ಉದಯವಾಹಿನಿ, ಭಾರತದಲ್ಲಿ ಹೃದಯಕ್ಕೆ ಸಂಬಂಧಿಸಿದ ಆರೋಗ್ಯದ ಬಗ್ಗೆ ಹಾಗೂ ಆರಂಭಿಕ ರೋಗನಿರ್ಣಯದ ಮಹತ್ವ ಮತ್ತು ಸುಧಾರಿತ ಚಿಕಿತ್ಸಾ ಆಯ್ಕೆಗಳಿಗೆ ದೊರಕುವ ಪ್ರವೇಶದ ಬಗ್ಗೆ ಜಾಗೃತಿ ಮೂಡಿಸು ವುದು ಹೆಚ್ಚಿನ ಗಮನವನ್ನು ಸೆಳೆಯುತ್ತಿದೆ. ರಚನಾತ್ಮಕ ಹೃದಯ ಕಾಯಿಲೆಗಳು, ವಿಶೇಷವಾಗಿ ಹೃದಯ ಕವಾಟಗಳ ಮೇಲೆ ಪರಿಣಾಮ ಬೀರುವವು ಒಟ್ಟಾರೆ ಹೃದಯರಕ್ತನಾಳದ ಕಾಯಿಲೆ ವರ್ಣಪಟಲದ ಒಂದು ಪ್ರಮುಖ ಭಾಗವಾಗಿದೆ.
ರಚನಾತ್ಮಕ ಹೃದಯ ಕಾಯಿಲೆಗಳು ಹೃದಯದ ಕವಾಟಗಳು, ಗೋಡೆಗಳು ಮತ್ತು/ಅಥವಾ ಸ್ನಾಯುವಿನಲ್ಲಿ ಉಂಟಾಗಿರುವ ಸಮಸ್ಯೆಗಳನ್ನು ಉಲ್ಲೇಖಿಸುತ್ತವೆ. ಈ ಹೃದಯ ಸಮಸ್ಯೆಗಳು ವಿಶ್ವಾದ್ಯಂತ ಲಕ್ಷಾಂತರ ಜನರ ಮೇಲೆ ಪರಿಣಾಮವನ್ನು ಬೀರುತ್ತವೆ ಮತ್ತು ಆ ಸಂಖ್ಯೆಯು ಜನಸಂಖ್ಯೆಯು ಬೆಳೆಯುವ ರೀತಿಯಲ್ಲಿಯೇ ಬೆಳೆಯುವ ನಿರೀಕ್ಷೆಯಿದೆ. ಅನೇಕ ರಚನಾತ್ಮಕ ಹೃದಯ ಕಾಯಿಲೆಗಳಲ್ಲಿ ಒಂದು ಮಿಟ್ರಲ್ ರೆಜರ್ಗಿಟೇಶನ್ (ಎಮ್ಆರ್) – ಮಿಟ್ರಲ್ ಕವಾಟ ದೊಂದಿಗಿನ ಸಮಸ್ಯೆ, ಇದು ಹೃದಯದ ಎರಡು ಕೋಣೆಗಳ ನಡುವೆ ರಕ್ತದ ಹರಿವನ್ನು ನಿಯಂತ್ರಿ ಸಲು ಸಹಾಯ ಮಾಡುತ್ತದೆ. ಈ ಕವಾಟವು ಸರಿಯಾಗಿ ಮುಚ್ಚಿಕೊಳ್ಳದಿದ್ದಾಗ, ರಕ್ತವು ಹಿಂದಕ್ಕೆ ಹೋಗಿ ಸೋರಿಕೆಯಾಗುತ್ತದೆ.
ಹಾಗಾಗಿ ಹೃದಯವು ಸಾಮಾನ್ಯವಾಗಿ ಕಾರ್ಯ ಮಾಡುವುದಕ್ಕಿಂತ ಹೆಚ್ಚು ಶ್ರಮವನ್ನು ಪಡಬೇಕಾಗುತ್ತದೆ. ರಾಷ್ಟ್ರವ್ಯಾಪಿಯಾಗಿ ಭಾರತದಲ್ಲಿ ಎಮ್ ಆರ್ ಮೂಲಕ ಸಂಭವಿಸುವ ಪ್ರಮಾಣದ ಅಂಕಿ ಸಂಖ್ಯೆ ಲಭ್ಯವಿಲ್ಲದಿದ್ದರೂ, ಅಧಿಕೃತ ರೋಗ ದಾಖಲಾತಿಗಳ ಕೊರತೆಯಿಂದಾಗಿ, ಆಸ್ಪತ್ರೆಯ ದತ್ತಾಂಶ ಮತ್ತು ಸಾಂಕ್ರಾಮಿಕ ರೋಗಶಾಸ್ತ್ರೀಯ ಅಧ್ಯಯನಗಳು ಈ ಸ್ಥಿತಿಯ ಮಹತ್ವದ ಮತ್ತು ಸಂಕೀರ್ಣವಾದ ಹೊರೆಯನ್ನು ತೋರಿಸುತ್ತವೆ ಹಾಗೂ ಸಾಂಪ್ರದಾಯಿಕ ಸಂಧಿವಾತ ಹೃದಯ ಕಾಯಿಲೆ ಮತ್ತು ಆಧುನಿಕ ಹೃದಯರಕ್ತನಾಳದ ಅಪಾಯಕಾರಿ ಅಂಶಗಳ ಮುಖೇನ ವ್ಯಾಖ್ಯಾನಿಸಲಾಗುತ್ತದೆ.

