ಉದಯವಾಹಿನಿ, ಡಿಂಪಲ್ ಕ್ವೀನ್ ರಚಿತಾ ರಾಮ್ ಏಕಾಏಕಿ ಗುಡ್ ನ್ಯೂಸ್ ಕೊಟ್ಟಿದ್ದಾರೆ. ಫ್ಯಾನ್ಸ್ ತಾವೇ ಖುದ್ದು ಪತ್ರ ಬರೆದು ಆಹ್ವಾನ ಕೊಟ್ಟಿದ್ದಾರೆ. `ಎಲ್ರೂ ತಪ್ಪದೇ ಮನೆಗೆ ಬನ್ನಿ ಗುಡ್ ನ್ಯೂಸ್ ಇದೆ’ ಎಂದು ತಾವೇ ಕೈಯ್ಯಾರೆ ಬರೆದು ಇನ್ಸ್ಟಾಗ್ರಾಂನಲ್ಲಿ ಪೋಸ್ಟ್ ಮಾಡಿದ್ದಾರೆ.
ಅಕ್ಟೋಬರ್ 3, ರಚಿತಾ ರಾಮ್ ಹುಟ್ಟುಹಬ್ಬ. ಹೀಗಾಗಿ ಈ ದಿನ ಬೆಂಗಳೂರಿನ ಆರ್‌ಆರ್ ನಗರದ ತಮ್ಮ ನಿವಾಸಕ್ಕೆ ಅಭಿಮಾನಿಗಳನ್ನ ಪ್ರೀತಿಯಿಂದ ಆಹ್ವಾನಿಸಿದ್ದಾರೆ. `ಫ್ಯಾನ್ಸ್, ಕುಟುಂಬಸ್ಥರು ಒತ್ತಾಯದ ಮೇರೆಗೆ ನಾನು ನಿಮ್ಮೆಲ್ಲರನ್ನು ಭೇಟಿಯಾಗುತ್ತೇನೆ. ಇದು ಹುಟ್ಟುಹಬ್ಬದ ಆಚರಣೆ ಅಲ್ಲ ನಮ್ಮ ಸಂಬಂಧದ ಸಂಭ್ರಮ’ ಎಂದು ಬರೆದುಕೊಂಡಿದ್ದಾರೆ.
ರಚಿತಾ ಹುಟ್ಟುಹಬ್ಬದ ವಿಶೇಷವಾಗಿ ಅವರು ಅಭಿನಯಿಸುತ್ತಿರುವ ಸಿನಿಮಾ ತಂಡದಿಂದ ಅನೇಕ ವಿಶೇಷಗಳು, ಅಭಿಮಾನಿಗಳಿಗೆ ಸರ್ಪ್ರೈಸ್ ಗಿಫ್ಟ್ ಇರುವ ಸಾಧ್ಯತೆ ಇದೆ. ಒಟ್ನಲ್ಲಿ ಅನೇಕ ವರ್ಷಗಳ ಬಳಿಕ ರಚಿತಾ ರಾಮ್ ಅಭಿಮಾನಿಗಳ ಜೊತೆ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿರುವುದು ವಿಶೇಷ.
