಮ್ಮೆ ಸ್ಪಷ್ಟಪಡಿಸಿದೆ.
ಭಾರತ, ಪಾಕ್ ನಡುವಿನ ಸಮಸ್ಯೆಗಳನ್ನು ದ್ವಿಪಕ್ಷೀಯವಾಗಿ ಬಗೆಹರಿಸಿಕೊಳ್ಳಲು ದೀರ್ಘಕಾಲದಿಂದ ಎರಡು ರಾಷ್ಟ್ರಗಳು ಒಪ್ಪಿಕೊಂಡಿವೆ. ಯಾವುದೇ ಕಾರಣಕ್ಕೂ ಈ ವಿಷಯದಲ್ಲಿ ೩ನೇ ವ್ಯಕ್ತಿಗೆ ಅವಕಾಶವಿಲ್ಲ ಎಂದು ಭಾರತ ಸ್ಪಷ್ಟವಾಗಿ ಹೇಳಿದೆ.
ಪಾಕಿಸ್ತಾನ ಪ್ರಾಯೋಜಿತ ಭಯೋತ್ಪಾದಕತೆ ಪ್ರೋತ್ಸಾಹಿಸುತ್ತಿದೆ ಎನ್ನುವುದು ಜಗತ್ತಿಗೆ ಗೊತ್ತಿದೆ. ಹೀಗಿರುವಾಗ ಯಾವುದೇ ಪಾಕ್‌ನ ಕಪಟ ನಾಟಕ ಜಗತ್ತಿನ ಮುಂದೆ ನಡೆಯುವುದಿಲ್ಲ ಎಂದು ಭಾರತ ತಿರುಗೇಟು ನೀಡಿದೆ
ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ಪಾಕಿಸ್ತಾನ ಪ್ರಧಾನಿ ಶೆಹಬಾಜ್ ಷರೀಫ್ ಮಾಡಿದ ಭಾಷಣಕ್ಕೆ ಭಾರತ ಖಾರವಾಗಿ ಪ್ರತಿಕ್ರಿಯೆ ನೀಡಿರುವ ಭಾರತೀಯ ರಾಜತಾಂತ್ರಿಕ ಪೆಟಲ್ ಗೆಹ್ಲೋಟ್, ಪಾಕಿಸ್ತಾನ ಪ್ರಧಾನಿ ಹೇಳಿಕೆಯನ್ನು ಕಟುವಾಗಿ ಟೀಕಿಸಿದ್ದಾರೆ.ಭಯೋತ್ಪಾದನೆಯ ವಿರುದ್ಧದ ಯುದ್ಧದಲ್ಲಿ ಪಾಲುದಾರರಾಗಿರುವಂತೆ ನಟಿಸುತ್ತಾ, ದಶಕದ ಕಾಲ ಒಸಾಮಾ ಬಿನ್ ಲಾಡೆನ್‌ಗೆ ಆಶ್ರಯ ನೀಡಿದ್ದೇ ಪಾಕಿಸ್ತಾನ ಎನ್ನುವುದನ್ನು ನೆನಪಿಸಿದ ಅವರು ಇತ್ತೀಚೆಗೆ ದಶಕಗಳಿಂದ ಭಯೋತ್ಪಾದಕ ಶಿಬಿರಗಳನ್ನು ನಿರ್ವಹಿಸುತ್ತಿದ್ದೇವೆ ಎನ್ನುವುದನ್ನು ಪಾಕಿಸ್ತಾನ ಒಪ್ಪಿಕೊಂಡಿದೆ. ಇದಕ್ಕಿಂತ ಇನ್ನೇನು ಪುರಾವೆ ಬೇಕು ಎಂದು ತಿರುಗೇಟು ನೀಡಿದ್ದಾರೆ.
ಪಾಕಿಸ್ತಾನದ ಪ್ರಧಾನಿ ಹೇಳಿಕೆ ಅಸಂಬದ್ಧ ನಾಟಕೀಯತೆಯಿಂದ ಕೂಡಿದೆ. ಯಾವುದೇ ಸತ್ಯಗಳನ್ನು ಮರೆಮಾಡಲು ಸಾಧ್ಯವಿಲ್ಲ.”
ಭಯೋತ್ಪಾದನೆಯನ್ನು ಪಾಕಿಸ್ತಾನ ಪ್ರೋತ್ಸಾಹಿಸುತ್ತಿದೆ ಎನ್ನುವುದಕ್ಕೆ ಪಹಲ್ಗಾಮ್ ದಾಳಿ ಸೇರಿದಂತೆ ಅನೇಕ ಉದಾಹರಣೆ ಕಣ್ಣಮುಂದೆ ಇದೆ ಎಂದಿದ್ದಾರೆ
ಕೇಂದ್ರಾಡಳಿತ ಪ್ರದೇಶವಾದ ಜಮ್ಮು ಮತ್ತು ಕಾಶ್ಮೀರದಲ್ಲಿ ಪ್ರವಾಸಿಗರ ಬರ್ಬರ ಹತ್ಯಾಕಾಂಡ ರೂಪಿಸಿದ್ದೇ ಪಾಕಿಸ್ತಾನ ಎಂದು ನೇರ ವಾಗ್ದಾಳಿ ನಡೆಸಿದ್ದಾರೆ.