ಸಾಮಾನ್ಯವಾಗಿ ಎರಡು ವಿಧದ ಮಿಟ್ರಲ್ ವಾಲ್ವ್ ರಿಗರ್ಜಿಟೇಶನ್ ಅನ್ನು ವ್ಯಾಖ್ಯಾನಿಸಬಹುದು – ಕ್ಷೀಣಗೊಳ್ಳುವ ಮತ್ತು ಕ್ರಿಯಾತ್ಮಕ ಎಂದು. ಕ್ಷೀಣಗೊಳ್ಳುವ ಮಿಟ್ರಲ್ ರಿಗರ್ಜಿಟೇಶನ್ ಅಥವಾ ಡಿ‌ಎಮ್‌ಆರ್ ಸಂಬಂಧದಲ್ಲಿ, ಕವಾಟವು ಹಾನಿಗೊಳಗಾಗುತ್ತದೆ – ವಯಸ್ಸಾದ ಸೋಂಕುಗಳು ಅಥವಾ ಇತರ ಪರಿಸ್ಥಿತಿಗಳಿಂದಾಗಿ. ಚಿಕಿತ್ಸೆಯು ಸಾಮಾನ್ಯವಾಗಿ ಶಸ್ತ್ರಚಿಕಿತ್ಸೆಯ ದುರಸ್ತಿ ಅಥವಾ ಕವಾಟದ ಬದಲಿಯನ್ನು ಒಳಗೊಂಡಿರುತ್ತದೆ. ಕ್ರಿಯಾತ್ಮಕ ಮಿಟ್ರಲ್ ರಿಗರ್ಜಿಟೇಶನ್ (ಎಫ್‌ಎಂ ಆರ್), ಸಂಬಂಧದಲ್ಲಿ ಹೃದಯವು ವಿಸ್ತರಿಸಲ್ಪಡುತ್ತದೆ, ಕವಾಟವನ್ನು ಪ್ರತ್ಯೇಕವಾಗಿ ಎಳೆಯುತ್ತದೆ ಹಾಗಾಗಿ ಅದು ಸರಿಯಾದ ರೀತಿಯಲ್ಲಿ ಮುಚ್ಚಿಕೊಳ್ಳಲು ಸಾಧ್ಯವಾಗುವುದಿಲ್ಲಾ. ಇವು ಸಾಮಾನ್ಯ ವಾಗಿ ಹೃದಯ ವೈಫಲ್ಯ ಅಥವಾ ಹೃದಯಾಘಾತದಿಂದ ಉಂಟಾಗುತ್ತದೆ.

Leave a Reply

Your email address will not be published. Required fields are marked *

error: Content is protected !!