ಉದಯವಾಹಿನಿ, ಆಫ್ರಿಕಾದ ಮಹಾರಾಜ ತಮ್ಮ ಸಂಪ್ರದಾಯಿಕ ಉಡುಗೆಯಲ್ಲಿ ಮೂರು ತಿಂಗಳ ಹಿಂದೆ ಯುಎಇ ಗೆ ಭೇಟಿ ನೀಡಿ ತವರಿಗೆ ವಾಪಸ್ ಆಗಿದ್ದಾರೆ. ಸದ್ಯ ಈ ಸಂಬಂಧದ ವಿಡಿಯೋವೊಂದು ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗುತ್ತಿತ್ತು. ಈ ವಿಡಿಯೋದ ವಿಶೇಷತೆ ಏನು ಅಂದರೆ ಈ ಆಫ್ರಿಕಾದ ಮಹಾರಾಜ ಒಬ್ಬರಲ್ಲ, ಇಬ್ಬರಲ್ಲ ಒಟ್ಟು 15 ಹೆಂಡತಿಯರೊಂದಿಗೆ ಯುಎಇಗೆ ಭೇಟಿ ನೀಡಿದ್ದಾರೆ. ಇದು ಅಲ್ಲದೇ..
ಆಫ್ರಿಕಾ ಖಂಡದಲ್ಲಿ ಬರುವಂತಹ ಈಸ್ವತಿನಿ ಎನ್ನುವ ರಾಷ್ಟ್ರದ ಮಹಾರಾಜ ಆಗಿರುವ ಎಂಸ್ವತಿ III ಅವರು ತಮ್ಮ ಖಾಸಗಿ ಜೆಟ್​ ಮೂಲಕ ಯುಎಇಯ ಅಬುಧಾಬಿಯ ಏರ್​ಪೋರ್ಟ್​ಗೆ ಬಂದಿಳಿದಿದ್ದರು. ಈ ಮಹಾರಾಜ ಬರಬೇಕಾದರೆ ಒಬ್ಬರೇ ಬಂದಿರಲಿಲ್ಲ ಎನ್ನುವುದು ಇಲ್ಲಿ ಮುಖ್ಯವಾಗಿ ಗಮನಿಸಬೇಕು. ಅಂದರೆ ಇವರ ಜೊತೆ ಎಷ್ಟು ಜನ ಯುಎಇಗೆ ಆಗಮಿಸಿದ್ದರು ಎನ್ನುವುದು ಇದೀಗ ಬಹಿರಂಗಗೊಂಡಿದೆ.
ಎಸ್ವತಿನಿ ರಾಷ್ಟ್ರದ ಮಹಾರಾಜ ಎಂಸ್ವತಿ III ಅವರು ಯುಎಇ ಪ್ರವಾಸಕ್ಕೆ ಬರಬೇಕಾದರೆ ತನ್ನ 15 ಹೆಂಡತಿಯರು, 30 ಮಕ್ಕಳನ್ನು ಕರೆದುಕೊಂಡು ಬಂದಿದ್ದರು. ಈ ರಾಜನಿಗೆ ಒಟ್ಟು 16 ಹೆಂಡತಿಯರು ಇದ್ದು ಬರಬೇಕಾದರೆ ಒಬ್ಬ ಹೆಂಡತಿಯನ್ನ ಬಿಟ್ಟು ಬಂದಿದ್ದರು. ಆದರೆ ಇದಕ್ಕೆ ಕಾರಣ ಏನು ಎಂಬುದು ತಿಳಿದಿಲ್ಲ. ತಾನೂ ಸೇರಿ 15 ಪತ್ನಿಯರನ್ನ ನೋಡಿಕೊಳ್ಳಲು 100 ಜನ ಸಹಾಯಕರನ್ನು ಕರೆದುಕೊಂಡು ಬಂದಿದ್ದರು ಎನ್ನುವುದು ಇನ್ನೊಂದು ಅಚ್ಚರಿಯಾಗಿದೆ.
ಎಂಸ್ವತಿ III ಇವರಿಗೆ 16 ಪತ್ನಿಯರು ಇದ್ದು 45 ಮಕ್ಕಳು ಇದ್ದಾರೆ. ಇದರಲ್ಲಿ 30 ಮಕ್ಕಳು ಮಾತ್ರ ಯುಎಇ ಪ್ರವಾಸವನ್ನು ಎಂಜಾಯ್ ಮಾಡಿದ್ದಾರೆ. ಇನ್ನೊಂದು ಸಂಗತಿ ಎಂದರೆ ಎಂಸ್ವತಿ III ಇವರ ತಂದೆ ಸೋಬುಜಾ II ಇವರಿಗೆ 50, 60 ಅಲ್ಲವೇ ಅಲ್ಲ, ಬರೋಬ್ಬರಿ 70 ಹೆಂಡತಿಯರು ಇದ್ದರು. ಇವರಿಗೆ ಒಟ್ಟು 210 ಮಕ್ಕಳು ಇದ್ದರು ಎಂದು ಹೇಳಲಾಗುತ್ತಿದೆ. ಹಲವಾರು ವರ್ಷಗಳಿಂದ ಎಸ್ವತಿನಿ ರಾಷ್ಟ್ರದಲ್ಲಿ ಇವರ ಕುಟುಂಬವೇ ಆಡಳಿತವನ್ನು ನೋಡಿಕೊಳ್ಳುತ್ತಿದೆ.
ಐಷಾರಾಮಿಯಾಗಿ ಯುಎಇಗೆ ಭೇಟಿ ನೀಡಿದ್ದಕ್ಕೆ ಹಲವಾರು ಟೀಕೆಗಳು ಕೇಳಿ ಬರುತ್ತಿವೆ. ಇವರ ವೈಭೋಗದ ಜೀವನಶೈಲಿಯಿಂದ ಅಲ್ಲಿನ ಜನರು ಕತ್ತಲಲ್ಲಿ ಬದುಕು ಕಳೆಯುತ್ತಿದ್ದಾರೆ. ನಾಗರಿಕರು ಶಿಕ್ಷಣ ವಂಚಿತರಾಗಿದ್ದಾರೆ. ರಾಷ್ಟ್ರದಲ್ಲಿ ಅನಾರೋಗ್ಯ ಕಾಡುತ್ತಿದ್ದು ಔಷಧಿ ಇಲ್ಲದೇ ಜೀವ ಕಳೆದುಕೊಳ್ಳುತ್ತಿದ್ದಾರೆ ಎನ್ನಲಾಗಿದೆ. ಈ ರಾಜ ಖಾಸಗಿ ಜೆಟ್​ ಹೊಂದಲು ಇವರ ರಾಷ್ಟ್ರ ಅಷ್ಟೊಂದು ಶ್ರೀಮಂತಿಕೆಯನ್ನು ಹೊಂದಿದೆಯಾ?. ಜನರು ಹಸಿವಿನಿಂದ ನರಳುವಾಗ ಈ ವಿಲಾಸಿ ಪ್ರವಾಸ ಯಾಕೆ ಎಂದು ಕೆಲವರು ಪ್ರಶ್ನೆ ಮಾಡುತ್ತಿದ್ದಾರೆ.

Leave a Reply

Your email address will not be published. Required fields are marked *

error: Content is protected !!