ಉದಯವಾಹಿನಿ, ಸ್ಟಟ್ಗರ್ಟ್, : ನವ ಭಾರತದ ಬಗ್ಗೆ ವಿದೇಶಿಯರಿಗೆ ಎಷ್ಟು ಕುತೂಹಲವಿದೆ ಎಂಬುದರ ಕುರಿತು ಟಿವಿ9 ನೆಟ್‌ವರ್ಕ್ ಸಿಇಒ, ಎಂಡಿ ಬರುಣ್ ದಾಸ್ ಮಾತನಾಡಿದ್ದಾರೆ. ಟಿವಿ9 ನೆಟ್‌ವರ್ಕ್ ನ್ಯೂಸ್9 ಗ್ಲೋಬಲ್ ಶೃಂಗಸಭೆ ಜರ್ಮನಿಯಲ್ಲಿ ಆಯೋಜಿಸಿದೆ. ಈ ಬಾರಿ ಸಮ್ಮೇಳನ ಜರ್ಮನಿಯ ಸ್ಟಟ್‌ಗಾರ್ಟ್‌ನಲ್ಲಿ ಆರಂಭಗೊಂಡಿದೆ.
ಈ ಸಂದರ್ಭದಲ್ಲಿ ನವ ಭಾರತದ ಬಗ್ಗೆ ಮಾತನಾಡಿರುವ ಬರುಣ್ ದಾಸ್, ನವ ಭಾರತದ ಬಗ್ಗೆ ಕುತೂಹಲ ಹೊಂದಿರುವ ವಿದೇಶಿಯರನ್ನು ನಾನು ಹೆಚ್ಚಾಗಿ ಭೇಟಿಯಾಗಿದ್ದೇನೆ. ಫ್ರಾಂಕ್‌ಫರ್ಟ್‌ಗೆ ವಿಮಾನದಲ್ಲಿ ಇತ್ತೀಚೆಗೆ ನಡೆದ ಒಂದು ಮಾತುಕತೆ ಸದಾ ನನ್ನ ನೆನಪಿನಲ್ಲಿ ಉಳಿಯುವಂಥದ್ದಾಗಿದೆ ಎಂದು ಹೇಳಿದ್ದಾರೆ. ‘‘ಒಬ್ಬ ಜರ್ಮನ್ ವ್ಯಕ್ತಿಯ ಪಕ್ಕದಲ್ಲಿ ನಾನು ಕುಳಿತಿದ್ದೆ, ಅವರು ನವ ಭಾರತದ ಬಗ್ಗೆ ನಾನು ಅಧ್ಯಯನ ಮಾಡುತ್ತಿದ್ದೇನೆ ಎಂದು ಹೇಳಿದರು.
ತಕ್ಷಣವೇ ಅವರು ನವ ಭಾರತದ ಬಗ್ಗೆ ನಿಮ್ಮ ಅಭಿಪ್ರಾಯವೇನು ಎಂದು ಕೇಳಿಯೇ ಬಿಟ್ಟರು. ಇದು ಹೆಚ್ಚು ಆಲೋಚನೆಗೆ ಒಳಪಡಿಸುವ ಪ್ರಶ್ನೆಯಾಗಿರದಿದ್ದರೂ, ಕೇಳಿದವರ ಬುದ್ಧಿವಂತಿಕೆ ಅದರಲ್ಲಿತ್ತು. ಒಂದು ಕ್ಷಣ ಯೋಚಿಸುವಂತೆ ಮಾಡಿತು. ಬಳಿಕ ನಾನು ಆ ವ್ಯಕ್ತಿಗೆ ಆಧುನಿಕತೆಗೆ ಬೇಗ ತೆರೆದುಕೊಳ್ಳುವ ಸಾಮರ್ಥ್ಯ ಭಾರತಕ್ಕಿದೆ. ಜತೆಗೆ ಭಾರತೀಯತೆಯು ಎಂಬುದು ಎಲ್ಲವನ್ನೂ ಒಳಗೊಳ್ಳುವುದು ಮತ್ತು ಎಲ್ಲರನ್ನೂ ಒಟ್ಟಿಗೆ ಕೊಂಡೊಯ್ಯುವುದಾಗಿದೆ’’ ಎಂದು ಹೇಳಿದ್ದಾಗಿ ಬರುಣ್ ದಾಸ್ ಹೇಳಿದರು.
ಇಡೀ ಜಗತ್ತು ಈಗ ಒಂದು ತತ್ವ, ಶಾಂತಿ ಮತ್ತು ಸಮೃದ್ಧಿಯನ್ನು ಸಾಧಿಸುವ ಏಕೈಕ ಮಾರ್ಗದಲ್ಲಿ ನಡೆಯುತ್ತಿದೆ. ಎಲ್ಲರೂ ಒಗ್ಗಟ್ಟಾಗಿರಬೇಕು. ಆಧುನಿಕತೆಯತ್ತ ಭಾರತ ಹೇಗೆ ವಾಲುತ್ತಿದೆ ಎಂಬುದಕ್ಕೆ ವೈರ್‌ಲೆಸ್ ಮತ್ತು ಡಿಜಿಟಲ್ ತಂತ್ರಜ್ಞಾನಗಳ ಅಳವಡಿಕೆಯಲ್ಲೇ ನಾವು ಅರ್ಥ ಮಾಡಿಕೊಳ್ಳಬಹುದು.
