ಉದಯವಾಹಿನಿ, ಸೆಲೆಬ್ರೆಟಿಗಳನ್ನ ನೋಡೋದಕ್ಕೆ ಫ್ಯಾನ್ಸ್ ಮುಗಿಬೀಳೋದು ಸಹಜ. ಆದ್ರೆ ಅಭಿಮಾನಿಗಳ ಅತ್ಯುತ್ಸಾಹ ಬಹಳಷ್ಟು ಸಲ ನಟ-ನಟಿಯರಿಗೆ ಸಮಸ್ಯೆ ತಂದೊಡ್ಡಿರುವುದೂ ಉಂಟು ಇದಕ್ಕೆ ನಟಿ ನಿಧಿ ಅಗರ್ವಾಲ್ ಕೂಡ ಹೊರತಾಗಿಲ್ಲ. ಪ್ರಭಾಸ್ ನಟನೆಯ ‘ದಿ ರಾಜಾಸಾಬ್’ ಸಾಂಗ್ ರಿಲೀಸ್ ಕಾರ್ಯಕ್ರಮಕ್ಕೆ ಆಗಮಿಸಿದ್ದ ನಾಯಕಿ ನಿಧಿ ಅಗರ್ವಾಲ್ ವಾಪಸ್ ತೆರಳುವಾಗ ಕಹಿ ಅನುಭವ ಉಂಟಾಗಿದೆ. ಫ್ಯಾನ್ಸ್ ಕ್ರೌಡ್ ಮಧ್ಯೆ ನಟಿ ಸಿಕ್ಕಿಕೊಂಡು ಭಾರೀ ಕಸಿವಿಸಿ ಅನುಭವಿಸಿದ್ದಾರೆ. ಈ ಕುರಿತ ವಿಡಿಯೋ ಈಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
‘ದಿ ರಾಜಾ ಸಾಬ್’ ಚಿತ್ರದ ʻಸಹನಾ ಸಹನಾʼ 2ನೇ ಹಾಡು ನಿನ್ನೆ ಹೈದರಾಬಾದ್‌ನಲ್ಲಿ ಅದ್ಧೂರಿಯಾಗಿ ರಿಲೀಸ್ ಆಯ್ತು. ಹೈದರಾಬಾದ್‌ನ ಮಾಲ್‌ವೊಂದರಲ್ಲಿ ನಡೆದ ಸಮಾರಂಭದಲ್ಲಿ ಸಾವಿರಾರು ಅಭಿಮಾನಿಗಳ ಸಮ್ಮುಖದಲ್ಲಿ ಈ ಮೆಲೋಡಿ ಹಾಡನ್ನ ರಿಲೀಸ್ ಮಾಡಲಾಗಿತ್ತು. ಪ್ರಭಾಸ್ ಜೊತೆ ಈ ಚಿತ್ರದಲ್ಲಿ ನಿಧಿ ಅಗರ್ವಾಲ್, ಮಾಳವಿಕಾ ಮೋಹನನ್, ರಿದ್ಧಿ ಕುಮಾರ್ ನಾಯಕಿಯರಾಗಿ ನಟಿಸಿದ್ದಾರೆ. ಎಸ್. ತಮನ್ ಸಂಗೀತ ಈ ಹಾರರ್ ಕಾಮಿಡಿ ಚಿತ್ರಕ್ಕಿದೆ.
