ಉದಯವಾಹಿನಿ, ನವದೆಹಲಿ: ಮ್ಯಾನ್ಮಾರ್‌ ಹಾಗೂ ಅರ್ಜೆಂಟೀನಾದಲ್ಲಿ ಭೂಕಂಪನ ಸಂಭವಿಸಿದೆ. ಮ್ಯಾನ್ಮಾರ್‌ನಲ್ಲಿ ಶುಕ್ರವಾರ ಮುಂಜಾನೆ 03:43 ಕ್ಕೆ (ಭಾರತೀಯ ಪ್ರಮಾಣಿತ ಸಮಯ) 3.6 ತೀವ್ರತೆಯ ಭೂಕಂಪ ಸಂಭವಿಸಿದೆ ಎಂದು ನ್ಯಾಷನಲ್ ಸೆಂಟರ್ ಫಾರ್ ಸಿಸ್ಮಾಲಜಿ ತಿಳಿಸಿದೆ. ಹಾಗೇ ಅರ್ಜೆಂಟೀನಾದ ಸ್ಯಾಂಟಿಯಾಗೊ ಡೆಲ್ ಎಸ್ಟೆರೊ ಪ್ರಾಂತ್ಯದಲ್ಲಿ ಗುರುವಾರ 5.7 ತೀವ್ರತೆಯ ಭೂಕಂಪ ಸಂಭವಿಸಿದೆ ಎಂದು ಯುಎಸ್ ಭೂವೈಜ್ಞಾನಿಕ ಸಮೀಕ್ಷೆ (ಯುಎಸ್ಜಿಎಸ್) ವರದಿ ಮಾಡಿದೆ.ಮ್ಯಾನ್ಮಾರ್‌ನಲ್ಲಿ ಭೂಮಿಯ ಹೊರಪದರದಿಂದ 60 ಕಿ.ಮೀ ಕೆಳಗೆ ಭೂಕಂಪ ಸಂಭವಿಸಿದೆ. ಬುಧವಾರ ತಡರಾತ್ರಿ ಮ್ಯಾನ್ಮಾರ್ನಲ್ಲಿ 3.1 ತೀವ್ರತೆಯ ಭೂಕಂಪ ಸಂಭವಿಸಿದೆ ಎಂದು ನ್ಯಾಷನಲ್ ಸೆಂಟರ್ ಫಾರ್ ಸಿಸ್ಮಾಲಜಿ ತಿಳಿಸಿದೆ. ಭೂಕಂಪದ ಕೇಂದ್ರ ಬಿಂದು ಭೂಮಿಯ ಹೊರಪದರದ ಒಳಗೆ 10 ಕಿ.ಮೀ ಆಳದಲ್ಲಿತ್ತು.
ಇನ್ನು ಯುಎಸ್ಜಿಎಸ್ ಅಂಕಿಅಂಶಗಳ ಪ್ರಕಾರ, ಭೂಕಂಪವು 21:37 (ಯುಟಿಸಿ)ಗೆ ಸಂಭವಿಸಿದ್ದು, ಅದರ ಕೇಂದ್ರಬಿಂದು ಉತ್ತರ ಅರ್ಜೆಂಟೀನಾದ ಎಲ್ ಹೊಯೊ ಪಟ್ಟಣದಿಂದ ಪಶ್ಚಿಮಕ್ಕೆ 29 ಕಿಲೋಮೀಟರ್ ದೂರದಲ್ಲಿದೆ. ಭೂಕಂಪನವು ಸುಮಾರು 571 ಕಿಲೋಮೀಟರ್ (354 ಮೈಲಿ) ಆಳದಲ್ಲಿ ಹುಟ್ಟಿಕೊಂಡಿತು. ಭೂಕಂಪದ ನಿರ್ದೇಶಾಂಕಗಳನ್ನು 27.064S ಮತ್ತು 63.523W ನಲ್ಲಿ ದಾಖಲಿಸಲಾಗಿದೆ.

Leave a Reply

Your email address will not be published. Required fields are marked *

error: Content is protected !!