ಉದಯವಾಹಿನಿ, ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಗಾಜಾಗೆ ಐತಿಹಾಸಿಕ ಶಾಂತಿ ಒಪ್ಪಂದವನ್ನು ಘೋಷಿಸಿದ್ದಾರೆ. ಪ್ಯಾಲೆಸ್ಟೈನ್ ಮತ್ತು ಇಸ್ರೇಲ್‌ನಲ್ಲಿ ಸುಮಾರು 80,000 ಸಾವುಗಳಿಗೆ ಕಾರಣವಾದ ಎರಡು ವರ್ಷಗಳ ರಕ್ತಸಿಕ್ತ ಯುದ್ಧವನ್ನು ಈ ಒಪ್ಪಂದ ಕೊನೆಗೊಳಿಸುತ್ತದೆಯೇ ಎಂಬುದನ್ನು ಕಾದು ನೋಡಬೇಕಿದೆ. ಇದೀಗ ಈ ಗಾಜಾ ಶಾಂತಿ ಯೋಜನೆಯನ್ನು ಪ್ರಸ್ತಾಪಿಸಿ ಟ್ರಂಪ್ ನೊಬೆಲ್ ಶಾಂತಿ ಪ್ರಶಸ್ತಿ ಮೇಲೆ ಕಣ್ಣಿಟ್ಟಿದ್ದಾರೆ.
ಅಕ್ಟೋಬರ್ 10 ರಂದು ಘೋಷಣೆಯಾಗಲಿರುವ ನೊಬೆಲ್ ಶಾಂತಿ ಪ್ರಶಸ್ತಿಯ ಮೇಲೆ ಟ್ರಂಪ್ ಕಣ್ಣಿಟ್ಟಿದ್ದು, ಈ ಪ್ರಶಸ್ತಿಯನ್ನು ತಮ್ಮದಾಗಿಸುವ ಹುನ್ನಾರದಿಂದ ಶಾಂತಿ ಒಪ್ಪಂದ ಘೋಷಿಸಿದ್ದಾರೆಯೇ ಎಂಬ ಗುಮಾನಿಯೂ ಇದೆ. ಗಾಜಾ ಶಾಂತಿ ಯೋಜನೆ ಯಶಸ್ವಿಯಾದರೆ ಟ್ರಂಪ್ ನೊಬೆಲ್ ಶಾಂತಿ ಪ್ರಶಸ್ತಿಯನ್ನು ಗೆಲ್ಲಬಹುದೇ ಎಂಬ ಪ್ರಶ್ನೆ ಎದ್ದಿದೆ.
ನೊಬೆಲ್ ಪ್ರಶಸ್ತಿಯ ಬೆನ್ನಟ್ಟುತ್ತಿರುವ ಟ್ರಂಪ್!
ಟ್ರಂಪ್ ವರ್ಷಗಳಿಂದ ನೊಬೆಲ್ ಪ್ರಶಸ್ತಿಯನ್ನು ಬೆನ್ನಟ್ಟುತ್ತಿದ್ದಾರೆ. 2019 ರಲ್ಲಿ, ಇಸ್ರೇಲ್ ಮತ್ತು ಅರಬ್ ರಾಷ್ಟ್ರಗಳ ನಡುವಿನ ಅಬ್ರಹಾಂ ಒಪ್ಪಂದಗಳಿಗಾಗಿ ಅವರು ಅದಕ್ಕೆ ಅರ್ಹರು ಎಂದು ಸಹ ಉಲ್ಲೇಖಿಸಿದ್ದರು. ಈ ಬಾರಿ, ಅವರು ಮತ್ತೊಮ್ಮೆ ಬಹಿರಂಗವಾಗಿ ಸುಳಿವು ನೀಡುತ್ತಿದ್ದು ಇದು ಯುಎಸ್ ಖ್ಯಾತಿಯ ಪ್ರಶ್ನೆ ಎಂದು ಹೇಳುತ್ತಾರೆ.
