ಉದಯವಾಹಿನಿ,ಲಂಡನ್: ದಿ ಲಾರ್ಡ್ಸ್ ಟೆಸ್ಟ್ ಪಂದ್ಯದಲ್ಲಿ ಆಸ್ಟ್ರೇಲಿಯಾ ತಂಡದ ಅನುಭವಿ ಆಫ್ ಸ್ಪಿನ್ನರ್ ಎಡಗಾಲಿನ ಮೀನಖಂಡದ ಗಾಯದ ಸಮಸ್ಯೆ ನಡುವೆಯೂ ಬ್ಯಾಟ್ ಮಾಡಿ ಗಮನ ಸೆಳೆದರು. ಆದರೆ, ಕಾಲಿಗೆ ಗಾಯವಾಗಿದ್ದ ಕಾರಣ ಬದಲಿ ಆಟಗಾರನ ಪಡೆಯಲು ಸಾಧ್ಯವಿಲ್ಲ. ಹೀಗಾಗಿ ಬ್ಯಾಟ್ ಮಾಡಲು ಬಂದು ಹೆಲ್ಮೆಟ್‌ಗೆ ಹೊಡೆತ ತಿಂದರೆ ಕನ್ಕಷನ್ ಸಬ್‌ಸ್ಟಿಟ್ಯೂಟ್ ತೆಗೆದುಕೊಳ್ಳಲು ಸಾಧ್ಯವಾಗುತ್ತದೆ ಎಂಬ ಕಾರಣಕ್ಕೆ ನೇಥನ್ ಲಯಾನ್ ಬ್ಯಾಟ್ ಮಾಡಲು ಬಂದರು ಎಂದು ಇಂಗ್ಲೆಂಡ್‌ನ ಮಾಜಿ ನಾಯಕ ಕೆವಿನ್ ಪೀಟರ್ಸನ್ ಕಟುವಾಗಿ ಟೀಕೆ ಮಾಡಿದ್ದರು. ಇದಕ್ಕೆ ಖಡಕ್ ಉತ್ತರ ಕೊಟ್ಟಿರುವ ಆಸೀಸ್ ಲೆಗ್ ಸ್ಪಿನ್ನರ್, ಬೌನ್ಸರ್ ಪೆಟ್ಟಿನಿಂದಾಗಿ ಸ್ನೇಹಿತನ ಕಳೆದುಕೊಂಡಿದ್ದೇವೆ, ಅಂತಹ ಕೆಲಸಕ್ಕೆ ಕೈಹಾಕುವುದಿಲ್ಲ ಎಂದಿದ್ದಾರೆ.
ನನಗಿಂತಲೂ ಮೊದಲೇ ಟೆಸ್ಟ್ ಕ್ರಿಕೆಟ್ ಇದೆ. ಇಲ್ಲಿ ಗಾಯದ ಸಮಸ್ಯೆಗಳು ಆಟದ ಒಂದು ಭಾಗ. ನನ್ನ ತಲೆಗೆ ಬೌನ್ಸರ್ ಪೆಟ್ಟು ತಿನ್ನಲೆಂದೇ ನಾನು ಬ್ಯಾಟ್ ಮಾಡಲು ಹೋದೆ ಎಂದು ಮಾತನಾಡುತ್ತಿದ್ದಾರೆ. ನಾನು ಈ ಮಾತನ್ನು ವಿರೋಧಿಸುತ್ತೇನೆ. ಏಕೆಂದರೆ ಇದೇ ಬೌನ್ಸರ್ ಪೆಟ್ಟಿನಿಂದ ನಾವು ಸ್ನೇಹಿತನೊಬ್ಬನನ್ನು ಕಳೆದುಕೊಂಡಿದ್ದೇವೆ. ಹೀಗಾಗಿ ಇದರ ಬಗ್ಗೆ ಮಾತನಾಡುವುದು ಬಹಳಾ ಕೆಳಮಟ್ಟದ ಸಂಗತಿಯಾಗಿದೆ,” ಎಂದು ನೇಧಥನ್ ಲಯಾಣ್ ಪಂದ್ಯದ ನಾಲ್ಕನೇ ದಿನದಾಟದ ಬಳಿಕ ನಡೆದ ಸುದ್ದಿಗೋಷ್ಠಿಯಲ್ಲಿ ಹೇಳಿದ್ದಾರೆ.
