ಉದಯವಾಹಿನಿ, ಜಿಂಬಾಬ್ವೆಯಲ್ಲಿ ಟ್ರಕ್ ಚಾಲಕನೊಬ್ಬ ವಾಹನ ಚಲಾಯಿಸುತ್ತಿರುವಾಗಲೇ ಎರಡು ನಿಮಿಷಗಳ ಕಾಲ ನಿದ್ದೆಗೆ ಜಾರಿ, ಟ್ರಕ್ ಅಪಘಾತಕ್ಕೀಡಾದ ಘಟನೆ ನಟೆದಿದೆ. ಅಪಘಾತದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಈ ಘಟನೆ ಬುಲವಾಯೊ ಸಮೀಪದ ಮುಖ್ಯ ರಸ್ತೆಯಲ್ಲಿ ಸಂಭವಿಸಿದೆ ಎಂದು ತಿಳಿದುಬಂದಿದೆ. ಟ್ರಕ್‌ನ ಡ್ಯಾಶ್‌ಕ್ಯಾಮ್‌ನಲ್ಲಿ ಈ ಘಟನೆ ದಾಖಲಾಗಿದೆ. ವಿಡಿಯೋದಲ್ಲಿ ಚಾಲಕನು ನಿದ್ದೆಗೆ ಜಾರುವಾಗ ಟ್ರಕ್ ರಸ್ತೆಯಿಂದ ಹೊರಗೆ ಸಾಗುತ್ತದೆ, ಎದುರಿನಿಂದ ಬಂದ ಎರಡು ಟ್ರಕ್‌ಗಳು ಮತ್ತು ಕಾರಿನಿಂದ ಕೇವಲ ಕೆಲವು ಮೀಟರ್‌ಗಳ ಅಂತರದಲ್ಲಿ ತಪ್ಪಿಸಿಕೊಂಡಿತು. ವಾಹನದ ಎಚ್ಚರಿಕೆ ವ್ಯವಸ್ಥೆ ಚಾಲಕನಿಗೆ ವಿಶ್ರಾಂತಿ ತೆಗೆದುಕೊಳ್ಳಲು ಸೂಚಿಸಿತು, ಆದರೆ ಅವನು ನಿಲ್ಲಿಸಲಿಲ್ಲ. ಒಮ್ಮೆ ಕಣ್ಣು ತೆರೆದರೂ, ಮತ್ತೆ ನಿದ್ದೆಗೆ ಜಾರಿದನು, ಕೊನೆಗೆ ಟ್ರಕ್ ಅಪಘಾತಕ್ಕೀಡಾಯಿತು. ಅದೃಷ್ಟವಶಾತ್ ಯಾವುದೇ ಇತರ ವಾಹನಗಳಿಗೆ ಡಿಕ್ಕಿಯಾಗಲಿಲ್ಲ.
ಈ ವಿಡಿಯೋ ಚಾಲಕರ ಆಯಾಸದಿಂದ ಉಂಟಾಗುವ ಅಪಾಯಗಳ ಎಚ್ಚರಿಕೆಯಾಗಿ ಕಾಣುತ್ತಾರೆ. “ಇದು ದೊಡ್ಡ ದುರಂತವಾಗಬಹುದಿತ್ತು,” ಎಂದು ಒಬ್ಬ ತಿಳಿಸಿದ್ದಾರೆ. ತುಂಬಾ ದೂರ ಟ್ರಕ್ ಓಡಿಸುವ ಚಾಲಕರಿಗೆ ವಿಶ್ರಾಂತಿ ಕಡ್ಡಾಯಗೊಳಿಸುವುದು, ಸುರಕ್ಷತಾ ತಂತ್ರಜ್ಞಾನದಲ್ಲಿ ಹೂಡಿಕೆ ಮಾಡುವುದು ಅಗತ್ಯ ಎಂದು ಒತ್ತಾಯಿಸಲಾಗಿದೆ. ಸಾಮಾಜಿಕ ಜಾಲತಾಣದಲ್ಲಿ, ಟ್ರಕ್‌ನ ಎಚ್ಚರಿಕೆ ವ್ಯವಸ್ಥೆಯ ಕಾರ್ಯಕ್ಷಮತೆ ಮತ್ತು ಚಾಲಕರು ಹಾಗೂ ಕಂಪನಿಗಳ ಜವಾಬ್ದಾರಿಯ ಬಗ್ಗೆ ಚರ್ಚೆ ಜೋರಾಗಿದೆ.

ವೈರಲ್ ವಿಡಿಯೋ ರಸ್ತೆ ಸುರಕ್ಷತೆಯ ಬಗ್ಗೆ ಜಾಗೃತಿಯನ್ನುಂಟುಮಾಡಿದೆ. “ಚಾಲಕರ ಆಯಾಸವು ಜೀವಕ್ಕೆ ಕಂಟಕವಾಗಬಹುದು,” ಎಂದು ಒಬ್ಬ ಬಳಕೆದಾರ ಟೀಕಿಸಿದ್ದಾರೆ. “ಕಂಪನಿಗಳು ಕಟ್ಟುನಿಟ್ಟಾದ ನಿಯಮ ಜಾರಿಗೊಳಿಸಬೇಕು” ಎಂದು ಇನ್ನೊಬ್ಬರು ಸಲಹೆ ನೀಡಿದ್ದಾರೆ. ಈ ಘಟನೆ ತುಂಬಾ ದೂರ ವಾಹನ ಓಡಿಸುವ ಚಾಲಕರಿಗೆ ವಿಶ್ರಾಂತಿಯ ಮಹತ್ವವನ್ನು ಮತ್ತು ರಸ್ತೆ ಸುರಕ್ಷತೆಗೆ ಸಂಬಂಧಿಸಿದ ಕಾನೂನುಗಳ ಅಗತ್ಯವನ್ನು ಒತ್ತಿಹೇಳಿದೆ.

Leave a Reply

Your email address will not be published. Required fields are marked *

error: Content is protected !!