ಉದಯವಾಹಿನಿ, ರೋಮ್: ಇಟಲಿಯಲ್ಲಿ ಭೀಕರ ರಸ್ತೆ ಅಪಘಾತಕ್ಕೆ ಭಾರತೀಯ ಮೂಲದ ಉದ್ಯಮಿ ಮತ್ತು ಆತನ ಪತ್ನಿ ಬಲಿಯಾಗಿದ್ದಾರೆ. ದಂಪತಿಯ ಪುತ್ರಿ ಗಂಭೀರ ಗಾಯಗೊಂಡಿದ್ದಾರೆ.ನಾಗ್ಪುರ ಮೂಲದ ಹೋಟೆಲಿಯರ್ ಜಾವೇದ್ ಅಖ್ತರ್ (55) ಮತ್ತು ಅವರ ಪತ್ನಿ ನಾಡಿರಾ ಗುಲ್ಶನ್ (47) ಮೃತಪಟ್ಟಿದ್ದಾರೆ. ಇವರು ತಮ್ಮ ಮೂವರು ಮಕ್ಕಳೊಂದಿಗೆ (ಅರ್ಜೂ ಅಖ್ತರ್, ಶಿಫಾ ಅಖ್ತರ್ ಹಾಗೂ ಮಗ ಜಾಝೆಲ್‌ ಅಖ್ತರ್) ಪ್ರಯಾಣಿಸುತ್ತಿದ್ದರು. ಗ್ರೊಸೆಟೊ ಬಳಿಯ ಔರೆಲಿಯಾ ಹೆದ್ದಾರಿಯಲ್ಲಿ ಕುಟುಂಬವು ಅಪಘಾತಕ್ಕೀಡಾಯಿತು.
ಕುಟುಂಬವು ನಾಗ್ಪುರದ ಸೀತಾಬುಲ್ಡಿ ಫ್ಲೈಓವರ್ ಬಳಿಯ ಗುಲ್ಶನ್ ಪ್ಲಾಜಾ ಹೋಟೆಲ್ ಅನ್ನು ಹೊಂದಿದೆ. ಇಟಲಿಯನ್ನು ತಲುಪುವ ಮೊದಲು ಅವರು ಸೆಪ್ಟೆಂಬರ್ 22 ರಂದು ಫ್ರಾನ್ಸ್‌ನಲ್ಲಿ ರಜಾ ದಿನಗಳನ್ನು ಕಳೆದಿದ್ದರು.ಏಷ್ಯನ್ ಮೂಲದ ಪ್ರವಾಸಿಗರನ್ನು ಹೊತ್ತ ವ್ಯಾನ್ ಮತ್ತು ಮಿನಿ ಬಸ್ ಅಪಘಾತದಲ್ಲಿ ಸಾವನ್ನಪ್ಪಿದ ಮೂವರು ಜನರಲ್ಲಿ ನಾಗ್ಪುರ ದಂಪತಿಗಳು ಸೇರಿದ್ದಾರೆ. ಮಿನಿಬಸ್ ಚಾಲಕ ಮತ್ತು ಭಾರತದ ದಂಪತಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಈ ದಂಪತಿಯ ಮಗಳು ಅರ್ಜೂ ಅಪಘಾತದಲ್ಲಿ ತಲೆಗೆ ತೀವ್ರ ಪೆಟ್ಟು ಬಿದ್ದು ಗಾಯಗೊಂಡಿದ್ದಾಳೆ. ಆಕೆಯನ್ನು ಸಿಯೆನಾದ ಲೀ ಸ್ಕಾಟ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಅದೃಷ್ಟವಶಾತ್‌ ಇನ್ನಿಬ್ಬರು ಮಕ್ಕಳಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಆಸ್ಪತ್ರೆಯಲ್ಲಿ ಚೇತರಿಸಿಕೊಳ್ಳುತ್ತಿದ್ದಾರೆ.

Leave a Reply

Your email address will not be published. Required fields are marked *

error: Content is protected !!