ಉದಯವಾಹಿನಿ, ನವದೆಹಲಿ: ಪ್ರಧಾನಮಂತ್ರಿ ಮೋದಿ ಅವರು ಸ್ವಾತಂತ್ರ್ಯ ದಿನದಂದು ಘೋಷಿಸಿದ ‘ಮಿಷನ್ ಸುದರ್ಶನ ಚಕ್ರ’ವು ಈಗ ಅನುಷ್ಠಾನದ ಹಂತದಲ್ಲಿದೆ. ಈ ಮಹತ್ವದ ಕಾರ್ಯಾಚರಣೆಯಡಿಯಲ್ಲಿ, ಭಾರತೀಯ ಸೇನೆಯು ಸರ್ಕಾರಿ ಕಂಪನಿಯಾದ ಅಡ್ವಾನ್ಸ್ಡ್ ವೆಪನ್ ಅಂಡ್ ಎಕ್ವಿಪ್ಮೆಂಟ್ ಇಂಡಿಯಾ ಲಿಮಿಟೆಡ್ ನಿಂದ ಆರು ಎಕೆ-630 ವಾಯು ರಕ್ಷಣಾ ಗನ್ ವ್ಯವಸ್ಥೆಗಳನ್ನು ಖರೀದಿಸಲು ಟೆಂಡರ್ ನೀಡಿದೆ. ಭಾರತದ ರಾಷ್ಟ್ರೀಯ ಭದ್ರತೆಗೆ ಹೊಸ ಬಲವನ್ನು ನೀಡುವ ನಿಟ್ಟಿನಲ್ಲಿ ಈ ಹಂತವು ಪ್ರಮುಖ ನಿರ್ಧಾರವಾಗಿದೆ. ರಕ್ಷಣಾ ಅಧಿಕಾರಿಗಳ ಪ್ರಕಾರ, ಭಾರತೀಯ ಸೇನೆಯ ವಾಯು ರಕ್ಷಣಾ ಇಲಾಖೆಯು AWEILಗೆ ಆರ್ಎಫ್‌ಪಿ (ಪ್ರಸ್ತಾವನೆಗಾಗಿ ವಿನಂತಿ) ಯನ್ನು ಕಳುಹಿಸಿದೆ.
ಭಾರತವು ತನ್ನ ಗಡಿಗಳ ಭದ್ರತೆಯನ್ನು ಹೆಚ್ಚಿಸಲು “ಮಿಷನ್ ಸುದರ್ಶನ ಚಕ್ರ” ಅಡಿಯಲ್ಲಿ ಹೊಸ ತಲೆಮಾರದ ವಾಯು ರಕ್ಷಣಾ ವ್ಯವಸ್ಥೆಗಳನ್ನು ಅಳವಡಿಸುತ್ತಿದ್ದು, ಈ ಯೋಜನೆಯ ಪ್ರಮುಖ ಭಾಗವಾಗಿರುವ ಎಕೆ-630 (AK-630) ವಾಯು ರಕ್ಷಣಾ ಗನ್‌ಗಳು ಭಾರತೀಯ ಸೇನೆಯ ಭದ್ರತೆಯನ್ನು ಮತ್ತಷ್ಟು ಬಲಪಡಿಸಲಿವೆ. ಅದ್ರಂತೆ ಈ ಗನ್‌ಗಳು ನಿಮಿಷಕ್ಕೆ 3000 ಸುತ್ತುಗಳ ಗುಂಡು ಹಾರಿಸುವ ಸಾಮರ್ಥ್ಯವಿದ್ದು, ಹಾಗಾಗಿ, 4 ಕಿ.ಮೀ ವ್ಯಾಪ್ತಿಯುಳ್ಳ ಈ ಗನ್ ವ್ಯವಸ್ಥೆಯನ್ನು “ಸ್ಥಳೀಯ ಐರನ್ ಡೋಮ್” ಎಂದು ಕರೆಯಲಾಗುತ್ತಿದೆ.
