ಉದಯವಾಹಿನಿ, ನವದೆಹಲಿ: ಭಾರತೀಯ ಟೆನಿಸ್ ತಾರೆ ಸಾನಿಯಾ ಮಿರ್ಜಾ ಅವರ ಮಾಜಿ ಪತಿ ಮತ್ತು ಪಾಕಿಸ್ತಾನದ ಮಾಜಿ ಕ್ರಿಕೆಟಿಗ ಶೋಯೆಬ್ ಮಲಿಕ್ ಮತ್ತೆ ಸುದ್ದಿಯಲ್ಲಿದ್ದಾರೆ. ಮಾಜಿ ಕ್ರಿಕೆಟಿಗ ತಮ್ಮ ಮೂರನೇ ಪತ್ನಿ ಸನಾ ಜಾವೇದ್ (Sana Javed) ಅವರಿಂದಲೂ ವಿಚ್ಛೇದನ ಪಡೆಯಲು ಹೊರಟಿದ್ದಾರೆ ಎಂದು ವರದಿಯಾಗಿದೆ.
ಜನವರಿ 2024 ರಲ್ಲಿ ತಮ್ಮ ನಿಕಾಹ್ ಅನ್ನು ಘೋಷಿಸಿದಾಗ ದಂಪತಿ ಎಲ್ಲರಿಗೂ ಆಘಾತ ನೀಡಿದರು. ಶೋಯೆಬ್ ಮಲಿಕ್ ಮತ್ತು ಸಾನಿಯಾ ಮಿರ್ಜಾ 14 ವರ್ಷಗಳ ಕಾಲ ದಾಂಪತ್ಯ ಜೀವನ ನಡೆಸಿದರು. ನಂತರ ಇಬ್ಬರಿಗೂ ಸರಿ ಬಾರದ ಕಾರಣ ದೂರ ಉಳಿದರು. ಅತ್ತ ಕೆಲವೇ ತಿಂಗಳಲ್ಲಿ ಶೋಯೆಬ್ ಮಲಿಕ್ ತಮ್ಮ ಮೂರನೇ ವಿವಾಹದ ಘೋಷಣೆ ಮಾಡಿದರು. ಶೋಯೆಬ್ ಮಲಿಕ್ ಮತ್ತು ಸಾನಿಯಾ ಮಿರ್ಜಾ ದಂಪತಿಗೆ ಇಜ್ಯಾನ್ ಎಂಬ ಮಗನಿದ್ದು, ಅವನು ದುಬೈನಲ್ಲಿ ತನ್ನ ತಾಯಿಯೊಂದಿಗೆ ಇದ್ದಾನೆ. ಈಗ, ಸೋಶಿಯಲ್ ಮೀಡಿಯಾದಲ್ಲಿ ವಿಡಿಯೋವೊಂದು ವೈರಲ್ ಆಗಿದ್ದು, ಆ ವಿಡಿಯೋದಲ್ಲಿ ಸನಾ ಮತ್ತು ಶೋಯೆಬ್ ಒಬ್ಬರಿಗೊಬ್ಬರು ಮುಖ ಕೊಟ್ಟು ಮಾತಾಡದೆ ಅಂತರ ಕಾಪಾಡಿಕೊಂಡಿರುವುದು ಕಾಣಿಸಿದೆ. ಆ ವೈರಲ್ ವಿಡಿಯೋ ನೋಡಿದ ಜನರು ಮತ್ತೊಂದು ಡಿವೋರ್ಸ್ ಸದ್ಯದಲ್ಲೇ ಆಗಲಿದೆ ಎಂದು ಕಾಮೆಂಟ್ ಹಾಕಿದ್ದಾರೆ.
