ಉದಯವಾಹಿನಿ, ಬೆಂಗಳೂರು: ಮಧ್ಯಪ್ರದೇಶ ಹಾಗೂ ರಾಜಸ್ತಾನ ರಾಜ್ಯಗಳಲ್ಲಿ ಕಲಬೆರಕೆ ಕೆಮ್ಮಿನ ಔಷಧಿಯಿಂದ ೧೧ ಮಕ್ಕಳು ಮೃತಪಟ್ಟಿರುವ ಬೆನ್ನಲ್ಲೇ ಕರ್ನಾಟದಲ್ಲೂ ರಾಜ್ಯ ಸರ್ಕಾರ ಕಟ್ಟೆಚ್ಚೆರ ವಹಿಸಿದೆ. ಕೋಲ್ಡ್‌ರಿಫ್‌ನ ಸಿರಪ್ ರಾಜ್ಯದಲ್ಲಿ ಸರಬರಾಜು ಆಗುತ್ತಿಲ್ಲವಾದರೂ ಈ ಸಿರಪ್‌ಗಳ ಮೇಲೆ ನಿಗಾವಹಿಸಲು ಆರೋಗ್ಯ ಇಲಾಖೆ ಮುಂದಾಗಿದೆ.ಈ ಸಿರಪ್‌ನ ಮಾದರಿಗಳನ್ನು ಸಂಗ್ರಹಿಸಿ ಅವುಗಳನ್ನು ಪ್ರಯೋಗಾಲಯಕ್ಕೆ ರವಾನಿಸಲಾಗಿದೆ. ಈ ಔಷಧಿಯಲ್ಲಿ ಯಾವುದಾದರೂ ಕಲಬೆರಕೆ ಅಂಶಗಳು ಪತ್ತೆಯಾದಲ್ಲಿ ಈ ಬಗ್ಗೆ ಕ್ರಮ ಕೈಗೊಳ್ಳಲು ಆರೋಗ್ಯ ಇಲಾಖೆ ಮುಂದಾಗಿದೆ.
ಈ ಸಿರಪ್‌ನಿಂದ ರಾಜಸ್ತಾನ ಮತ್ತು ಮಧ್ಯಪ್ರದೇಶದ ರಾಜ್ಯಗಳಲ್ಲಿ ಮಕ್ಕಳು ಸಾವನ್ನಪ್ಪಿದ್ದಾರೆ. ಈ ಹಿನ್ನೆಲೆಯಲ್ಲಿ ಯಾವುದೇ ಕಾರಣಕ್ಕೂ ಕೋಲ್ಡ್‌ರಿಫ್ ಖರೀದಿಸಬಾರದು ಎಂದು ಪೋಷಕರಿಗೆ ಮನವಿ ಮಾಡಿರುವ ಆರೋಗ್ಯ ಇಲಾಖೆ, ವೈದ್ಯರ ಸಲಹೆ ಪಡೆದ ಸಿರಪ್ ಖರೀದಿಸುವಂತೆ ಸೂಚನೆ ನೀಡಿದೆ.
ಈ ಕೆಮ್ಮಿನ ಔಷಧದಲ್ಲಿ ವಿಷಕಾರಿ ಅಂಶವಿತ್ತು ಎಂಬ ಆಘಾತಕಾರಿ ವಿಷಯ ಬಹಿರಂಗಗೊಂಡ ಬೆನ್ನಲ್ಲೇ ರಾಜ್ಯದಲ್ಲೂ ಈ ಔಷಧಿಯ ಮೇಲೆ ನಿಗಾವಹಿಸಲಾಗಿದೆ.
ಮಕ್ಕಳು ಈ ಸಿರಪ್ ಸೇವಿಸಿ ಮೃತಪಟ್ಟಿರುವ ಹಿನ್ನೆಲೆಯಲ್ಲಿ ತಮಿಳುನಾಡು, ಮಧ್ಯಪ್ರದೇಶ ಹಾಗೂ ರಾಜಸ್ತಾನ ಸರ್ಕಾರಗಳು ಈ ಕೆಮ್ಮಿನ ಔಷಧ ಮಾರಾಟದ ಮೇಲೆ ನಿರ್ಬಂಧ ಹೇರಿವೆ. ತೆಲಂಗಾಣನ ರಾಜ್ಯದಲ್ಲೂ ರಾಜ್ಯ ಸರ್ಕಾರ ಎಚ್ಚರ ವಹಿಸುವಂತೆ ಸೂಚಿಸಿದೆ.
ಈ ಔಷಧ ಸೇವಿಸಿದ ಬಳಿಕ ೬ ರಾಜ್ಯಗಳಲ್ಲಿರುವ ೧೯ ತಯಾರಿಕಾ ಕೇಂದ್ರಗಳಿಗೆ ಆಹಾರ ಸುರಕ್ಷಿತೆ ಮತ್ತು ಔಷಧ ನಿಯಂತ್ರಣ ಪ್ರಾಧಿಕಾರ ತಂಡ ಭೇಟಿ ನೀಡಿ ಪರಿಶೀಲನೆ ನಡೆಸಿದೆ. ಈ ಔಷಧ ಸೇವನೆಯಿಂದ ಮೂತ್ರಪಿಂಡ ಸೇರಿ ಅಂಗಾಂಗಗಳು ವೈಫಲ್ಯವಾಗಿವೆ. ಮೂರ್ಛೆ ರೋಗ ಬರುವ ಸಾಧ್ಯತೆಯೂ ಇದೆ. ಈ ಔಷಧವನ್ನು ಹೆಚ್ಚಾಗಿ ಸೇವಿಸಿದರೆ ಸಾವಿನ ಪ್ರಮಾಣ ಹೆಚ್ಚಾಗುವುದರ ಜೊತೆ ನರಮಂಡಲ ವೈಫಲ್ಯಕ್ಕೂ ತುತ್ತಾಗಬೇಕಾಗುತ್ತದೆ. ಈ ಎಲ್ಲಾ ಕಾರಣಗಳಿಂದಾಗಿ ರಾಜ್ಯದಲ್ಲಿ ಕೋಲ್ಡ್‌ರಿಫ್ ಮೇಲೆ ನಿಗಾವಹಿಸಲಾಗಿದೆ.

Leave a Reply

Your email address will not be published. Required fields are marked *

error: Content is protected !!