ಉದಯವಾಹಿನಿ, ಭೋಪಾಲ್: ಮಾನಸಿಕ ಅಸ್ವಸ್ಥ ಎಂದು ನಂಬಲಾದ ವ್ಯಕ್ತಿಯೊಬ್ಬ ಏಕಾಏಕಿ ಮನೆಗೆ ನುಗ್ಗಿ ತಾಯಿ ಎದುರಲ್ಲೇ 5 ವರ್ಷದ ಮಗುವಿನ ಶಿರಚ್ಛೇದ ಮಾಡಿರುವ ಘಟನೆ ಮಧ್ಯಪ್ರದೇಶದಲ್ಲಿ ನಡೆದಿದೆ.5ವರ್ಷದ ಮಗು ವಿಕಾಸ್ ಮೃತ ದುರ್ದೈವಿ, ಮಹೇಶ್ (25) ಹತ್ಯೆಗೈದ ಆರೋಪಿ.
ಪ್ರತ್ಯಕ್ಷದರ್ಶಿಗಳು ಹೇಳುವಂತೆ, ಕೊಲೆಗಾರನನ್ನ ಇದುವರೆಗೆ ಆ ಕುಟುಂಬಸ್ಥರು ನೋಡಿದ್ದೇ ಇಲ್ಲ. ಏಕಾಏಕಿ ಬೈಕ್‌ನಲ್ಲಿ ಬಂದು ಮನೆಯೊಳಕ್ಕೆ ನುಗ್ಗಿದವನು, ಸಲಾಕೆ ತೆಗದುಕೊಂಡು ಮಗುವಿನ ತಲೆಗೆ ರಪ್ಪನೆ ಬಡಿದಿದ್ದಾನೆ, ಅಷ್ಟಕ್ಕೆ ಸುಮ್ಮನಾಗದೇ ಮಗುವಿನ ಗುತ್ತಿಗೆ ಹಿಡಿದು ತಲೆಯನ್ನ ಕತ್ತರಿಸಿದ್ದಾನೆ. ಮಗುವಿನ ಮೇಲೆ ಹಲ್ಲೆ ತಡೆಯಲು ಬಂದ ಪೋಷಕರ ಮೇಲೂ ಆರೋಪಿ ಹಲ್ಲೆ ನಡೆಸಿದ್ದಾನೆ ಎಂದು ತಿಳಿಸಿದ್ದಾರೆ.
ಬಳಿಕ ಪೋಷಕರ ಚೀರಾಟ ಕೇಳಿ ನೆರೆಹೊರೆಯವರು ಮನೆಯೊಳಗೆ ಧಾವಿಸಿದ್ದಾರೆ. ಕೃತ್ಯ ಕಂಡು ಗ್ರಾಮಸ್ಥರು ಆರೋಪಿಯನ್ನ ಚೆನ್ನಾಗಿ ಥಳಿಸಿದ್ದಾರೆ, ಬಳಿಕ ಪೊಲೀಸರಿಗೆ ಒಪ್ಪಿಸಿದ್ದಾರೆ. ಥಳಿತದಿಂದ ಸೀರಿಯಸ್ ಆಗಿದ್ದ ಆರೋಪಿಯನ್ನ ಆಸ್ಪತ್ರೆಗೆ ದಾಗಿಸುವ ಮಾರ್ಗಮಧ್ಯದಲ್ಲೇ ಸಾವನ್ನಪ್ಪಿದ್ದಾನೆ.
