ಉದಯವಾಹಿನಿ, ವಾಷಿಂಗ್ಟನ್: ನಾಟಕ, ಸಸ್ಪೆನ್ಸ್ ಮತ್ತು ಸಿನಿಮೀಯ ಶೈಲಿಯ ವಿಡಿಯೊವೊಂದು ಇದೀಗ ಸಾಮಾಜಿಕ ಮಾಧ್ಯಮದಲ್ಲಿ ಭಾರಿ ವೈರಲ್ ಆಗುತ್ತಿದೆ. ಇದು ಒಬ್ಬ ಮಹಿಳೆ ಮತ್ತು ಆಕೆಯ ಗೆಳೆಯನ ನಡುವಿನ ವಿಮಾನ ನಿಲ್ದಾಣದಲ್ಲಿ ನಡೆದ ಘಟನೆಯ ವಿಡಿಯೊ ಆಗಿದೆ. ಗೆಳೆಯನಿಗೆ ವಿದಾಯ ಹೇಳುತ್ತಿದ್ದಂತೆ ಆಕೆಯ ಪತಿ ಹಿಂದಿನಿಂದ ಹೂವುಗಳನ್ನು ಹಿಡಿದುಕೊಂಡು ಬಂದು ಆಕೆಯನ್ನು ಅಪ್ಪಿದ್ದಾನೆ. ಈ ವೇಳೆ ಆಕೆ ತೋರಿದ ವರ್ತನೆಯು ನೆಟ್ಟಿಗರನ್ನು ಅಚ್ಚರಿ ತರಿಸಿದೆ.
ಸಾಮಾಜಿಕ ಮಾಧ್ಯಮಗಳಲ್ಲಿ ಭಾರಿ ವೈರಲ್ ಆಗಿರುವ ಈ ವಿಡಿಯೊದಲ್ಲಿ ದೀರ್ಘ ವಿಮಾನ ಪ್ರಯಾಣದ ನಂತರ ಮನೆಗೆ ಮರಳುತ್ತಿದ್ದಾಗ ವ್ಯಕ್ತಿಯೊಬ್ಬ ತನ್ನ ಪತ್ನಿಯನ್ನು ಹಿಂದಿನಿಂದ ಬಂದು ಬಿಗಿಯಾಗಿ ಅಪ್ಪಿಕೊಂಡಿದ್ದಾನೆ. ಮಹಿಳೆಯು ವಿಮಾನ ನಿಲ್ದಾಣದಿಂದ ತನ್ನ ಸೂಟ್‌ಕೇಸ್ ಅನ್ನು ಸಂಗ್ರಹಿಸುತ್ತಿರುವಾಗ ಹಿಂದಿನಿಂದ ಬಂದ ಪತಿಯು ಅಪ್ಪಿಕೊಂಡಿದ್ದಾನೆ. ಆಗಷ್ಟೇ ಗೆಳಯನಿಗೆ ವಿದಾಯ ಹೇಳಿದ್ದ ಮಹಿಳೆಗೆ ಪತಿ ಬಂದಿದ್ದು ಶಾಕ್ ಆಗಬೇಕಿತ್ತು. ಆಕೆ ಶಾಕ್ ಆದರೂ ಮುಖದಲ್ಲಿ ತೋರ್ಪಡಿಸದ ಆಕೆ, ಪತಿಯನ್ನು ಕಂಡು ಫುಲ್ ಖುಷಿಯಾಗಿದ್ದಾಳೆ.
ಹಿಂದಿನಿಂದ ಬಂದ ವ್ಯಕ್ತಿಯು ಮಹಿಳೆಯನ್ನು ತಬ್ಬಿಕೊಳ್ಳುತ್ತಿದ್ದಂತೆ ತಿರುಗಿ ನೋಡಿದಾಗ ಆಕೆಯ ಪತಿಯೆಂದು ಗೊತ್ತಾಗುತ್ತಿದ್ದಂತೆ ಅವಳ ಮುಖಭಾವವು ತಕ್ಷಣ ಬದಲಾಗಿದೆ. ಕೂಡಲೇ ಗೆಳೆಯನಿಂದ ದೂರವಾದ ಆಕೆ ಪತಿಯನ್ನು ನೋಡಿ ಅಚ್ಚರಿಯಿಂದ ಜೋರಾಗಿ ನಕ್ಕಿದ್ದಾಳೆ. ಬಹಳ ಸಂತೋಷದಿಂದ ತನ್ನ ಪತಿಯನ್ನು ತಬ್ಬಿಕೊಂಡಿದ್ದಾಳೆ. ಅಷ್ಟೇ ಅಲ್ಲ, ನನಗೆ ಆಶ್ಚರ್ಯವಾಯಿತು ಎಂದು ಉದ್ಗರಿಸಿದ್ದಾಳೆ.
