ಉದಯವಾಹಿನಿ, ಬೀಜಿಂಗ್ : ಸಾಮಾನ್ಯವಾಗಿ ವಯಸ್ಸಾದಂತೆ ಆರೋಗ್ಯ ಸಮಸ್ಯೆಳು ಕೂಡ ಬೆನ್ನ ಹಿಂದೆಯೇ ಬರುತ್ತವೆ. ಚೀನಾದ 82 ವರ್ಷದ ಜಾಂಗ್ ಎಂಬ ಮಹಿಳೆಗೆ ಕೂಡ ವಿಪರೀತ ಬೆನ್ನು ನೋವಿನ ಸಮಸ್ಯೆ ಇತ್ತು. ಅದನ್ನು ಗುಣಪಡಿಸಿಕೊಳ್ಳಲು 8 ಜೀವಂತ ಕಪ್ಪೆಗಳನ್ನು ನುಂಗಿರುವ ಘಟನೆ ನಡೆದಿದೆ. ಮಹಿಳೆಗೆ ಸೆಪ್ಟೆಂಬರ್ ಆರಂಭದಲ್ಲಿ ತೀವ್ರ ಹೊಟ್ಟೆನೋವು ಕಾಣಿಸಿಕೊಂಡಿತ್ತು, ಅವರನ್ನು ಝೆಜಿಯಾಂಗ್ ಪ್ರಾಂತ್ಯದ ಹ್ಯಾಂಗ್​ಝೌ ಆಸ್ಪತ್ರೆಗೆ ದಾಖಲಿಸಲಾಗಿತ್ತು ಎಂದು ಹ್ಯಾಂಗ್‌ಝೌ ಡೈಲಿಯನ್ನು ಉಲ್ಲೇಖಿಸಿ ಸೌತ್ ಚೀನಾ ಮಾರ್ನಿಂಗ್ ಪೋಸ್ಟ್ ವರದಿ ಮಾಡಿದೆ.
ಜಾಂಗ್ ಅವರ ಮಗನನ್ನು ವಿಚಾರಿಸಿದಾಗ ತನ್ನ ತಾಯಿ 8 ಕಪ್ಪೆಗಳನ್ನು ನುಂಗಿದ್ದಳು ಎಂದು ಹೇಳಿದಾಗ ಒಮ್ಮೆ ವೈದ್ಯರು ಬೆಚ್ಚಿ ಬಿದ್ದಿದ್ದರು. ಈಗ ತೀವ್ರವಾದ ನೋವು ಅವಳಿಗೆ ನಡೆಯಲು ಸಾಧ್ಯವಾಗುತ್ತಿಲ್ಲ ಎಂದು ಮಗ ಹೇಳಿದ್ದಾರೆ.
ಜಾಂಗ್ ಸ್ವಲ್ಪ ಸಮಯದಿಂದ ಹರ್ನಿಯೇಟೆಡ್ ಡಿಸ್ಕ್ ಸಮಸ್ಯೆಯಿಂದ ಬಳಲುತ್ತಿದ್ದಳು ಮತ್ತು ಜೀವಂತ ಕಪ್ಪೆಗಳನ್ನು ತಿನ್ನುವುದರಿಂದ ಅವಳ ನೋವು ಕಡಿಮೆಯಾಗುತ್ತದೆ ಎಂದು ಯಾರೋ ಹೇಳಿದ್ದರು. ಆಕೆ ತನ್ನ ಮಗನಿಗೆ ಕಾರಣ ವಿವರಿಸದೆ ತನಗೆ ಕಪ್ಪೆ ತಂದುಕೊಡು ಎಂದು ಕೇಳಿದ್ದಳು.
ಆಕೆಯ ಕುಟುಂಬದವರು ಕಪ್ಪೆಗಳನ್ನು ಹಿಡಿದು ತಂದುಕೊಟ್ಟರು, ಜಾಂಗ್ ಮೊದಲ ದಿನದಲ್ಲಿ ಮೂರು ಕಪ್ಪೆಗಳನ್ನು ಮತ್ತು ಮರುದಿನ ಐದು ಕಪ್ಪೆಗಳನ್ನು ನುಂಗಿದ್ದಾಳೆ. ಎಲ್ಲವೂ ದೊಡ್ಡ ಕಪ್ಪೆಗಳಾಗಿದ್ದು ವ್ಯಕ್ತಿಯ ಅಂಗೈಯ ಗಾತ್ರಕ್ಕಿಂತ ಚಿಕ್ಕದಾಗಿತ್ತು ಎಂದು ಹೇಳಿದ್ದಾರೆ. ಆರಂಭದಲ್ಲಿ ಜಾಂಗ್ ಅಸ್ವಸ್ಥತೆ ಅನುಭವಿಸಿದರು, ಆದರೆ ನಂತರ ಕೆಲವು ದಿನಗಳಲ್ಲಿ ನೋವು ಹೆಚ್ಚಾಗಿತ್ತು, ಆಕೆ ಸ್ಥಿತಿ ನೋಡ ನೋಡುತ್ತಾ ತೀರಾ ಹದಗೆಡಲು ಶುರುವಾಯಿತು. ಆಕೆ ತನ್ನ ಕುಟುಂಬದವ ಮುಂದೆ ನನಗೆ ಇನ್ನು ತಡೆಯೋಕೆ ಆಗಲ್ಲ ಆಸ್ಪತ್ರೆಗೆ ಹೋಗೋಣವೆಂದಳು. ಕೂಡಲೇ ಆಕೆಯನ್ನು ಆಸ್ಪತ್ರೆಗೆ ದಾಖಲಿಸಲಾಯಿತು.

Leave a Reply

Your email address will not be published. Required fields are marked *

error: Content is protected !!