ಉದಯವಾಹಿನಿ, ಕಿಚ್ಚ ಸುದೀಪ್ ನಟಿಸುತ್ತಿರುವ ಬಹುನಿರೀಕ್ಷಿತ ಮಾರ್ಕ್ ಚಿತ್ರದ ಮೊದಲ ಹಾಡು ರಿಲೀಸ್ ಆಗಿದೆ. ಅನೂಪ್ ಭಂಡಾರಿ ಹಾಡಿಗೆ ಸಾಹಿತ್ಯ ಒದಗಿಸಿದ್ದಾರೆ. ವಿಜಯ್ ಪ್ರಕಾಶ್, ಅಜನೀಶ್ ಲೋಕನಾಥ್ ಹಾಗೂ ಅನಿರುದ್ಧ ಶಾಸ್ತ್ರಿ ಕಂಠ ಕುಣಿಸಿದ್ದಾರೆ.
ಅಜನೀಶ್ ಲೋಕನಾಥ್ ಟ್ಯೂನ್ ಹಾಕಿದ್ದು, ಸುದೀಪ್ ಪಾತ್ರದ ಮ್ಯಾನರಿಸಂನ್ನು ಈ ಹಾಡಿನಲ್ಲಿ ಕಟ್ಟಿಕೊಡಲಾಗಿದೆ. `ಮಾರ್ಕ್’ ಸಿನಿಮಾದ ಸೈಕೋ ಸೈತಾನ್ ಗೀತೆಗೆ ಕಿಚ್ಚ ಸುದೀಪ್ ಭರ್ಜರಿಯಾಗಿ ಕುಣಿದಿದ್ದಾರೆ.
ಸಾಂಗ್ ರಿಲೀಸ್ ಆದ ಬೆನ್ನಲ್ಲೇ ಮಾರ್ಕ್ ಸಿನಿಮಾ ತಂಡ ಸಿನಿಮಾ ಪ್ರೇಮಿಗಳಿಗೆ ಹುಕ್‌ಸ್ಟೆಪ್ ಡ್ಯಾನ್ಸ್ ಚಾಲೆಂಜ್ ನೀಡಿದೆ. ಈ ಸಾಂಗ್ ಪ್ಲೇ ಮಾಡಿಕೊಂಡು, ಹುಕ್ ಸ್ಟೆಪ್ ಹಾಕಬೇಕು. ಕಿಚ್ಚ ಸುದೀಪ್ ಅವರು ಸಾಂಗ್‌ನಲ್ಲಿ ಹಾಕಿದ ಸ್ಟೆಪ್‌ಗಳಲ್ಲಿ ಯಾವುದಾದರೂ ಆಯ್ಕೆ ಮಾಡಿಕೊಂಡು ನೀವೂ ಡ್ಯಾನ್ಸ್ ಮಾಡಬೇಕು. ಬಳಿಕ ಇದನ್ನ ನಿಮ್ಮ ಇನ್‌ಸ್ಟಾಗ್ರಾಂ ಅಕೌಂಟ್‌ನಲ್ಲಿ ಹ್ಯಾಷ್‌ಟ್ಯಾಗ್ ಜೊತೆ ಪೋಸ್ಟ್ ಮಾಡಬೇಕು. ಅತ್ಯುತ್ತಮ ರೀಲ್ಸ್ ಚಿತ್ರತಂಡದ ಆಫಿಷಿಯಲ್ ಇನ್‌ಸ್ಟಾ ಪೇಜ್‌ನಲ್ಲಿ ಶೇರ್ ಮಾಡಿ ಅವರಿಗೆ ಬಹುಮಾನ ನೀಡಲಾಗುತ್ತದೆ ಎಂದು ಚಿತ್ರ ತಂಡ ಹೇಳಿದೆ.
